ಬೆಂಗಳೂರು, [ಜ. 05]: ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ವಿಚಾರಕ್ಕೆ ನಮ್ಮ ಮನೆ ಮೇಲೆ ದಾಳಿ ನಡೆದಿದೆ ಅಂತೆಲ್ಲಾ ಊಹಾಪೋಹಾ ಹಬ್ಬಿಸಬಾರದು ಎಂದು ನಟ ಯಶ್​ ಹೇಳಿದ್ದಾರೆ.

 ಐಟಿ ದಾಳಿ ಕುರಿತಂತೆ ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್​, ದಾಳಿ ಸಂಬಂಧ ಕೇವಲ ಊಹಾಪೋಹಗಳ ಮಾತೇ ಕೇಳಿ ಬರುತ್ತಿವೆ ಎಂದು ಅಸಮಾಧಾನ ಹೊರಕಿದರು.

ಯಶ್ ಮನೆಯಲ್ಲಿ ಐಟಿ ಶೋಧ ಕಾರ್ಯ ಅಂತ್ಯ: ಸಿಕ್ಕಿದ್ದೇನು?

ಅಷ್ಟು ಸಿಕ್ತು ಇಷ್ಟು ಸಿಕ್ತು ಎಂದು ಊಹಾಪೋಹಗಳನ್ನ ಹಬ್ಬಿಸಲಾಗಿದೆ.  ಬುಲ್ ಷಿಟ್​ಗಳನ್ನ ತೋರಿಸ್ಬಾರ್ದು. ಎರಡು ದಿನ ನನ್ನ ಹೆಂಡತಿ ಹಾಗೂ ಮಗಳನ್ನ ಬಿಟ್ಟಿದ್ದದ್ದು ಕಷ್ಟವಾಗಿತ್ತು. 

ಯಶ್ ಮನೆಯಲ್ಲಿಯೇ ಐಟಿ ಅಧಿಕಾರಿಗಳು : ಮುಂದೇನು..?

ಅಭಿಮಾನಿಗಳು ಹೊರಗೆ ಜಮಾಯಿಸಿದ್ದರು ಎಂದು ಕೇಳಿಪಟ್ಟೇ/ ಆದರೆ, ಅವರನ್ನು ಭೇಟಿ ಮಾಡಲು ಆಗಲಿಲ್ಲ. ಆ ಎಲ್ಲಾ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು. 

ಐಟಿ ಅಧಿಕಾರಿಗಳ‌ ಎಲ್ಲಾ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಮುಂದೆ ಈ ವಿಚಾರಕ್ಕೆ ಕರೆದ್ರೆ ಖಂಡಿತ ಹೋಗುತ್ತೇನೆ ಎಂದರು.

ಇದೇ ವೇಳೆ, ಹೆಂಡತಿ ಮಗು ಜೊತೆ ಸ್ವಲ್ಪ ಸಮಯ ಕಳೆದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದರು ಹೇಳಿದರು.