ಭಾರ್ಗವಿ ಎಲ್​ಎಲ್​ಬಿ ಖ್ಯಾತಿಯ ನಟಿ ರಾಧಾ ಭಗವತಿ ಅವರು ಎರಡು ತಿಂಗಳ ಬ್ರೇಕ್ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಲರ್ಸ್ ಕನ್ನಡದ 'ಮುದ್ದು ಸೊಸೆ' ಧಾರಾವಾಹಿಯಲ್ಲಿ ಅವರು ಲಾಯರ್ ಆಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೈವ್ ಬಂದು ಈ ಸಿಹಿಸುದ್ದಿ ಹಂಚಿಕೊಂಡಿರುವ ಅವರು, ವೀಕ್ಷಕರಿಗೆ ಒಂದು ಸರ್‌ಪ್ರೈಸ್ ಕೂಡ ಕಾದಿದೆ ಎಂದಿದ್ದಾರೆ.

ನಟಿ ರಾಧಾ ಭಗವತಿ ಎಂದರೆ ಕೆಲವರಿಗೆ ತಿಳಿಯಲ್ಲಿಕ್ಕಿಲ್ಲ. ಅದೇ ಜೀ ಕನ್ನಡದಲ್ಲಿ ಹಳೆಯ ಮಲ್ಲಿಯಾಗಿ ಮಿಂಚಿದ್ದ, ಕೊನೆಗೆ ಕಲರ್ಸ್ ಕನ್ನಡ ಸೀರಿಯಲ್​ನಲ್ಲಿ ಭಾರ್ಗವಿ ಎಲ್​ಎಲ್​ಬಿಯಲ್ಲಿ ಭಾರ್ಗವಿಯಾಗಿ ಲಾಯರ್​ ಪಾತ್ರ ಮಾಡುವ ಮೂಲಕ ಮಿಂಚಿದ್ದ ನಟಿ ಭಾರ್ಗವಿ ಅವರು ಸೀರಿಯಲ್​ನಿಂದ ದೂರ ಆಗಿ ಎರಡು ತಿಂಗಳಾಗಿದೆ. ಈ ಸೀರಿಯಲ್​ ಮುಗಿದ ಬಳಿಕ ಅವರು ಮತ್ತೆ ಕಾಣಿಸಿಕೊಂಡಿರಲಿಲ್ಲ. ಅಷ್ಟಕ್ಕೂ ಅವರ ಮದುವೆ ಶೀಘ್ರದಲ್ಲಿ ಅಮೃತಧಾರೆ ಜೈದೇವ್​ ಅರ್ಥಾತ್​ ರಾಣವ್​ ಗೌಡ ಅವರ ಜೊತೆ ನಡೆಯಲಿದೆ. ಡೇಟ್​ ಇನ್ನೂ ಅವರು ಅನೌನ್ಸ್​ ಮಾಡಲಿಲ್ಲ. ಅಮೃತಧಾರೆ ಇನ್ನೇನು ಮುಗಿಯುವಂತೆ ಕಾಣುತ್ತಿದ್ದು ಸೀರಿಯಲ್​ ಮುಗಿದ ಮೇಲೆ ಮದುವೆಯಾಗುತ್ತಾರೆ ಎನ್ನಲಾಗಿದೆ.

ಇದರ ನಡುವೆಯೇ, ಇದೀಗ ನಟಿ ರಾಧಾ ಭಗವತಿ ಅವರು ಲೈವ್​ಗೆ ಬಂದು ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಅದೇನೆಂದರೆ, ನಿಮ್ಮನ್ನು ಮತ್ತೆ ಸೀರಿಯಲ್​ನಲ್ಲಿ ನೋಡಬೇಕು ಎಂದು ಒಂದೇ ಸಮನೆ ಗೋಗರೆಯುತ್ತಿದ್ದ ವೀಕ್ಷಕರಿಗೆ ಗುಡ್​ನ್ಯೂಸ್​ ಕೊಟ್ಟಿರುವ ರಾಧಾ ಅವರು, ಕಲರ್ಸ್​ ಕನ್ನಡದ ಮುದ್ದುಸೊಸೆ (Muddu Sose) ಸೀರಿಯಲ್​ನಲ್ಲಿ ಗೆಸ್ಟ್​ ಅಪಿಯರೆನ್ಸ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಬಗ್ಗೆ ಹೇಳಲು ಅವರು ಲೈವ್​ನಲ್ಲಿ ಬಂದಿದ್ದಾರೆ. ಭಾರ್ಗವಿ ಎಲ್​ಎಲ್​ಬಿ ಮುಗಿದ ಮೇಲೆ ತುಂಬಾ ಬೇಜಾರು ಆಗಿತ್ತು. ಎರಡು ತಿಂಗಳಿನಿಂದ ಸೀರಿಯಲ್​ ಇರದೇ ಬೇಜಾರು ಆಯ್ತು. ಆದರೆ ಕಲರ್ಸ್​ ಕನ್ನಡ ಇನ್ನೊಂದು ಅವಕಾಶ ಕೊಡತ್ತೆ ಅಂತ ಅಂದುಕೊಂಡಿರಲಿಲ್ಲ. ಮುದ್ದು ಸೊಸೆ ಸೀರಿಯಲ್​ನಲ್ಲಿ ಈಗ ಅವಕಾಶ ಸಿಕ್ಕಿರುವುದು ತುಂಬಾ ಖುಷಿ ಕೊಟ್ಟಿದೆ ಎಂದಿದ್ದಾರೆ ನಟಿ.

ಲಾಯರ್​ ಆಗಿ ಎಂಟ್ರಿ

ಮುದ್ದು ಸೊಸೆಯಲ್ಲಿ ಗೆಸ್ಟ್​ ಅಪೀರಿಯೆನ್ಸ್​ ಮಾಡುತ್ತಿದ್ದೇನೆ. ಅದರಲ್ಲಿಯೂ ಲಾಯರ್​ ಆಗಿ ಮಿಂಚುತ್ತಿದ್ದೇನೆ. ಈ ಸೀರಿಯಲ್​ನನಲ್ಲಿ ಶಿವರಾಮೇಗೌಡರ ವಿರುದ್ಧ ಕೇಸ್​​ ನಡೆಯುತ್ತಿದೆ. ಮುದ್ದುಸೊಸೆ ಮತ್ತು ಗೌಡ್ರು ದೂರ ಆಗಿದ್ದಾರೆ. ಈ ಕೇಸ್​ ಸಾಲ್ವ್​ ಮಾಡಲು ನಾನು ಬರ್ತಾ ಇದ್ದೇನೆ. ವೀಕ್ಷಕರು ಭಾರ್ಗವಿ ಭಾರ್ಗವಿ ಎಂದು ಹೇಳುತ್ತಿರುವುದನ್ನು ಕೇಳಿ ಖುಷಿ ಆಗ್ತಿದೆ. ಆದ್ದರಿಂದ ನನ್ನ ಪಾತ್ರವನ್ನು ನೋಡುವಂತೆ ನಟಿ ಕೇಳಿಕೊಂಡಿದ್ದಾರೆ. ಇದೇ ವೇಳೆ, ಸರ್​ಪ್ರೈಸ್​ ಕೂಡ ಇದೆ. ಆದರೆ ಅದನ್ನು ಹೇಳುವುದಿಲ್ಲ. ನೀವೆಲ್ಲಾ ಸೀರಿಯಲ್​ ನೋಡಬೇಕು ಎಂದು ಅದನ್ನು ಹೇಳ್ತಾ ಇಲ್ಲ ಎಂದು ಕೂಡ ರಾಧಾ ಹೇಳಿದ್ದಾರೆ.

ನೀವೆಲ್ಲಾ ಮಿಸ್​ ಮಾಡಿಕೊಂಡಿದ್ದೀರಿ

ನೀವೆಲ್ಲಾ ಇಷ್ಟು ದಿನ ತುಂಬಾ ಮಿಸ್​ ಮಾಡಿಕೊಂಡಿದ್ದೀರಿ ಎಂದು ರಿ ಎಂದು ಭಾವಿಸಿದ್ದೇನೆ. ಮುದ್ದುಸೊಸೆ ಎಂಟ್ರಿ ಕೊಟ್ಟಿದ್ದಕ್ಕೆ ಖುಷಿಯಾಗಿದೆ ಅಂದುಕೊಂಡಿದ್ದೇನೆ. ಮತ್ತೆ ನನ್ನ ಲಾಯರ್​ ಆಗಿ ನೋಡುವ ಸನ್ನಿವೇಶ ಬಂದಿದೆ. ತುಂಬಾ ಖುಷಿಯಾಗ್ತಿದೆ. ಆ ಸೀನ್​ ಶೂಟ್​ ಮಾಡುವಾಗ ಭಾರ್ಗವಿ ಕೋರ್ಟ್​ ಸೀನ್​ ನೆನಪಾಯ್ತು. ಗೆಸ್ಟ್​ ಆಗಿ ಬರ್ತಾ ಇದ್ದೇನೆ. ಇಷ್ಟಪಟ್ಟು ಒಪ್ಪಿಕೊಂಡಿದ್ದೇನೆ. ನೀವೂ ಹಾರೈಸಿ ಎಂದು ನಟಿ ಹೇಳಿದ್ದಾರೆ.