ಅಮೃತಧಾರೆ ಸೀರಿಯಲ್ ಖ್ಯಾತಿಯ ರಾಣವ್ ಗೌಡ ಹಾಗೂ ನಟಿ ರಾಧಾ ಭಗವತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆರಂಭದಲ್ಲಿ ರಾಧಾ ಅವರ ಪ್ರೀತಿಯನ್ನು ರಾಣವ್ ನಿರಾಕರಿಸಿದ್ದರೂ, ನಂತರ ಅವರ ವ್ಯಕ್ತಿತ್ವ ಮೆಚ್ಚಿ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಜೋಡಿ ಮದುಮಕ್ಕಳಂತೆ ಫೋಟೋಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ.
ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial) ಜೈದೇನ ಪಾತ್ರವನ್ನು ಮೆಚ್ಚಿಕೊಳ್ಳದ ವೀಕ್ಷಕರೇ ಇಲ್ಲ. ಅಸಲಿಗೆ ಇದು ವಿಲನ್ ರೋಲ್ ಆದರೂ ನಟ ರಾಣವ್ ಗೌಡ ಅವರ ನಟನೆಯ ಜೊತೆ ಸ್ಯಾಂಡ್ಸಮ್ ನಟನನ್ನು ನೋಡಿ, ವಿಲನ್ಗೇ ಸಪೋರ್ಟ್ ಮಾಡ್ತಿರೋರು ಹೆಚ್ಚುಮಂದಿ. ಇದೀಗ ಅವರ ಮದುವೆ ಇದೇ ಸೀರಿಯಲ್ ಹಿಂದಿನ ಮಲ್ಲಿ ಹಾಗೂ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಭಾರ್ಗವಿಯಾಗಿದ್ದ ರಾಧಾ ಭಗವತಿ ಜೊತೆಗೆ ನಡೆಯಲಿದೆ. ಇವರಿಬ್ಬರೂ ಮದುವೆಯ ಡೇಟ್ ಇನ್ನೂ ಅನೌನ್ಸ್ ಮಾಡಿಲ್ಲವಾದರೂ ಶೀಘ್ರದಲ್ಲಿಯೇ ಮದುವೆ ಎನ್ನುವುದು ತಿಳಿದಿದೆ.
ಇದೀಗ ಈ ಜೋಡಿ ಮದುಮಕ್ಕಳ ರೂಪದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಸಲಿಗೆ ಈ ಫೋಟೋಶೂಟ್ ಸೀರೆ ಮಳಿಗೆಯೊಂದರ ಪೇಯ್ಡ್ ಪ್ರಮೋಷನ್ದ್ದು. ಇದರಲ್ಲಿ ಈ ಜೋಡಿ ಸಕತ್ ಮಿಂಚುತ್ತಿದ್ದು, ಶೀಘ್ರದಲ್ಲಿಯೇ ಮದುವೆಯ ಸುದ್ದಿ ಕೊಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇವರು ಇನ್ನೂ ತಮ್ಮ ಮದುವೆಯ ಡೇಟ್ ಅನೌನ್ಸ್ ಮಾಡಲಿಲ್ಲ. ರಾಧಾ ಭಗವತಿ ಅವರ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಮುಗಿದಿದ್ದು, ಸಿನಿಮಾದಲ್ಲಿ ಬಿಜಿಯಾಗಿದ್ದರೆ, ರಾಣವ್ ಕೂಡ ಅಮೃತಧಾರೆಯಲ್ಲಿ ಮಿಂಚುತ್ತಿದ್ದಾರೆ. ಈ ಸೀರಿಯಲ್ ಕೂಡ ಶೀಘ್ರ ಮುಗಿಯುವ ಹಂತದಲ್ಲಿದ್ದು, ಸೀರಿಯಲ್ ಮುಗಿದ ಮೇಲೆ ಮದುವೆಯೇ ಎನ್ನುವುದು ನೋಡಬೇಕಿದೆ.
ಇಂಟರೆಸ್ಟಿಂಗ್ ಲವ್ ಸ್ಟೋರಿ
ಅಷ್ಟಕ್ಕೂ ಇವರ ಲವ್ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇದೀಗ ಆರಂಭದಲ್ಲಿ ನಟಿ ರಾಧಾ ಭಗವತಿ ಅವರು ಪ್ರಪೋಸ್ ಮಾಡಿದಾಗ, ರಾಣವ್ ಬೇಡ ಎಂದ ಬಗ್ಗೆ ನಟಿ ಮಾತನಾಡಿದ್ದಾರೆ. ಸುಮನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ, ನನಗೆ ಗೊತ್ತಿಲ್ಲದೇ ಅವರ ಮೇಲೆ ಲವ್ ಆಯ್ತು, ಅವರ ಕ್ಯೂಟ್ನೆಸ್ ನನ್ನನ್ನ ಅಟ್ರ್ಯಾಕ್ಟ್ ಮಾಡಿತು. ಆದರೆ ಅವರ ಹಿನ್ನೆಲೆ ಏನೂ ಗೊತ್ತಿರಲಿಲ್ಲ. ಅವರು ಹಣವಂತರಾ, ಕಾರು, ಬಂಗ್ಲೆ ಇದ್ಯಾ ಏನೂ ಅರಿವು ಇರಲಿಲ್ಲ. ಮನಸ್ಸು ಅವರನ್ನು ಕೇಳುತ್ತಿತ್ತು ಅಷ್ಟೇ ಎಂದು ತಮಗೆ ಆರಂಭದಲ್ಲಿ ಆದ ಲವ್ ಫೀಲಿಂಗ್ಸ್ ಬಗ್ಗೆ ಹೇಳಿದ್ದಾರೆ.
ಅವರೇ ನನ್ನ ಗಂಡ ಎಂದು ಫಿಕ್ಸ್ ಆಗಿಬಿಟ್ಟಿದ್ದೆ
ಮನಸ್ಸು ಕೇಳದೇ ನಾನೇ ಒಂದು ದಿನ ನಾನು ಅವರಿಗೆ ಹೋಗಿ ಹೇಳಿಬಿಟ್ಟೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಈಗ ಸದ್ಯಕ್ಕೆ ಅದರ ಬಗ್ಗೆ ಏನೂ ಪ್ಲ್ಯಾನ್ಸ್ ಇಲ್ಲ, ಸಾರಿ ಅಂತ ಹೇಳಿಬಿಟ್ಟರು. ನನಗೆ ಆಗ ಏನು ಮಾತಾಡಬೇಕು ಅಂತ ಗೊತ್ತಾಗಿರ್ಲಿಲ್ಲ. ಕಂಪ್ಲೀಟ್ ಆಗಿ ಬ್ಲ್ಯಾಂಕ್ ಆಗಿಬಿಟ್ಟೆ. ಅದು ನನಗೆ ಹರ್ಟ್ ಆಯ್ತು ಎಂದು ನಟಿ ಹೇಳಿದ್ದಾರೆ.ಅವರು ನನ್ನ ಪ್ರೀತಿಯನ್ನ ರಿಜೆಕ್ಟ್ ಮಾಡಿದ್ದಾರೆ ಅಂತ ಗೊತ್ತಿದ್ರೂ ಕೂಡ, ಅವರ ಮೇಲೆ ಇದ್ದ ಪ್ರೀತಿ ಹೋಗ್ತಾನೆ ಇರ್ಲಿಲ್ಲ. ಮದುವೆ ಆದರೆ ಇವರನ್ನೇ ಆಗ್ತೀನಿ. ಇಲ್ಲದೇ ಇದ್ರೆ ಆ ಮದುವೆ ಅನ್ನೋ ಕಾನ್ಸೆಪ್ಟ್ ಬೇಡ ನನ್ನ ಜೀವನದಲ್ಲಿ ಅಂತ ನಾನು ಫಿಕ್ಸ್ ಅಗಿಬಿಟ್ಟಿದ್ದೆ. ಆದರೂ ಶೂಟಿಂಗ್ನಲ್ಲಿ ಏನೂ ಗೊತ್ತಿಲ್ಲದವರ ರೀತಿ ಭಾಗಿಯಾಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ರಾಣವ್ ಏನಂದ್ರು?
ಇದಕ್ಕೆ ರಾಣವ್ ಅವರು, ಮೊದಲು ಪಾತ್ರದ ಪರಿಚಯ ಆಗಿತ್ತು ಬಿಟ್ರೆ, ನಮ್ಮಿಬ್ಬರ ವ್ಯಕ್ತಿತ್ವದ ಪರಿಚಯ ಅಗಿರ್ಲಿಲ್ಲ. ಅವರಿಗೆ ಯಾವಾಗ ನನ್ನ ವ್ಯಕ್ತಿತ್ವದ ಪರಿಚಯ ಆಯ್ತೋ ಅವರಿಗೆ ನನ್ನ ಮೇಲೆ ಆಸೆ ಆಗೋಕೆ ಶುರುವಾಯ್ತು. ಅವರ ವ್ಯಕ್ತಿತ್ವದ ಪರಿಚಯ ನನಗೆ ಆಗಿದ್ರೂ ಕೂಡ ನಾನು ಅದರ ಮೇಲೆ ಗಮನ ಕೊಟ್ಟಿರಲಿಲ್ಲ. ಬಹುಶಃ ಗಮನ ಕೊಟ್ಟಿದಿದ್ರೆ ನನಗೇ ಮೊದಲು ಇವರ ಮೇಲೆ ಫೀಲಿಂಗ್ಸ್ ಶುರುವಾಗುತ್ತಿತ್ತೋ ಗೊತ್ತಿಲ್ಲ. ಅಷ್ಟಕ್ಕೂ ಇಂಥ ನಿರ್ಧಾರ ಏಕಾಏಕಿ ತೆಗೆದುಕೊಳ್ಳುವುದು ಅಲ್ಲವಲ್ಲ ಎಂದಿದ್ದಾರೆ. ಆದಕ್ಕೆ ಅವರು ಪ್ರಪೋಸ್ ಮಾಡಿದಾಗ ನಾನು ಒಪ್ಪಿಕೊಂಡಿರಲಿಲ್ಲ. ಆದರೆ, ಈಕೆಯ ವ್ಯಕ್ತಿತ್ವ ಬದಲಾಗಲಿಲ್ಲ ಅನ್ನೋದು ಗೊತ್ತಾಯ್ತು. ಆಮೇಲೆ ನಾನೇ ಇದಕ್ಕೆ ಒಪ್ಪಿಕೊಂಡೆ ಎಂದಿದ್ದಾರೆ. ಮುಂಚೆ ನನ್ನ ಜೊತೆಗೆ ಇವರ ಒಡನಾಟ ಹೇಗಿತ್ತೋ ಹಾಗೆ ಇತ್ತು. ಅದು ನನಗೆ ಇಷ್ಟ ಆಯ್ತು. ಅಲ್ಲಿಗೆ ನಮ್ಮ ಮದುವೆ ಫಿಕ್ಸ್ ಆಯ್ತು ಎಂದರು.


