ಕೋಟಿ ಗೆಲ್ಲುವ ಆಟ, ಖ್ಯಾತ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಾಧಿಪತಿ’ ಸೀಸನ್ 4 ಮುಕ್ತಾಯದ ಹಂತಕ್ಕೆ ಬಂದಿದೆ. ಸಾಕಷ್ಟು ಟ್ಯಾಲೆಂಟ್ ಗಳನ್ನು ಕರ್ನಾಟಕಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈ ವೇದಿಕೆಯದ್ದು. ಪವರ್ ಸ್ಟಾರ್ ಪುನೀತ್ ನಿರೂಪಣೆ,ಸ್ಪರ್ಧಿಗಳನ್ನು ನಡೆಸಿಕೊಳ್ಳುವ ರೀತಿ, ಸಮಜಾಯಿಷಿ ಎಲ್ಲವೂ ಕೋಟ್ಯಧಿಪತಿಗೆ ಕಳೆ ಇದ್ದಂಗೆ. ಇಷ್ಟು ದಿನ ಪ್ರಶ್ನೆ ಕೇಳುತ್ತಿದ್ದ ಪುನೀತ್ ಇದೀಗ ಹಾಟ್ ಸೀಟ್ ಮೇಲೆ ಕೂರಲಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು ಪ್ರಶ್ನಿಸಲಿದ್ದಾರೆ. 

ಕಷ್ಟ ಎಂದು ಬಂದ ಸ್ಪರ್ಧಿಗೆ ಕೈ ಹಿಡಿಯದ ಕೋಟ್ಯಧಿಪತಿ; 25 ಲಕ್ಷ ಜಸ್ಟ್ ಮಿಸ್!

‘ಕನ್ನಡದ ಕೋಟ್ಯಾಧಿಪತಿ‘ ಮುಕ್ತಾಯದ ಹಂತಕ್ಕೆ ಬಂದಿದ್ದು ಕೊನೆ ಎಪಿಸೋಡನ್ನು ರಚಿತಾ ರಾಮ್ ನಡೆಸಿಕೊಡಲಿದ್ದಾರೆ. ಪವರ್ ಸ್ಟಾರ್ ಪುನೀತ್, ಡಿಂಪಲ್ ಕ್ವೀನ್ ಇದ್ದ ಮೇಲೆ ಅಲ್ಲಿ ಒಂದಷ್ಟು ತಮಾಷೆ, ತಲೆಹರಟೆ, ಜೊತೆಗೆ ಕ್ವಿಜ್ ಇರಲಿದೆ. ಅಕ್ಟೋಬರ್ ಮೊದಲ ವಾರ ಟೆಲಿಕಾಸ್ಟ್ ಆಗುವ ಸಾಧ್ಯತೆ ಇದೆ. 

ಕನ್ನಡದ ಕೋಟ್ಯಧಿಪತಿ 4 ಮುಕ್ತಾಯದ ಹಂತದಲ್ಲಿ ಸುದೀಪ್ ಗೆಸ್ಟ್ ಅಪಿಯರೆನ್ಸ್ ಕೊಡುತ್ತಾರೆ ಎನ್ನಲಾಗಿತ್ತು. ಆದರೆ ಸುದೀಪ್ ಕೋಟಿಗೊಬ್ಬ-3 ಯಲ್ಲಿ ಬ್ಯುಸಿಯಾಗಿದ್ದರಿಂದ ರಚಿತಾ ರಾಮ್ ಅವರನ್ನು ರಿಪ್ಲೇಸ್ ಮಾಡಲಿದ್ದಾರೆ. 

ಕೋಟ್ಯಧಿಪತಿಯಲ್ಲಿ 25 ಲಕ್ಷದ ಪ್ರಶ್ನೆ ಕ್ವಿಟ್ ಮಾಡಿ 12.5 ಲಕ್ಷ ಸಾಕು ಎಂದ ಮಹಿಳೆ!

ಈ ಸೀಸನ್ ನಲ್ಲಿ ಯಾವ ಸ್ಪರ್ಧಿಯೂ 12.5 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಗೆದ್ದಿಲ್ಲ. ಮೊದಲೆರಡು ಸೀಸನ್ ನನ್ನು ಪುನೀತ್ ನಡೆಸಿಕೊಟ್ಟಿದ್ದರು. ಸೀಸನ್ 3 ಯನ್ನು ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದು ಸೀಸನ್ 4 ಗೆ ಮತ್ತೆ ಪುನೀತ್ ವಾಪಸ್ಸಾಗಿದ್ದಾರೆ.