ಕೋಟ್ಯಧಿಪತಿಯಲ್ಲಿ 25 ಲಕ್ಷದ ಪ್ರಶ್ನೆ ಕ್ವಿಟ್ ಮಾಡಿ 12.5 ಲಕ್ಷ ಸಾಕು ಎಂದ ಮಹಿಳೆ!

ಕೋಟ್ಯಧಿಪತಿಯಲ್ಲಿ ಪುನೀತ್ ಹಾಗೂ ವೀಕ್ಷಕರಿಗೆ ಅಚ್ಚರಿ ಮೂಡುವಂತಹ ಘಟನೆ ನಡೆದಿದೆ. ಫಟಾಫಟ್‌ ಅಂತ 12 ಪ್ರಶ್ನೆಗಳಿಗೆ ಉತ್ತರಿಸಿ 12.5 ಲಕ್ಷ ಗೆದ್ದ ಟೀಚರ್ 25 ಲಕ್ಷದ ಪ್ರಶ್ನೆ ಮಾತ್ರ ನೋ ಅಂದಿದ್ದಾರೆ.! ಏಕೆಂದು ಇಲ್ಲಿದೆ ನೋಡಿ...

Mysore based Devamma wins 12.5 lakhs in Kannadada Kotiyadhipathi colors kannada

ಜೀವನದಲ್ಲೊಂದು ಉದ್ದೇಶ, ಸಾಧಿಸಲೊಂದು ದಾರಿ, ಗೆದ್ದ ಹಣ ಜೀವನಕ್ಕೊಂದು ಭರವಸೆ ನೀಡುತ್ತದೆ. ನೂರಾರು ಕನಸು ಹೊತ್ತು ಬರುವವರಿಗೆ ನೆಲೆ ನೀಡುವುದು ಕಲರ್ಸ್ ಕನ್ನಡದ 'ಕನ್ನಡ ಕೋಟ್ಯಧಿಪತಿ' ಕಾರ್ಯಕ್ರಮ.

ಮೈಸೂರು ಹೆಚ್‌.ಡಿ. ಕೋಟೆ ಮೂಲದ ದೇವಮ್ಮ ಎಂಬ ಶಿಕ್ಷಕಿ ಮದುವೆಯಾಗಿ 6 ವರ್ಷವಾದರೂ ಮಕ್ಕಳಾಗದ ಕಾರಣ ಕೋಟ್ಯಧಿಪತಿಯಲ್ಲಿ ಸ್ಪರ್ಧಿಸಿ ಗೆದ್ದ ಹಣದಿಂದ IVF ಚಿಕಿತ್ಸೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಕೋಟ್ಯಧಿಪತಿಯಲ್ಲಿ ಸ್ಪರ್ಧಿಸುತ್ತಾರೆ.

ಕೋಟ್ಯಧಿಪತಿಯಲ್ಲಿ ಪುನೀತ್‌ಗೆ ಸವಾಲು ಹಾಕಿದ ಸ್ಪರ್ಧಿ!

 

ಚಿಕಿತ್ಸೆ ಮಾಡಿಸಿಕೊಳ್ಳಲು 5 ಲಕ್ಷ ರೂ ಹಣ ಬೇಕಿದ್ದು 6 ಲಕ್ಷ ರೂ ಗೆಲ್ಲಬೇಕೆಂಬ ಟಾರ್ಗೆಟ್‌ ನಿಂದ ಸ್ಪರ್ಧಿಸುತ್ತಾರೆ. ಸುಲಭವಾಗಿ 12 ಪ್ರಶ್ನೆಗಳಿಗೆ ಉತ್ತರಿಸಿ 12.5 ಹಣ ಸೇಫ್ ಮಾಡಿಕೊಂಡರು. ಆದರೆ ದೇವಮ್ಮಗೆ ಗೊಂದಲ ಸೃಷ್ಟಿಸಿದ್ದು ಮಾತ್ರ 25 ಲಕ್ಷದ ಪ್ರಶ್ನೆ. ಆದರೆ ಕ್ವಿಟ್ ಮಾಡಿದ ನಂತರ ತಿಳಿಯಿತು ದೇವಮ್ಮ ಗೊಂದಲದಲ್ಲಿದ್ದ ಉತ್ತರವೇ ಸರಿಯುತ್ತರವೆಂದು.

 

ಆ 25 ಲಕ್ಷದ ಪ್ರಶ್ನೆ ಯಾವುದು?

2011 ರ ಜನಗಣತಿ ಪ್ರಕಾರ 2001 ರ ಜನಗಣತಿಗೆ ಹೋಲಿಸಿದರೆ ಜನಸಂಖ್ಯೆ ಕಡಿಮೆ ಆಗಿದ್ದ ಒಂದೇ ಒಂದು ರಾಜ್ಯ ಯಾವುದು?

'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

A. ಮಣಿಪುರ

B. ಅರುಣಾಚಲ ಪ್ರದೇಶ

C. ಕೇರಳ

D. ನಾಗಲ್ಯಾಂಡ್

ದೇವಮ್ಮ ಪ್ರಕಾರ ಸರಿ ಉತ್ತರ ನಾಗಲ್ಯಾಂಡ್‌. ಆದರೆ ಗೊಂದಲದಿಂದ ಕ್ವಿಟ್‌ ಮಾಡಿ ತಮ್ಮ ಮಡಿಲಿಗೆ 12.5 ಲಕ್ಷ ರೂ ತನ್ನದಾಗಿಸಿಕೊಂಡರು. ಆದರೆ ಸರಿಯಾದ ಉತ್ತರವೂ ನಾಗಲ್ಯಾಂಡ್‌ ಆಗಿತ್ತು.

Latest Videos
Follow Us:
Download App:
  • android
  • ios