ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ಕನ್ನಡದ ಕೋಟ್ಯಧಿಪತಿಯಲ್ಲಿ ಮೊದಲ ಬಾರಿಗೆ 25 ಲಕ್ಷದ ಪ್ರಶ್ನೆ ಎದುರಿಸಿದ ಸ್ಪರ್ಧಿ ಅನುರಾಧಗೆ ಸಂವಿಧಾನದ ಬಗ್ಗೆ ಕೇಳಿದ ಪ್ರಶ್ನೆ ಕೈ ಕೊಟ್ಟಿತು. 

ಶಕುಂತಲಾ ದೇವಿ ಬಯೋಪಿಕ್ ನಲ್ಲಿ ವಿದ್ಯಾ ಬಾಲನ್; ಫಸ್ಟ್ ಲುಕ್ ರಿಲೀಸ್!

ಕಾನ್ಫಿಡೆಂಟ್ ಆಗಿ ಆಟ ಶುರು ಮಾಡಿದ ಅನುರಾಧ ಇದ್ದ ಮೂರು ಲೈಫ್‌ ಲೈನ್‌ಗಳನ್ನು ಬಳಸಿಕೊಂಡು 12.50 ಲಕ್ಷಕ್ಕೆ ಬಂದು ನಿಂತಿರು. ಮುಂದಿನ ಆಯ್ಕೆ 25 ಲಕ್ಷದ ಪ್ರಶ್ನೆ. ಕೈಯಲ್ಲಿ ಇದ್ದದ್ದು ಡಬಲ್ ಡಿಪ್ ಆಪ್ಷನ್ ಒಂದೇ. ಉತ್ತರ ಸರಿ ನೀಡಿದರೆ 25 ಲಕ್ಷ ಸಿಗುತ್ತೆ. ಒಂದು ವೇಳೆ ತಪ್ಪು ಹೇಳಿದರೆ 3.20 ಲಕ್ಷಕ್ಕೆ ತೃಪ್ತಿಪಟ್ಟಬೇಕಿತ್ತು. ಆದರೂ ಅನುರಾಧಾ ಧೃತಿಗಡಲಿಲ್ಲ. ಉತ್ತರ ಕೊಟ್ಟೇ ಬಿಟ್ಟರು. 

25 ಲಕ್ಷದ ಪ್ರಶ್ನೆ ಹೀಗಿತ್ತು. 

ಕರ್ನಾಟಕದ ಈ ಮುಖ್ಯಮಂತ್ರಿಗಳಲ್ಲಿ ಯಾರು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿರಲಿಲ್ಲ? 

A. ಕಡಿದಾಳ್ ಮಂಜಪ್ಪ 
B. ಕೆ ಚೆಂಗಲರಾಯ ರೆಡ್ಡಿ 
C. ಕೆಂಗಲ್ ಹನುಮಂತಪ್ಪ 
D. ಎಸ್ ನಿಜಲಿಂಗಪ್ಪ 

ಈ ಪ್ರಶ್ನೆಗೆ ಅನುರಾಧಾ ಗೊಂದಲಕ್ಕೀಡಾದರು. ಎರಡು ಡಿಪ್ ಲೈಫ್ ಬಳಸಿ ಮೊದಲ ಉತ್ತರ ಚೆಂಗಲ್ ರಾಯ ರೆಡ್ಡಿ, ಎರಡನೇ ಉತ್ತರವಾಗಿ ಎಸ್ ನಿಜಲಿಂಗಪ್ಪ ಕೊಟ್ಟರು. ಆದರೆ ಎರಡೂ ಉತ್ತರ ತಪ್ಪಾಗಿತ್ತು. ಸರಿ ಉತ್ತರ ಕಡಿದಾಳ್ ಮಂಜಪ್ಪ. ಅಲ್ಲಿಗೆ ಅನುರಾಧಾ 25 ಲಕ್ಷವನ್ನು ಕಳೆದುಕೊಂಡು 3.20 ಲಕ್ಷಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.