ಕನ್ನಡ ಚಿತ್ರರಂಗ ಯಾವ ಹಂತಕ್ಕೆ ತಲುಪಿದೆ ಅನ್ನೋದನ್ನ ನೀವು ನೋಡಿದ್ದೀರಾ. ಆದ್ರೆ ಇಂತ ಘಟನೆಗಳಿಂದ ಮತ್ತಷ್ಟು ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳಲಿದೆ. ದೀಮಂತ ಸಾಕಷ್ಟು ನಟ ನಟಿಯರು ಕೆಲಸ ಮಾಡಿದ್ದಾರೆ. ಇಂತಹ ಘಟನೆಗಳು ಆಗಬಾರದು..
ಏಷ್ಯಾನೆಟ್ ಸುವರ್ಣ ನ್ಯೂಸ್ ಮಹಾಬೇಟೆ ಸ್ಟಿಂಗ್ ಆಪರೇಷನ್ ಕಾಸ್ಟಿಂಗ್ ಕೌಚ್ ಬಗ್ಗೆ ನಿರ್ಮಾಪಕ ನಾಗೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ನಾಗೇಶ್ ಕುಮಾರ್ 'ನಾನು ಮೂರು ಚಿತ್ರಗಳನ್ನ ನಿರ್ಮಾಣ ಮಾಡಿದ್ದೇನೆ. ಸೆಕಂಡ್ ಆಫ್, ನಮ್ಮ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಇನ್ನೂ ಮೂರು ಚಿತ್ರಗಳು ಇವೆ. ನನ್ನ ಚಿತ್ರದ ತಂತ್ರಜ್ಞರು, ನಿರ್ದೇಶಕರು, ನಟ, ನಟಿಯರನ್ನು ನೀವು ಕೇಳಬಹುದು. ಒಂದೇ ಒಂದು ಕಪ್ಪು ಚುಕ್ಕೆ ನಮ್ಮ ಮೇಲೆ ಇಲ್ಲ.
ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಜನ ಮಾತನಾಡುತ್ತಿದ್ರು. ಅದನ್ನ ನೀವು ಇವತ್ತು ನಿಮ್ಮ ಚಾನಲ್ ನಲ್ಲಿ ತೋರ್ಸಿದ್ದೀರಾ
ನಿಮಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಾನು ವಾಣಿಜ್ಯ ಮಂಡಳಿಯ ಸದಸ್ಯನಾಗಿ ಹೇಳುತ್ತಿದ್ದೇನೆ. ಕೆಲವು ಬದಲಾವಣೆ ಕನ್ನಡ ಚಿತ್ರರಂಗದಲ್ಲಿ ಆಗಬೇಕಿದೆ. ಇಂತಹ ಘಟನೆಗಳಿಂದ ನಿಷ್ಠಾವಂತ ನಿರ್ದೇಶಕರು, ನಿರ್ಮಾಪಕರು ಕೆಲಸ ಮಾಡಲು ಮುಂದೆ ಬರೋದಿಲ್ಲ.
ಕನ್ನಡ ಚಿತ್ರರಂಗ ಯಾವ ಹಂತಕ್ಕೆ ತಲುಪಿದೆ ಅನ್ನೋದನ್ನ ನೀವು ನೋಡಿದ್ದೀರಾ. ಆದ್ರೆ ಇಂತ ಘಟನೆಗಳಿಂದ ಮತ್ತಷ್ಟು ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳಲಿದೆ. ದೀಮಂತ ಸಾಕಷ್ಟು ನಟ ನಟಿಯರು ಕೆಲಸ ಮಾಡಿದ್ದಾರೆ. ಇಂತಹ ಘಟನೆಗಳು ಆಗಬಾರದು' ಎಂದಿದ್ದಾರೆ.
ಇನ್ನು, ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ವಿಚಾರ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ನೀಡಿದ್ದಾರೆ. 'ಇದು ಮಾನವೀಯ ನಡೆ ಅಲ್ಲ. ಸಿನಿಮಾದಲ್ಲಿ ಎಲ್ಲಾ ಕತೆ ಬರೆದು ಸಮಾಜಕ್ಕೆ ತೋರಿಸಿ ನೀತಿ ಹೇಳೊರ ನೀತಿ ಸರಿ ಇರಬೇಕು... ಇಲ್ಲವಾದರೆ ನೀವು ಅಪಹಾಸ್ಯಕ್ಕೆ ಒಳಗಾಗುತ್ತೀರಿ. ಜನರು ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ. ಕನ್ನಡ ಇರಬಹುದು, ತಮಿಳು ಇರಬಹುದು ಯಾವುದೇ ಇಂಡಸ್ಟ್ರಿ ಇರಲಿ ಅದು ಮುಖ್ಯವಲ್ಲ.
ಕನ್ನಡದಲ್ಲಿ ಕಡಿಮೆ ಇದ್ದವು. ಆದರೆ ಇತ್ತಿಚೆಗೆ ಜಾಸ್ತಿ ಕೇಳುತ್ತಿದ್ದೇವೆ. ಫಿಲ್ಮ್ ಚೆಂಬರ್ ಕೂಡ ಇದನ್ನು ಗಮನಿಸಬೇಕು. ಈ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾದಾಗಾ ನಮ್ಮ ಕನ್ನಡ ಇಂಡಸ್ಟ್ರಿ ಕಡೆ ಜನ ಗೌರವ ನೀಡುತ್ತಾರೆ. ಸ್ಯಾಂಡಲ್‌ವುಡ್ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಕಾಸ್ಟಿಂಗ್ ಕೌಚ್ ಕರಾಳ ದಂಧೆ ಬಹಿರಂಗ ಆಗುತ್ತಿದ್ದಂತೆ, ಸಿನಿಮಾ ಲೋಕ, ಪ್ರೇಕ್ಷಕ ವರ್ಗ ಸೇರಿದಂತೆ ಇಡೀ ಕರ್ನಾಟಕದ ತುಂಬೆಲ್ಲಾ ಸಂಚಲನ್ ಸೃಷ್ಟಿಯಾಗಿದೆ. ಇದೀಗ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಬಹಳಷ್ಟು ಅಭಿಪ್ರಾಯಗಳು ಈ ದಂಧೆಯ ವಿರೋಧಿಸಿ ಬರತೊಡಗಿದೆ. ಯಾರಾದರೂ ದೂರು ದಾಖಲಿಸಿದರೆ, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿಕೆ ನೀಡಿದೆ.
ಸ್ಯಾಂಡಲ್ ವುಡ್ ನಲ್ಲಿ ಕಾಸ್ಟಿಂಗ್ ಕೌಚ್ ವಿಚಾರಕ್ಕೆ ಸಂಬಂಧಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಮಾಜಿ ಅಧ್ಯಕ್ಷ ಎನ್ ಎಮ್ ಸುರೇಶ್ ಕೂಡ ಹೇಳಿಕೆ ನೀಡಿದ್ದಾರೆ. 'ಸುವರ್ಣ ನ್ಯೂಸ್ ಒಳ್ಳೆಯ ಕೆಲಸ ಮಾಡಿದೆ. ಸಾಕಷ್ಟು ಹೆಣ್ಣುಮಕ್ಕಳು ಆ್ಯಕ್ಟಿಂಗ್ ಕೆರಿಯರ್ ಗಾಗಿ ಈ ರೀತಿ ಮೋಸ ಹೋಗ್ತಾರೆ. ನಿಜವಾಗಲೂ ಸಿನಿಮಾ ಮಾಡೋ ಉದ್ದೇಶ ಇರೋ ನಿರ್ದೇಶಕರು ಈ ರೀತಿ ಮಾಡೋದಿಲ್ಲ. ಯಾರೋ ಒಂದೋ ಎರಡೋ ಸಿನಿಮಾ ಮಾಡಿ ಹೀಗೆ ಹೆಣ್ಣು ಮಕ್ಕಳನ್ನು ಇಟ್ಕೊಂಡು ಮೋಸ ಮಾಡ್ತಾರೆ. ಇಂತವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಬೇಕು. ಇಲ್ಲವಾದಲಿ ಅದೆಷ್ಟೋ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಾರೆ' ಎಂದಿದ್ದಾರೆ.
