ಒಂದ್ಸಲ ಮುಟ್ಟೋದಕ್ಕೆ ಬಿಡು… ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ಜನಪ್ರಿಯ ಸೀರಿಯಲ್ ನಟ
ಮನರಂಜನಾ ಜಗತ್ತಿನಲ್ಲಿ ಹೆಚ್ಚುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಓಪನ್ ಆಗಿ ಮಾತನಾಡುತ್ತಿದ್ದಾರೆ. ಈ ಬಗ್ಗೆ ಜನಪ್ರಿಯ ನಟರೊಬ್ಬರು ತಮಗಾದ ಅನುಭವ ಬಿಚ್ಚಿಟ್ಟಿದ್ದಾರೆ.

ಕಾಸ್ಟಿಂಗ್ ಕೌಚ್ ಅನ್ನೋದು ಸಿನಿಮಾ ಅಥವಾ ಮನರಂಜನಾ ಇಂಡಸ್ಟ್ರಿಯಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಶಬ್ಧವಾಗಿದೆ. ಆಫರ್ ನೀಡುವ ನೆಪದಲ್ಲಿ ಮಂಚಕ್ಕೆ ಕರೆದ ಅದೆಷ್ಟೋ ಘಟನೆಗಳು ನಡೆದಿವೆ. ಈ ಕಾಸ್ಟಿಂಗ್ ಕೌಚ್ (casting couch) ಕೇವಲ ನಟಿಯರಿಗೆ ಮಾತ್ರವಲ್ಲ, ನಟರನ್ನು ಕಾಡಿದೆ. ಅದಕ್ಕೆ ಈ ಜನಪ್ರಿಯ ಸೀರಿಯಲ್ ನಟ ಉದಾಹರಣೆ.
ಅಂಕಿತ್ ಗುಪ್ತಾ ಇಂದು ಹಿಂದಿ ಟೆಲಿವಿಶನ್ ಇಂಡಷ್ಟ್ರಿಯ (television industry) ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಬಾಲಿಕಾ ವಧು ಮತ್ತು ಬೇಗುಸರಾಯ್ ನಂತಹ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಆದರೆ ಉಡಾರಿಯಾನ್ ಸೀರಿಯಲ್ ನಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದ ನಟ ಇವರು. ಇವರು ಬಿಗ್ ಬಾಸ್‌ನ ಕೊನೆಯ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು ಮತ್ತು ಅಂದಿನಿಂದ ಸುದ್ದಿಯಲ್ಲಿದ್ದಾರೆ. ಇದೀಗ ಅಂಕಿತ್ ಯಶಸ್ಸಿನ ಹಾದಿಯಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಪಿಂಕ್‌ವಿಲ್ಲಾ ಸಂದರ್ಶನವೊಂದರಲ್ಲಿ ಮಾತನಾಡಿದ, ಅಂಕಿತ್ (Ankit Gupta) ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಎಂತಹ ಜನರನ್ನೆಲ್ಲಾ ಭೇಟಿಯಾಗಿದ್ದೆನೆ ಅಂದ್ರೆ, ಅವರ ಬಗ್ಗೆ ಹೇಳಿಕೊಳ್ಳೋದಕ್ಕೂ ಸಾಧ್ಯವಿಲ್ಲ. 'ಕೆಲವು ಜನರಿದ್ದಾರೆ, ಅವರು ನಿಮಗೆ ಆಫರ್ ಇದೆ ಎಂದು ಕರೆ ಮಾಡ್ತಾರೆ, ಅಷ್ಟೇ ಅಲ್ಲ ಅವರು ಬಹಳಷ್ಟು ಕಥೆಗಳನ್ನು ಸಹ ಹೇಳುತ್ತಾರೆ, ಜೊತೆಗೆ ಹಲವು ಜನಪ್ರಿಯರ ಹೆಸರನ್ನು ಸಹ ಹೇಳುತ್ತಾರೆ. ಜೊತೆಗೆ ನಿಮ್ಮನ್ನು ನಂಬಿಸೋದಕ್ಕಾಗಿ ನಾನು ಅವರನ್ನು ಲಾಂಚ್ ಮಾಡಿದೆ, ಇವರಿಗೆ ಕೆಲಸ ಸಿಕ್ಕಿದ್ದೆ ನನ್ನಿಂದ ಎಂದು ಹೇಳುತ್ತಾರೆ. ಅವರನ್ನ ನಂಬಿ ಹೋದ್ರೆ ಮಾತ್ರ ಪಶ್ಚಾತ್ತಾಪ ಪಡಬೇಕಾಗುತ್ತೆ ಎಂದಿದ್ದಾರೆ ಅಂಕಿತ್.
ಅಂಕಿತ್ ಇದರ ಬಗ್ಗೆ ಮಾತನಾಡುತ್ತಾ, ತನ್ನನ್ನು ಆಫರ್ (serial offers) ಇದೆ ಎಂದು ಕರೆದ ವ್ಯಕ್ತಿ, ಬಳಿಕ ಏನೇನೋ ಹೇಳಿ, ನೀನು ಕೂಡ ಇದನ್ನ ಮಾಡು, ಇಂಡಸ್ಟ್ರಿಯಲ್ಲಿ ಎಲ್ಲರೂ ಮಾಡ್ತಾರೆ. ಸುಮ್ನೆ ಇಂಡಸ್ಟ್ರಿಯಲ್ಲಿ 2-3 ವರ್ಷ ವ್ಯರ್ಥ ಮಾಡ್ಕೋಬೇಡ, ನನಗೆ ತುಂಬಾ ಜನ ಗೊತ್ತು ಎಂದಿದ್ದರಂತೆ ಆ ವ್ಯಕ್ತಿ. ಇದಕ್ಕೆ ಅಂಕಿತ್ ಆಗೋದಿಲ್ಲ, ನಾನು ಮಾಡಲ್ಲ ಎಂದಾಗ, ಆ ವ್ಯಕ್ತಿ ಮಂಡಿಯೂರಿ ಕುಳಿತು, ಒಂದು ಸಲ ಮೇಲಿನಿಂದ ಮುಟ್ಟೋದಕ್ಕಾದ್ರೂ ಬಿಡು ಎಂದು ಹೇಳಿದ್ದರು ಎನ್ನುವ ಶಾಕಿಂಗ್ ಅಂಶವನ್ನು ಬಿಚ್ಚಿಟ್ಟಿದ್ದಾರೆ ಅಂಕಿತ್.
ಅಂಕಿತ್ ಬಗ್ಗೆ ಹೇಳೋದಾದ್ರೆ ಇವರು ಜುನೂನಿಯತ್ ಮತ್ತು ಉಡಾರಿಯಾನ್ (Udaariyan serial) ಸೀರಿಯಲ್ ಗಳಲ್ಲಿನ ಅಭಿನಯಕ್ಕಾಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು. ಸಹನಟಿ ಮತ್ತು ಮಾಜಿ ಬಿಗ್ ಬಾಸ್ 16 ಸ್ಪರ್ಧಿ ಪ್ರಿಯಾಂಕಾ ಚಾಹರ್ ಚೌಧರಿ ಜೊತೆಗಿನ ಇವರ ಸಂಬಂಧದಿಂದ ಕೂಡ ಅಂಕಿತ್ ಸುದ್ದಿಯಲ್ಲಿದ್ದರು.