ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದ್ದಾರೆ. 'ಕಾಸ್ಟಿಂಗ್ ಕೌಚ್ ಬಗ್ಗೆ ಫಾಶ್ ಕಮಿಟಿ ಕೂಡ ಮಾಡಿದ್ದೇವೆ. ಇಂಟರನಲ್ ಕಮಿಟಿ ಕೂಡ ಇದರ ಬಗ್ಗೆ ತನಿಖೆ ಮಾಡುತ್ತೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಚ್ಚಿಟ್ಟ ಕನ್ನಡ ಚಿತ್ರರಂಗದ (Kannada Film Industry) ಕಾಸ್ಟಿಂಗ್ ಕೌಚ್ (Casting Couch) ಪ್ರಕರಣ ಸಂಬಂಧಿಸಿ ನಿರ್ದೇಶಕ ಎ ಎಮ್ ಆರ್ ರಮೇಶ್ ಹೇಳಿಕೆ ನೀಡಿದ್ದಾರೆ. 'ಕಾಸ್ಟಿಂಗ್ ಕೌಚ್ ನಲ್ಲಿ ಸಿಕ್ಕಿ ಬಿದ್ದವರನ್ನ ಸುಮ್ಮನೆ ಬಿಡಬಾರದು. ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು. ಅದು ಯಾರು ಅಂತ ಗೊತ್ತಾದ್ರೆ ನಾನೇ ನೇರವಾಗಿ ಹೋಗಿ ಕೇಸ್ ದಾಖಲಿಸುತ್ತೇನೆ. ನಾನು ಚಿತ್ರರಂಗದಲ್ಲಿ 30 ವರ್ಷಗಳಿಂದ ಇದ್ದೇನೆ. ನನಗೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾಹಿತಿ ಇದೆ. ಮಂಚಕ್ಕೆ ಕರೆಯುವವರನ್ನ ಸುಮ್ನನೆ ಬಿಡಬಾರದು. ಯಾರೋ ಒಬ್ಬರು ಮಾಡೋ ಕೆಲಸಕ್ಕೆ ಇಡೀ ಚಿತ್ರರಂಗಕ್ಕೆ ಕೆಟ್ಟ ಹೆಸರು' ಎಂದಿದ್ದಾರೆ ನಿರ್ದೇಶಕರಾದ ಎಎಂಆರ್ ರಮೇಶ್.

ಕನ್ನಡ ಚಿತ್ರರಂಗದಲ್ಲಿ ಇದೀಗ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡುತ್ತಿದೆ. ಕೆಲವು ನಿರ್ದೇಶಕರ ಹೆಸರುಗಳೂ ಸಹ ಬಹಿರಂಗವಾಗಿದ್ದು, ಕನ್ನಡ ಸಿನಿಮಾರಂಗದಲ್ಲಿ ಈ ದಂಧೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಕನ್ನಡದ ಕೆಲವು ನಿರ್ಮಾಪಕರಿಗೆ ಕೆಲವು ನಿರ್ದೇಶಕರುಗಳೇ ಹಲವು ನಟಿಯರನ್ನು ಸರಬರಾಜು ಮಾಡುವ ಕರಾಳ ಮುಖ ಬಯಲಾಗಿದೆ. 'ಮಹಾ ಬೇಟೆ' ಅಡಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿಯಲ್ಲಿ ಈ ವಿಷಯ ಬಯಲಾಗಿದ್ದು, ಸ್ಯಾಂಡಲ್‌ವುಡ್ ಸೇರಿದಂತೆ ಇಡೀ ಕರ್ನಾಟಕ ಈ ಬೆಚ್ಚಿ ಬಿದ್ದಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದ್ದಾರೆ. 'ಕಾಸ್ಟಿಂಗ್ ಕೌಚ್ ಬಗ್ಗೆ ಫಾಶ್ ಕಮಿಟಿ ಕೂಡ ಮಾಡಿದ್ದೇವೆ. ಇಂಟರನಲ್ ಕಮಿಟಿ ಕೂಡ ಇದರ ಬಗ್ಗೆ ತನಿಖೆ ಮಾಡುತ್ತೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.

ಸ್ಯಾಂಡಲ್ ವುಡ್ ನಲ್ಲಿ‌ ಕಾಸ್ಟಿಂಗ್ ಕೌಚ್ ವಿಚಾರಕ್ಕೆ ಸಂಬಂಧಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಮಾಜಿ ಅಧ್ಯಕ್ಷ ಎನ್ ಎಮ್ ಸುರೇಶ್ ಕೂಡ ಹೇಳಿಕೆ ನೀಡಿದ್ದಾರೆ. 'ಸುವರ್ಣ ನ್ಯೂಸ್ ಒಳ್ಳೆಯ ಕೆಲಸ ಮಾಡಿದೆ. ಸಾಕಷ್ಟು ಹೆಣ್ಣುಮಕ್ಕಳು ಆ್ಯಕ್ಟಿಂಗ್ ಕೆರಿಯರ್ ಗಾಗಿ ಈ ರೀತಿ‌ ಮೋಸ ಹೋಗ್ತಾರೆ. ನಿಜವಾಗಲೂ ಸಿನಿಮಾ ಮಾಡೋ ಉದ್ದೇಶ ಇರೋ ನಿರ್ದೇಶಕರು ಈ ರೀತಿ ಮಾಡೋದಿಲ್ಲ. ಯಾರೋ ಒಂದೋ ಎರಡೋ ಸಿನಿಮಾ ಮಾಡಿ ಹೀಗೆ ಹೆಣ್ಣು ಮಕ್ಕಳನ್ನು ಇಟ್ಕೊಂಡು ಮೋಸ ಮಾಡ್ತಾರೆ. ಇಂತವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಬೇಕು. ಇಲ್ಲವಾದಲಿ ಅದೆಷ್ಟೋ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಾರೆ' ಎಂದಿದ್ದಾರೆ.

ಇನ್ನು ಈ ಕಾಸ್ಟಿಂಗ್ ಕೌಚ್ ವಿಚಾರಕ್ಕೆ ಸಂಬಂಧಿಸಿ ಫಿಲಂ ಚೇಂಬರ್ ಬಳಿ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಹೇಳಿಕೆ ನೀಡಿದ್ದಾರೆ. 'ಇಂತಹ ಘಟನೆ ಆಗಬಾರದಿತ್ತು. ನಾನು ನಿಮ್ಮ ಚಾನಲ್ ಮೂಲಕ ನೋಡಿದ್ದೇನೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಡೈರೆಕ್ಟರ್ ಈ ಮಟ್ಟಕ್ಕೆ ಇಳಿಯಬಾರದು. ಪಾಶ್ ಕಮಿಟಿಗೆ ದೂರು ಬಂದ್ರೆ ಕ್ರಮವಾಗುತ್ತೆ. ಕನ್ನಡ ಇಂಡಸ್ಟ್ರೀಸ್ ಇಂತಹ ಕೆಲವರಿಂದ ಕೆಟ್ಟ ಹೆಸರು ಬರುತ್ತಿದೆ. ಎಲ್ಲರನ್ನು ದೂಷಿಸಲಿಕ್ಕೆ ಆಗಲ್ಲ.ಎಲ್ಲೋ ಅಲ್ಲಿ ಇಲ್ಲಿ ಒಬ್ಬರು ಇಂತಹವರು ಇರುತ್ತಾರೆ..' ಎಂದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಕಾಸ್ಟಿಂಗ್ ಕೌಚ್ ಕರಾಳ ದಂಧೆ ಬಹಿರಂಗ ಆಗುತ್ತಿದ್ದಂತೆ, ಸಿನಿಮಾ ಲೋಕ, ಪ್ರೇಕ್ಷಕ ವರ್ಗ ಸೇರಿದಂತೆ ಇಡೀ ಕರ್ನಾಟಕದ ತುಂಬೆಲ್ಲಾ ಸಂಚಲನ್ ಸೃಷ್ಟಿಯಾಗಿದೆ. ಇದೀಗ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಬಹಳಷ್ಟು ಅಭಿಪ್ರಾಯಗಳು ಈ ದಂಧೆಯ ವಿರೋಧಿಸಿ ಬರತೊಡಗಿದೆ. ಯಾರಾದರೂ ದೂರು ದಾಖಲಿಸಿದರೆ, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿಕೆ ನೀಡಿದೆ.