ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ 'ಸ್ಪಿರಿಟ್' ಸಿನಿಮಾ ಬಿಡುಗಡೆ ಬಗ್ಗೆ ಹಬ್ಬಿದ್ದ ಎಲ್ಲಾ ಗಾಸಿಪ್‌ಗಳಿಗೆ ಚಿತ್ರತಂಡ ಫುಲ್ ಸ್ಟಾಪ್ ಇಟ್ಟಿದೆ. ಸಿನಿಮಾ ರಿಲೀಸ್ ತಡವಾಗಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಡಾರ್ಲಿಂಗ್ ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ರಿಲೀಸ್ ತಡವಾಗಲಿದೆ ಎಂಬ ವದಂತಿಗಳಿಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಅಂದುಕೊಂಡಂತೆ 2027ರ ಮಾರ್ಚ್ 5 ರಂದು ತೆರೆಗೆ ಬರಲಿದೆ ಎಂದು ಖಚಿತಪಡಿಸಿದೆ. ಚಿತ್ರದಲ್ಲಿ ತ್ರಿಪ್ತಿ ದಿಮ್ರಿ, ವಿವೇಕ್ ಓಬೆರಾಯ್ ಮತ್ತು ಹೊಸ ಪ್ರತಿಭೆ ಐಶ್ವರ್ಯಾ ದೇಸಾಯಿ ನಟಿಸುತ್ತಿದ್ದಾರೆ.
2027ಕ್ಕೆ 'ಸ್ಪಿರಿಟ್' ರಿಲೀಸ್ ಪಕ್ಕಾ
ಪ್ರಭಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ 'ಸ್ಪಿರಿಟ್' ಸಿನಿಮಾ ಬಿಡುಗಡೆ ಬಗ್ಗೆ ಹಬ್ಬಿದ್ದ ಎಲ್ಲಾ ಗಾಸಿಪ್‌ಗಳಿಗೆ ಚಿತ್ರತಂಡ ಫುಲ್ ಸ್ಟಾಪ್ ಇಟ್ಟಿದೆ. ಸಿನಿಮಾ ರಿಲೀಸ್ ತಡವಾಗಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ನಿರ್ಮಾಪಕರು, ಚಿತ್ರವು ನಿಗದಿತ ಸಮಯಕ್ಕೆ ಸರಿಯಾಗಿ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಮೊದಲೇ ಘೋಷಿಸಿದಂತೆ, ಈ ಬಹುನಿರೀಕ್ಷಿತ ಸಿನಿಮಾ 2027ರ ಮಾರ್ಚ್ 5 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
"ಬಹಳ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಅಂದುಕೊಂಡಂತೆ ಶೂಟಿಂಗ್ ಕೂಡಾ ಸಾಗುತ್ತಿದೆ. 'ಸ್ಪಿರಿಟ್' ಸಿನಿಮಾ ಪ್ರೇಕ್ಷಕರ ನಿರೀಕ್ಷೆಯಂತೆಯೇ ಮೂಡಿಬರಲಿದೆ" ಎಂದು ಚಿತ್ರತಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಟಾರ್ ನಟರ ದಂಡು ಮತ್ತು ಅದ್ಧೂರಿ ನಿರ್ಮಾಣ
ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ 'ಅನಿಮಲ್' ಯಶಸ್ಸಿನ ನಂತರ ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತೆ ಒಂದಾಗಿದ್ದಾರೆ. ಚಿತ್ರದಲ್ಲಿ ತ್ರಿಪ್ತಿ ದಿಮ್ರಿ, ವಿವೇಕ್ ಓಬೆರಾಯ್ ಮತ್ತು ಹೊಸ ಮುಖ ಐಶ್ವರ್ಯಾ ದೇಸಾಯಿ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೊಂದು ಪ್ಯಾನ್-ವರ್ಲ್ಡ್ ಎಂಟರ್‌ಟೈನರ್ ಆಗಿದ್ದು, ಒಟ್ಟು 8 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ವಿವೇಕ್ ಓಬೆರಾಯ್ ಲುಕ್ ರಿವೀಲ್ ಮಾಡಿದ ಹೊಸ ಪೋಸ್ಟರ್
ಕಳೆದ ಫೆಬ್ರವರಿಯಲ್ಲಿ, ಚಿತ್ರತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ವಿವೇಕ್ ಓಬೆರಾಯ್ ಹಿಂದೆಂದೂ ಕಾಣದ ಅವತಾರದಲ್ಲಿ ಮಿಂಚಿದ್ದಾರೆ. ಕಪ್ಪು ಬಣ್ಣದ ನಿಲುವಂಗಿ, ಸನ್‌ಗ್ಲಾಸ್ ತೊಟ್ಟು, ಕೈಯಲ್ಲಿ ಖಡ್ಗ ಹಿಡಿದು ವಿವೇಕ್ ಓಬೆರಾಯ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ಸಾಕಷ್ಟು ಕುತೂಹಲ ಮೂಡಿಸಿದೆ.
ಇದೇ ಪೋಸ್ಟರ್‌ನಲ್ಲಿ ಹೊಸ ನಟಿ ಐಶ್ವರ್ಯಾ ದೇಸಾಯಿ ಕೂಡ ಕಾಣಿಸಿಕೊಂಡಿದ್ದು, ಕಥೆಗೆ ಹೊಸ ತಿರುವು ನೀಡುವ ನಿರೀಕ್ಷೆಯಿದೆ. ಸಂದೀಪ್ ರೆಡ್ಡಿ ವಂಗಾ ಅವರೇ ಕಥೆ, ಸಂಕಲನ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗಾ, ಕೃಷನ್ ಕುಮಾರ್ ಮತ್ತು ಪ್ರಭಾಕರ್ ರೆಡ್ಡಿ ವಂಗಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾ 2027ರ ಮಾರ್ಚ್ 5ರಂದು ಎಂಟು ಭಾಷೆಗಳಲ್ಲಿ ತೆರೆ ಕಾಣಲಿದೆ.


