ಅತ್ತ 'ಆ್ಯಕ್ಸಿಡೆಂಟಲ್ ಪಿಎಂ' ಚಿತ್ರ ರಿಲೀಸ್‌ಗೆ ಸನ್ನದ್ಧವಾಗಿದ್ದು, ವಿರೋಧವೂ ವ್ಯಕ್ತವಾಗುತ್ತಿದೆ. ಇತ್ತ 'ಪಿಎಂ ನರೇಂದ್ರ ಮೋದಿ' ಚಿತ್ರದ ಮೊದಲ ಲುಕ್ ರಿಲೀಸ್ ಆಗಿದ್ದು, ಸಹಜವಾಗಿಯೇ ಎಲ್ಲರ ಕುತೂಹಲ ಹೆಚ್ಚಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ' ಚಿತ್ರದ ಮೊದಲ ಲುಕ್ ರಿಲೀಸ್ ಆಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.
ಬಾಲಿವುಡ್ ಖ್ಯಾತ ನಟ ವಿವೇಕ್ ಒಬೇರಾಯ್ ಈ ಬಯೋಪಿಕ್‌ನಲ್ಲಿ ಮೋದಿ ಪಾತ್ರ ನಿಭಾಯಿಸಲಿದ್ದಾರೆ. ಮೊದಲ ಸಲ ಪೋಸ್ಟರ್ ನೋಡಿದವರಿಗೆ ಥೇಟ್ ಮೋದಿಯನ್ನೇ ನೋಡಿದಂತಾಗುತ್ತದೆ. ಆ ಬಿಳಿ ಕೂದಲು, ಗಡ್ಡ ಹಾಗೂ ಖಾದಿ ಕುರ್ತಾ ತೊಟ್ಟಿದ್ದು, ಈ ಚಿತ್ರದ ಮೇಕಪ್ ಮ್ಯಾನ್‌ಗೆ ಕ್ರೆಡಿಟ್ ಸಲ್ಲುತ್ತದೆ.
ಸೇಮ್ ಟು ಸೇಮ್ ಮೋದಿ ಹಾಗೆ ನಿಂತಿರುವ ವಿವೇಕ್ ಹಿಂದೆ ಭಾರತದ ರಾಷ್ಟ್ರ ಧ್ವಜವಿದೆ. ಅದರೊಂದಿಗೆ ಸೂರ್ಯ ಉದಯವಾಗುತ್ತಿದೆ. ಬಯೋಪಿಕ್ ಸಿನಿಮಾಗಳ ಪ್ರಖ್ಯಾತ ನಿರ್ದೇಶಕ ಓಮಂಗ್ ಕುಮಾರ್ ಈಗಾಗಲೇ ಹಿಟ್ ಚಿತ್ರಗಳಾದ ಮೇರಿ ಕೋಮ್ ಹಾಗೂ ಸರಬ್ಜಿತ್‌ನಂಥ ಚಿತ್ರಗಳಿಂದ ಹೆಸರು ಮಾಡಿದ್ದಾರೆ. ಈ ಸಾಲಿನಲ್ಲಿ ಮೋದಿ ಬಯೋಪಿಕ್ ಕೂಡ ಸೇರಿಕೊಳ್ಳಲಿದೆ.
ಈ ಸಿನಿಮಾವನ್ನು ಈಗಾಗಲೇ ಉತ್ತರಖಾಂಡ್, ಹಿಮಾಚಲ ಪ್ರದೇಶ, ದೆಹಲಿ ಹಾಗೂ ಗುಜರಾತ್‌ನಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಸಂದೀಪ್ ಎಸ್. ಸಿಂಗ್ ನಿರ್ಮಾಣದ ಈ ಚಿತ್ರ ಕನ್ನಡ ಸೇರಿ 23 ಭಾಷೆಗಳಲ್ಲಿ ತೆರೆಕಾಣಲಿದೆ.
