ಮುಂಬೈ[ಜ.04] ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ ಪಿಎಂ ನರೇಂದ್ರ ಮೋದಿ ಬಯೋಪಿಕ್‌ ಚಿತ್ರದಲ್ಲಿ ಬಾಲಿವುಡ್‌ ನಟ ವಿವೇಕ್‌ ಒಬೇರಾಯ್‌ ಅವರು ಮೋದಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಕೆಲ ಕಾಲದಿಂದ ಬಾಲಿವುಡ್‌ನಿಂದ ದೂರವಿದ್ದ ಓಬೇರಾಯ್ ಮೋದಿ ಅವತಾರದಲ್ಲಿ ಕಾಣಸಿಗಲಿದ್ದಾರೆ. ಈ ವಿಚಾರವನ್ನು ಖ್ಯಾತ ಚಿತ್ರ ವಿಮರ್ಶಕ ತರಣ್‌ ಆದರ್ಶ್‌ ತಮ್ಮ ಟ್ವೀಟರ್ ನಲ್ಲಿಯೂ ಹಂಚಿಕೊಂಡಿದ್ದಾರೆ.

'ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ನಲ್ಲಿ ಮನಮೋಹನ್ ಸಿಂಗ್‌ಗೆ ಅವಮಾನ?

ಉಮಂಗ್‌ ಕುಮಾರ್‌ ಮೋದಿ ಬಯೋಪಿಕ್‌ ಚಿತ್ರವನ್ನು ನಿರ್ದೇಶಿಸಲಿದ್ದು, ಸಂದೀಪ್‌ ಸಿಂಗ್‌ ನಿರ್ಮಿಸಲಿದ್ದಾರೆ.  ಚಿತ್ರದ ಮೊದಲ ಪೋಸ್ಟರ್‌ ಜನವರಿ 7ರಂದು ಬಿಡುಗಡೆಯಾಗಲಿದೆ. ಚಿತ್ರೀಕರಣ ಇದೇ ಜನವರಿ ಕೊನೆಯಲ್ಲಿ ಆರಂಭವಾಗುವ ನಿರೀಕ್ಷೆ ಇದೆ.