Katrina Vicky wedding: ಇವರೇನು ಮದುವೆಯೇ ಮಾಡಿಕೊಳ್ಳುತ್ತಿದ್ದಾರಾ? ಸಿನಿಮಾ ಶೂಟಿಂಗಾ?
- ಕತ್ರಿನಾ ವಿಕ್ಕಿ ಮದುವೆ ಪ್ರಸಾರಕ್ಕೆ 100 ಕೋಟಿ ರೂ. ಆಫರ್?
- ಮದುವೆಯ ಎಕ್ಸ್‌ಕ್ಲೂಸಿವ್ ಫೂಟೇಜ್‌ಗೆ ಆಫರ್ ಮಾಡಿದ ಒಟಿಟಿ ಕಂಪನಿ
- ಬಾಲಿವುಡ್ ಸ್ಟಾರ್‌ಜೋಡಿ ಕತ್ರಿನಾ ಕೈಫ್ , ವಿಕ್ಕಿ ಕೌಶಲ್
ಸವಾಯ್ ಮಾಧೋಪುರ (ರಾಜಸ್ಥಾನ): ಬಾಲಿವುಡ್ ನಟರಿಗೆ ಸಿನಿಮಾದಲ್ಲಿ ನಟನೆಗೆ ಮಾತ್ರವಲ್ಲ. ಮದುವೆಯಾದರೂ ದುಡ್ಡು ಸಿಗುತ್ತೆ. ಇಂತಹ ಆಫರ್ ಇದುವರೆಗೂ ಯಾರಿಗೆ ಸಿಕ್ಕಿಲ್ಲ. ಆದರೆ ಪ್ರಸ್ತುತ ಮದುವೆಯಾಗಲಿರುವ ಬಾಲಿವುಡ್ ಸೆನ್ಸೇಷನಲ್ ಸ್ಟಾರ್‌ಜೋಡಿಯಾದ ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್(Vicky Kaushal) ಅವರ ಮದುವೆಗೆ ಒಟಿಟಿಯೊಂದು ಇಂತಹ ಆಫರ್ ನೀಡಿದೆ. ಮದುವೆಯ ಎಕ್ಸ್‌ಕ್ಲೂಸಿವ್ ದೃಶ್ಯಾವಳಿಯ ಪ್ರಸಾರಕ್ಕೆ 100 ಕೋಟಿ ರೂ. ಆಫರ್ ನೀಡಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಒಂದು ವೇಳೆ ಒಪ್ಪಿಗೆ ಸಿಕ್ಕರೆ ಇದು ಸಿನಿಮಾ ಮಾದರಿಯಲ್ಲಿ ನಿರ್ದಿಷ್ಟ ಒಟಿಟಿ(OTT) ವೇದಿಕೆಯಲ್ಲಿ ಪ್ರಸಾರವಾಗಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇದೊಂದು ಟ್ರೆಂಡ್ ಸೆಟ್ಟರ್ ಆಗಲಿದೆ.
ರಾಜಸ್ಥಾನದ ಸವಾಯಿ ಮಾಧೋಪುರ(Madhopur)ದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ(Six Sense Fort Barwara)ದಲ್ಲಿ ವಿವಾಹವಾಗಲಿರುವ ಈ ಸೆಲೆಬ್ರಿಟಿ ಜೋಡಿ ಓಟಿಟಿಯ ಆಫರ್ ಅನ್ನು ಸ್ವೀಕರಿಸುತ್ತಾರೆಯೇ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಡಿ.9ರಂದು ಅಂದರೆ ನಾಳೆ ಇವರ ಮದುವೆ ನಡೆಯಲಿದೆ. ಒಂದು ವೇಳೆ ಕತ್ರಿನಾ-ವಿಕ್ಕಿ 100 ಕೋಟಿ ರೂ. ಒಪ್ಪಂದಕ್ಕೆ ಒಪ್ಪಿಕೊಂಡರೆ, ಇವರ ವಿವಾಹವನ್ನು ಒಟಿಟಿ ವೇದಿಕೆಯಲ್ಲಿ ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ನೋಡಬಹುದು. ಈಗಾಗಲೇ ಈ ಮದುವೆಯ ಕುರಿತು ಖಾಸಗಿತನ ಕಾಪಾಡಿಕೊಳ್ಳಲು ಮದುವೆಗೆ ಕಡಿಮೆ ಸಂಖ್ಯೆಯ ಅತಿಥಿಗಳನ್ನು ಕರೆಯಲಾಗಿದೆ. ಮೊಬೈಲ್ ಫೋನ್ ತರುವುದು ಮತ್ತು ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ.
3 ದಿನ ಮದ್ಯ, ಬಾರು ಕ್ಲೋಸ್, ಕತ್ರಿನಾ ವಿಕ್ಕಿ ವಿರುದ್ಧ ಕೇಸ್; ಡಿ.7ರ ಟಾಪ್ 10 ಸುದ್ದಿ!
ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳು ತಮ್ಮ ಮದುವೆಯ ದೃಶ್ಯಗಳು, ಫೋಟೋಗಳನ್ನು ನಿಯತಕಾಲಿಕೆಗಳಿಗೆ ಮತ್ತು ಕೆಲವೊಮ್ಮೆ ಚಾನಲ್‍ಗಳಿಗೆ ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಏಕೆಂದರೆ ಇವರ ಮದುವೆಯ ಪ್ರತಿಯೊಂದು ಕ್ಷಣಗಳನ್ನು ವೀಕ್ಷಿಸಲು ಅಭಿಮಾನಿಗಳು ಬಹಳಷ್ಟು ಕಾತುರದಿಂದ ಇರುತ್ತಾರೆ. ಆದರೆ 100 ಕೋಟಿವರೆಗಿನ ಭಾರಿ ಮೊತ್ತದ ಆಫರ್ ಇದೇ ಮೊದಲು ಎನಿಸುತ್ತಿದೆ. 2018ರಲ್ಲಿ ಮದುವೆಯಾದ ಬಾಲಿವುಡ್ ಪವರ್ ಫುಲ್ ದಂಪತಿ ದೀಪಿಕಾ ಪಡುಕೋಣೆ(Deepika Padukone) ಮತ್ತು ರಣವೀರ್ ಸಿಂಗ್(Ranveer Singh) ಅವರ ಮದುವೆ ಕ್ಲಿಪ್ಸ್ ಗಳನ್ನು ಓಟಿಟಿ ಕೇಳಿದ್ದು, ಆದರೆ ಈ ದಂಪತಿ ತಮ್ಮ ಖಾಸಗಿ ಕ್ಷಣಗಳನ್ನು ಓಟಿಟಿಗೆ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.
Rajasthan : ವಿಕ್ಕಿ ಕತ್ರಿನಾ ಮಾತ್ರವಲ್ಲ ಈ ಬ್ಯುಸಿನೆಸ್‌ಮೆನ್‌ಗಳೂ ಇಲ್ಲೇ ಮದುವೆಯಾಗಿದ್ದು
ಪ್ರಸ್ತುತ ಮದುವೆಗಾಗಿ ಈ ಜೋಡಿ ರಾಜಸ್ಥಾನದಲ್ಲಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವರ ವಿಕ್ಕಿ ಕೌಶಲ್ ಏಳು ಬಿಳಿ ಕುದುರೆಗಳ ಜೊತೆಗೆ ಕಲ್ಯಾಣ ಮಂಟಪಕ್ಕೆ ಪ್ರವೇಶ ನೀಡಲಿದ್ದಾರೆ. ಇಂದು ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಮುಂಬೈ ಮೂಲದ ಈವೆಂಟ್ ಕಂಪನಯೊಂದು ಮಾತಾ ಟ್ರಸ್ಟ್ ಧರ್ಮಶಾಲಾದಲ್ಲಿ ಮದುವೆಗೆ ಬರುವ 150 ಅತಿಥಿಗಳಿಗಾಗಿ 27 ಕೊಠಡಿಗಳು ಮತ್ತು ಐದು ಸಭಾಂಗಣಗಳನ್ನು ಕಾಯ್ದಿರಿಸಿದೆ. ಮದುವೆಗೆ ಆಗಮಿಸುತ್ತಿರುವ ಅತಿಥಿಗಳು ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಆರ್ಟಿ-ಪಿಸಿಆರ್ ವರದಿ ತೆಗೆದುಕೊಂಡು ಬರುವಂತೆಯೂ ಸೂಚನೆ ನೀಡಲಾಗಿದೆ.
ವಿವಿಐಪಿ ಅತಿಥಿಗಳಿಗಾಗಿ ಮದುವೆ ಆಯೋಜಕರು 8 ರಿಂದ 10 ಟೆಂಟ್‌ಗಳನ್ನು ಕಾಯ್ದಿರಿಸಿದ್ದಾರೆ ಎಂದು ಹೋಟೆಲ್ ಮೂಲ ದೃಢಪಡಿಸಿದೆ. ಇದರ ಪ್ರತಿ ರಾತ್ರಿ ಬಾಡಿಗೆ 70, ಸಾವಿರ ರೂ.ಗಳಿಂದ ಪ್ರಾರಂಭವಾಗುತ್ತದೆ.