ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿಯ ನಡುವೆ ನಟಿ ತನುಶ್ರೀ ದತ್ತಾ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ನಾನಾ ಪಾಟೇಕರ್ ಸತ್ತಿಲ್ಲ, ಮಧ್ಯರಾತ್ರಿ ನಡೆದ ಶವಸಂಸ್ಕಾರ ಅವರದ್ದಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸತ್ಯ ತಿಳಿಯಲು ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮುಂಬೈ: ಈಚೆಗಷ್ಟೇ ನಟ ನಾನಾ ಪಾಟೇಕರ್​ ಅವರು ನಿಧನರಾಗಿರುವ ಸುದ್ದಿ ಇಡೀ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿದೆ. ಜೊತೆಗೆ, ನಾನಾ ಪಾಟೇಕರ್​ ಅವರು ಜನರಿಗೆ ಮಾಡುತ್ತಿದ್ದ ಸಹಾಯ, ಅವರ ಸರಳ ಬದುಕು, ಬೇರೆಯವರ ಕಲ್ಯಾಣಕ್ಕಾಗಿ ತೆಗೆದುಕೊಂಡ ನಿರ್ಧಾರಗಳು... ಹೀಗೆ ಅವರ ಜೀವನ ಕ್ರಮವನ್ನು ಶ್ಲಾಘಿಸಲಾಗುತ್ತಿದೆ. ಆದರೆ ಇದೀಗ ನಟಿ ತನುಶ್ರೀ ಅವರು ಸಿಕ್ಕಾಪಟ್ಟೆ ಶಾಕ್​ ಎನ್ನುವಂಥ ಮಾತನ್ನು ಹೇಳಿದ್ದು, ಅವರು ಆಡಿದ ಮಾತುಗಳಿಂದ ದೇಶವೇ ಬೆಚ್ಚಿಬಿದ್ದಿದೆ. ಅಷ್ಟಕ್ಕೂ ಅವರು ಹೇಳ್ತಿರೋದು ಏನೆಂದರೆ, ನಾನಾ ಪಾಟೇಕರ್​ ಸತ್ತೇ ಇಲ್ಲ. ಅಂದು ನಡೆದದ್ದು ಅವರ ಶವ ಸಂಸ್ಕಾರವೇ ಅಲ್ಲ ಎಂದಿರುವ ತನುಶ್ರೀ ದತ್ತಾ, ತಮ್ಮ ಹೇಳಿಕೆಗೆ ಪುಷ್ಟಿ ಕೊಡುವ ಹಲವಾರು ಅಂಶಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಸೂರ್ಯಾಸ್ತದ ವೇಳೆ ಶವ ಸಂಸ್ಕಾರ

ನಾನಾ ಪಾಟೇಕರ್ ಜೀವಂತವಾಗಿದ್ದಾರೆ ಎಂದಿರುವ ಅವರು, ಒಂದು ವೇಳೆ ಅವರು ಮೃತಪಟ್ಟಿದ್ದರೆ ಅವರ ದೇಹವನ್ನು ಯಾರೂ ಏಕೆ ನೋಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವರ ಅಂತ್ಯಕ್ರಿಯೆಯ ಸಮಯದ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ತನುಶ್ರೀ. ಅಲ್ಲಿ ಸುಟ್ಟಿರುವುದು ಅವರ ಶವ ಅಲ್ಲವೇ ಅಲ್ಲ. ಏಕೆಂದರೆ ಹಿಂದೂ ಸಂಪ್ರದಾಯದಲ್ಲಿ ಸೂರ್ಯಾಸ್ತದ ಬಳಿಕ ಶವ ಸಂಸ್ಕಾರ ಮಾಡುವುದಿಲ್ಲ. ಆದರೆ ನಾನಾ ಪಾಟೇಕರ್​ ಅವರದ್ದು ಎನ್ನಲಾದ ಶವವನ್ನು ಮಧ್ಯರಾತ್ರಿ 11 ಗಂಟೆಗೆ ಮಾಡಿದ್ದೇಕೆ ಎಂದಿರುವ ಅವರು, ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿರುವ ನಟಿ ತನುಶ್ರೀ ದತ್ತಾ, ನಾನಾ ಪಾಟೇಕರ್ ಸಾವಿನ ಬಗ್ಗೆ ಹಲವು ಅನುಮಾನಗಳನ್ನು ಎತ್ತಿದ್ದಾರೆ. ಅಂತಹ ದೊಡ್ಡ ಕಲಾವಿದನ ಅಂತಿಮ ದರ್ಶನಕ್ಕೆ ಜನರಿಗೆ ಏಕೆ ಅವಕಾಶ ನೀಡಲಿಲ್ಲ ಮತ್ತು ಅವರ ಅಂತ್ಯಕ್ರಿಯೆಯನ್ನು ಇಷ್ಟು ತಡರಾತ್ರಿ ಇಷ್ಟು ತರಾತುರಿಯಲ್ಲಿ ಏಕೆ ಮಾಡಲಾಯಿತು ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಚಲನಚಿತ್ರೋದ್ಯಮ ಮತ್ತು ಮಾಧ್ಯಮದ ಯಾವುದೇ ವ್ಯಕ್ತಿ ನಾನಾ ಪಾಟೇಕರ್ ಅವರ ದೇಹವನ್ನು ನೋಡಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.

ಯಾರೂ ದೇಹ ನೋಡಿಲ್ಲ

"ಬಾಲಿವುಡ್ ಚಿತ್ರರಂಗ ಮತ್ತು ಮಾಧ್ಯಮಗಳಲ್ಲಿ ಯಾರೂ ನಾನಾ ಪಾಟೇಕರ್ ಅವರ ದೇಹವನ್ನು ನೋಡಿಲ್ಲ. ಮಧ್ಯರಾತ್ರಿಯಲ್ಲಿ ಅವರ ಅಂತ್ಯಕ್ರಿಯೆಗೆ ಇಷ್ಟೊಂದು ಜನ ಧಾವಿಸುತ್ತಿದ್ದರು ಏಕೆ? ಹಿಂದೂ ಧರ್ಮದ ಪ್ರಕಾರ, ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ನಡೆಸಲಾಗುವುದಿಲ್ಲ, ಆದರೆ ಅವರ ಅಂತ್ಯಕ್ರಿಯೆಯನ್ನು ರಾತ್ರಿ 11:28 ಕ್ಕೆ ಮಾಡಲಾಗಿದೆ. ರಾತ್ರಿಯ ಕತ್ತಲೆಯಲ್ಲಿ ಅವರನ್ನು ಅಂತ್ಯಕ್ರಿಯೆ ಮಾಡಲು ಇಷ್ಟೊಂದು ಆತುರ ಏನಿತ್ತು? ಅವರ ಕುಟುಂಬ ಸದಸ್ಯರಿಗೂ ಅವರ ಮುಖವನ್ನು ಚೆನ್ನಾಗಿ ನೋಡುವ ಅವಕಾಶ ಸಿಕ್ಕಿದೆಯೇ ಎಂದು ನಟಿ ಪ್ರಶ್ನಿಸಿದ್ದಾರೆ.

ನಾನಾ ಪಾಟೇಕರ್ ಅವರಂತಹ ದೊಡ್ಡ ಕಲಾವಿದರ ಮರಣದ ನಂತರ ಪ್ರಾರ್ಥನಾ ಸಭೆ ಏಕೆ ನಡೆಯಲಿಲ್ಲ ಎಂದು ತನುಶ್ರೀ ಪ್ರಶ್ನಿಸಿದ್ದಾರೆ. ಬಾಲಿವುಡ್ ಜನರು ಗೌರವ ಸಲ್ಲಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಅಂತಹ ದೊಡ್ಡ ವ್ಯಕ್ತಿಗೆ ಪ್ರಾರ್ಥನಾ ಸಭೆ ನಡೆಸಬೇಕಿತ್ತು. ಹಿಂದೂ ಸಂಪ್ರದಾಯದ ಪ್ರಕಾರ, ಜನರು ಅಂತಿಮ ನಮನ ಸಲ್ಲಿಸುತ್ತಾರೆ, ದೇಹವನ್ನು ಮುಟ್ಟುತ್ತಾರೆ ಮತ್ತು ನಮನ ಸಲ್ಲಿಸುತ್ತಾರೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಗೌರವ ಸಲ್ಲಿಸುತ್ತಾರೆ, ಆದರೆ ಅವರು ಅವರ ದೇಹವನ್ನು ನೋಡಿದ್ದಾರೆಯೇ? ಅವರ ಮುಖಕ್ಕೆ ಬಟ್ಟೆ ಮುಚ್ಚಲಾಗಿತ್ತು. ಹಳ್ಳಿಯ ಜನರು ಈ ಪ್ರಶ್ನೆಯನ್ನು ಕೇಳದಿರಬಹುದು, ಆದರೆ ಇತರರು ಯಾರ ಅಂತ್ಯಕ್ರಿಯೆಗಳನ್ನು ನಡೆಸಲಾಯಿತು ಎಂದು ಕೇಳುತ್ತಿದ್ದಾರೆ ಎಂದು ತನುಶ್ರೀ ದತ್ತಾ ಪ್ರಶ್ನೆ ಎತ್ತಿದ್ದಾರೆ.