ವರಮಹಾಲಕ್ಷ್ಮೀ ಹಬ್ಬದಂದು ಮನೆಗೆ ಲಕ್ಷ್ಮೀ ಬಂದರೆ ಚಿತ್ರರಂಗಕ್ಕೆ ಹೆಸರು ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್ ಎರಡೂ ಬರುತ್ತದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ 3 D ಯಲ್ಲಿ ಬರುತ್ತಿದೆ ಕುರುಕ್ಷೇತ್ರ. ಬರೋಬ್ಬರಿ 9 ಕೋಟಿಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿದೆ. ಏನಪ್ಪಾ ಈ ಚಿತ್ರಕ್ಕೆ ಇಷ್ಟೊಂದು ಯಾಕೆ ಅಂತಾನಾ ಇಲ್ಲಿದೆ ನೋಡಿ.

ಮುನಿರತ್ನ ಕುರುಕ್ಷೇತ್ರ ನೋಡಲು 10 ಕಾರಣಗಳು!

ಕೆಜಿಎಫ್ ಅಬ್ಬರವೋ ಏನೋ ಗೊತ್ತಿಲ್ಲ. ಆದರೆ ಕನ್ನಡ ಸಿನಿಮಾದ ಖದರ್‌ ಒಂದು ಮಟ್ಟಕ್ಕೆ ಬೆಳೆದಿದ್ದೆ ದರ್ಶನ್ ರಿಂದ ಎಂದರೆ ತಪ್ಪಾಗಲಿಕ್ಕಿಲ್ಲ. ಚಾಲೆಂಜಿಂಗ್ ಹೆಸರು ಏನ್ ಕಮ್ಮಿನಾ? ಇಡೀ ಚಿತ್ರರಂಗದಲ್ಲೇ ಬಹು ಬೇಡಿಕೆಯ ನಟನಾಗಿದ್ದು ಇದು ಅವರ 50 ನೇ ಸಿನಿಮಾ.

ಸಖತ್‌ ಸೌಂಡ್‌ ಮಾಡುತ್ತಿದೆ ಕುರುಕ್ಷೇತ್ರದ ಪ್ರೇಮ ಗೀತೆ!

ಇನ್ನು ಚಿತ್ರದಲ್ಲಿ ಕನ್ನಡ ಸಿನಿಮಾ ಕಲಾವಿದರು ಮಾತ್ರವಲ್ಲದೇ ಬಾಲಿವುಡ್‌ ವಿಲನ್ ಸೋನು ಸೂದ್ ಹಾಗೂ ಡ್ಯಾನಿಶ್ ಅಖ್ತರ್ ಸೈಫ್‌ ಅಭಿನಯಿಸಿದ್ದಾರೆ. ಮಹಾಭಾರತದ ಬಗ್ಗೆ ಗರಿಗರಿಯಾಗಿ ಕಥೆ ಹೇಳುತ್ತಾ ಸಾಗುವಂತಹ ಸಿನಿಮಾ ಬಾಲಿವುಡ್‌ನಲ್ಲಿ ಕಡಿಮೆ. ಒಂದು ರಾಜ್ಯಕ್ಕೆ ಸೀಮಿತವಾದ ಕಥೆ ಇದಲ್ಲವೆಂದು ಪಂಚ ಭಾಷೆಗಳಲ್ಲಿ ರಿಲೀಸ್ ಮಾಡುವ ನಿರ್ಧಾರ ಮಾಡಿದೆ ಚಿತ್ರತಂಡ.