ಸೂಪರ್‌ಸ್ಟಾರ್ ಆರ್ಯ, ಮಂಜು ವಾರಿಯರ್ ನಟನೆಯ 'ಮಿಸ್ಟರ್ ಎಕ್ಸ್' ಸಿನಿಮಾ ಏಪ್ರಿಲ್ 17ಕ್ಕೆ ರಿಲೀಸ್ ಆಗಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಕಲೆಕ್ಷನ್ ಮಾತ್ರ ನಿರೀಕ್ಷೆ ತಲುಪಿಲ್ಲ. ಸೋಮವಾರದ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ.

ಸೂಪರ್ ತಾರೆಯರಾದ ಆರ್ಯ, ಶರತ್ ಕುಮಾರ್, ಗೌತಮ್ ಕಾರ್ತಿಕ್, ಮಂಜು ವಾರಿಯರ್, ರವಿ, ಅನಘ ಮತ್ತು ರೈಸಾ ವಿಲ್ಸನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ತಮಿಳಿನ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 'ಮಿಸ್ಟರ್ ಎಕ್ಸ್'. ಮನು ಆನಂದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಏಪ್ರಿಲ್ 17 ರಂದು ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ.

Add Asianetnews Kannada as a Preferred SourcegooglePreferred

ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ಒಳ್ಳೆ ಮಾತುಗಳು ಕಲೆಕ್ಷನ್‌ನಲ್ಲಿ ಕಾಣುತ್ತಿಲ್ಲ ಅಂತ ವರದಿಗಳು ಹೇಳುತ್ತಿವೆ. ಸಿನಿಮಾಗೆ ಕಡಿಮೆ ಶೋಗಳು ಸಿಕ್ಕಿರೋದು ಕೂಡ ಕಲೆಕ್ಷನ್ ಕುಸಿತಕ್ಕೆ ಒಂದು ಕಾರಣ ಎನ್ನಲಾಗ್ತಿದೆ. ಸೋಮವಾರ ಈ ಚಿತ್ರ 84 ಲಕ್ಷ ರೂಪಾಯಿ ಗಳಿಸಿದ್ದು, ಭಾರತದ ಬಾಕ್ಸ್ ಆಫೀಸ್‌ನಲ್ಲಿ ಒಟ್ಟಾರೆ 2.20 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ.

ಮಾವೆರಿಕ್ ಮೂವೀಸ್ ಮತ್ತು ಪ್ರಿನ್ಸ್ ಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ವಿನೀತ್ ಜೈನ್ ಹಾಗೂ ಎಸ್. ಲಕ್ಷ್ಮಣ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಷ್ಣು ವಿಶಾಲ್ ನಟನೆಯ ಹಿಟ್ ಸಿನಿಮಾ 'FIR' ನಂತರ ಮನು ಆನಂದ್ ನಿರ್ದೇಶಿಸಿರುವ ಎರಡನೇ ಚಿತ್ರವಿದು. ಗುಪ್ತಚರ ಇಲಾಖೆಯ ನಿಗೂಢ ಘಟನೆಗಳನ್ನು ಈ ಸಿನಿಮಾ ಆಧರಿಸಿದೆ.

ಚಿತ್ರದ ಕಥೆ ಏನು?

ದೇಶಕ್ಕೆ ಕಂಟಕವಾಗಿದ್ದ ಐದು ದೊಡ್ಡ ಘಟನೆಗಳನ್ನು ಗುಪ್ತಚರ ಸಂಸ್ಥೆಗಳು ತಡೆದಿದ್ದನ್ನೇ ಆಧಾರವಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ. ರಾಜಸ್ಥಾನ, ಹೊಸೂರು, ಚೆನ್ನೈ, ಮೈಸೂರು, ತೂತುಕುಡಿ ಸೇರಿದಂತೆ ಭಾರತದ ಹಲವು ಕಡೆಗಳಲ್ಲಿ ಸುಮಾರು 100 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ವಿದೇಶಿ ದೃಶ್ಯಗಳನ್ನು ಮೊದಲು ಉಗಾಂಡಾದಲ್ಲಿ ಶೂಟ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ನಂತರ ಅಜರ್‌ಬೈಜಾನ್‌ನಲ್ಲಿ ಆ ಭಾಗಗಳನ್ನು ಚಿತ್ರೀಕರಿಸಲಾಗಿದೆ.

ಈ ಚಿತ್ರಕ್ಕೆ ಅರುಣ್ ವಿನ್ಸೆಂಟ್ ಛಾಯಾಗ್ರಹಣ, ದೀಪು ನೈನನ್ ಥಾಮಸ್ ಸಂಗೀತ, ಮತ್ತು ಪ್ರಸನ್ನ ಜಿ.ಕೆ. ಸಂಕಲನ ಮಾಡಿದ್ದಾರೆ. ಶ್ರಾವಂದಿ ಸೈನಾಧ್ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಸ್ಟಂಟ್ ಸಿಲ್ವ ಸಾಹಸ ನಿರ್ದೇಶನ ಮಾಡಿದ್ದಾರೆ. ಇಂದುಲಾಲ್ ಕವೀದ್ ಕಲಾ ನಿರ್ದೇಶಕರಾಗಿದ್ದರೆ, ಉತ್ತರ ಮೆನನ್ ಮತ್ತು ದೀಪಾಲಿ ನೂರ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಎ.ಎಸ್. ದಿನೇಶ್ ಮತ್ತು ಮನು ಶಿವನ್ ಚಿತ್ರದ ಪಿಆರ್‌ಒ ಆಗಿದ್ದಾರೆ.