ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಲಿಯಾ ಭಟ್ ಹಾಗೂ ಕಂಗನಾ ವಿವಾದಕ್ಕೆ ಟ್ಟೀಟರ್‌ನಲ್ಲಿ ಸಹೋದರಿ ಹಾಗೂ ತಾಯಿ ಎಂಟ್ರಿಯಾಗಿದ್ದಾರೆ.

ಸಿನಿಮಾ ಹಾಗೂ ಸಾಮಾಜಿಕ ಜಾಲತಾಣದಿಂದ ಎಂದಿಗೂ ದೂರ ಉಳಿದ ಕಂಗನಾ ಸಹೋದರಿ ರಂಗೋಲಿ ಸಿಡಿದೇಳಲು ಅಲಿಯಾ ತಾಯಿ ಸೋನಿ ಟ್ಟೀಟ್ ಕಾರಣ. ಕೆಲ ದಿನಗಳ ಹಿಂದೆ ಟ್ಟೀಟರ್ ಖಾತೆಯಲ್ಲಿ 'ಕಂಗನಾಗೆ ಚಿತ್ರರಂಗದಲ್ಲಿ ಬ್ರೇಕ್ ಸಿಕ್ಕಿದ್ದು ನನ್ನ ಪತಿ ಮಹೇಶ್ ಭಟ್‌ರಿಂದ. ಆದರೆ ಅದನ್ನು ಮರೆತು ಕಂಗನಾ, ಅಲಿಯಾ ಹಾಗೂ ಮಹೇಶ್ ಮೇಲೆ ಆರೋಪ ಮಾಡಿ ಮಾತನಾಡುತ್ತಿದ್ದಾರೆ ' ಎಂದು ಟ್ಟೀಟ್ ಮಾಡಿದರು. ಇದನ್ನು ಕಂಡು ಸುಮ್ಮನಿರಲಾರದೆ ಕಂಗನಾ ಸಹೋದರಿ ಖಡಕ್ ಉತ್ತರ ನೀಡಿದರು.

 

'ಕಂಗನಾಳ ವಾಹ್ ಲಮ್ಹೇ ಚಿತ್ರದ ಪ್ರಿವ್ಯೂವ್ ವೇಳೆ ಅದೇ ಚಿತ್ರದ ನಿರ್ಮಾಪಕ ಮಹೇಶ್ ಭಟ್ ಕಂಗನಾ ಮೇಲೆ ಚಪ್ಪಲಿ ಎಸೆದಿದ್ದರು. ಆಕೆಯನ್ನು ಸಿನಿಮಾ ನೋಡಲು ಬಿಟ್ಟಿರಲಿಲ್ಲ ಆಗ ಆಕೆಗೆ ಕೇವಲ 18 ವರ್ಷವಷ್ಟೇ. ಅಷ್ಟೇ ಅಲ್ಲ ಕಂಗನಾಗೆ ಬ್ರೇಕ್ ಕೊಟ್ಟವರು ಮಹೇಶ್ ಭಟ್ ಅಲ್ಲ ನಿರ್ದೇಶಕ ಅನುರಾಗ್ ಬಸು ' ಎಂದು ಕಂಗನಾ ಸಹೋದರಿ ರಂಗೋಲಿ ತಿರುಗೇಟು ಕೊಟ್ಟಿದ್ದಾರೆ.

‘ಬಾಹುಬಲಿ’ಯನ್ನು ಮೀರಿಸ್ತಾರಾ ಕಂಗನಾ ರಾಣಾವತ್?

ಕಂಗನಾ ಹಾಗೂ ಅಲಿಯಾ ನಡುವಿನ ಫೈಟ್ ಕುಟುಂಬದವರನ್ನು ಎಳೆಯುವ ಮಟ್ಟಕ್ಕೆ ಹೋಗಿದೆ. ಇದು ಇನ್ನೂ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ನೋಡಬೇಕಿದೆ.