ನಟಿಯಾಗಬೇಕೆಂಬ ಬಯಕೆ ಇತ್ತು! 

ನಟಿಯಾಗ ಬೇಕೆಂಬ ಕನಸು ಹೊತ್ತ  ಕೊಡಗಿನ ಕುವರಿ ಲತಾ ಗಿರೀಶ್‌ 'ಮನೆದೇವ್ರು' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಮಾಡೆಲಿಂಗ್ ಕಡೆಗೂ ಇತ್ತು ಮೋಹ! 

ಕಿರುತೆರೆ ನಟಿಯಾಗಿ ವೀಕ್ಷಕರ ಮನದಲ್ಲಿ ಮಿನುಗುತ್ತಿರುವ ಲತಾಳಿಗೆ ಮಾಡೆಲಿಂಗ್ ಎಂದರೆ ಪ್ರೀತಿ. ಮಿಸ್ ಕರ್ನಾಟಕ ಆಗಿ ಅವರು ಆಯ್ಕೆ ಆದದ್ದು ಅವರ ಮಾಡೆಲಿಂಗ್ ಪ್ರೀತಿಗೆ ಸಾಕ್ಷಿ. 

ಇಂಜಿನಿಯರಿಂಗ್ ಓದಿ ನ್ಯೂಸ್ ರೀಡರ್ ಆಗಬೇಕಿದ್ದವರು ಈಗ ಕಿರುತೆರೆ ನಟಿ!

ಮನೆದೇವ್ರು ಧಾರಾವಾಹಿಯಿಂದ ಕನಸು ನನಸಾಯಿತು

ಸಣ್ಣವಳಿರುವಾಗಿನಿಂದಲೂ ನನಗೆ ನಟಿಯಾಗಬೇಕು ಎಂಬ ಆಸೆ ಸದಾ ಕಾಡುತ್ತಿತ್ತು. ಸತ್ಯ ಹೇಳಬೇಕೆಂದರೆ ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೆ. ಮನೆದೇವ್ರು ಧಾರಾವಾಹಿಯ ಮೂಲಕ ನನ್ನ ಆಸೆ ನೇರವೇರಿತು. ಆ ಧಾರಾವಾಹಿಯಲ್ಲಿ ನನಗೆ ದೊರೆತ ಪಾತ್ರ ಚಿಕ್ಕದಾಗಿದ್ದರೂ ಅದಕ್ಕೆ ಅದರದೇ ಆದ  ತೂಕವಿತ್ತು. ಇಂದು ನಾನು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಮನೆದೇವ್ರು ಧಾರಾವಾಹಿಯೇ ಕಾರಣ ಎನ್ನುತ್ತಾರೆ ಲತಾ ಗಿರೀಶ್. 

ಪೂರ್ವಿ ಎಂದೇ ಚಿರಪರಿಚಿತ! 

ಮನೆದೇವ್ರು ಧಾರಾವಾಹಿಯ ಮೂಲಕ ನಾನು ನಟನೆಯ ಬಗ್ಗೆ ಸಾಕಷ್ಟು ಕಲಿತೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನನಗೆ ಹಿರಿಯ ಕಲಾವಿದರಿಂದಲೂ ಉತ್ತಮ ಪ್ರೋತ್ಸಾಹ ದೊರೆಯಿತು‌. ಅಷ್ಟೇ ಅಲ್ಲದೆ ನಾನು ನಟಿಸುವಾಗ ತಪ್ಪುಗಳಾದರೆ ಅವರು ಸರಿ ಮಾಡುತ್ತಿದ್ದರು. ನಾನು ಇದೀಗ ಕ್ಷಮಾ ಧಾರಾವಾಹಿಯಲ್ಲಿ ನಟಿಸುತ್ತಿದ್ದರೂ ಜನರು ನನ್ನನ್ನು ಪೂರ್ವಿ ಎಂದು ಗುರುತಿಸುವಾಗ ಬಹಳ ಸಂತೋಷವಾಗುತ್ತದೆ ಎನ್ನುತ್ತಾರೆ ಲತಾ. 

ಪೋಟೋ ಕ್ರೇಜ್‌ನಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಮಂಗಳೂರು ಹುಡುಗಿ !

ನಟನೆಗೂ ಸೈ ನಾಟ್ಯಕ್ಕೂ ಸೈ

ನಟನೆಯ ಹೊರತಾಗಿ ಲತಾ ನೃತ್ಯಪ್ರಿಯರೂ ಹೌದು. ಈಗಾಗಲೇ ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಲತಾ ಓದಿನಲ್ಲೂ ಮುಂದಿದ್ದಾರೆ. ನಟನೆಯ ಜೊತೆಗೆ ಓದನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ಲತಾ ಬಿಸಿಎ ಪದವಿ ಪಡೆದಿದ್ದಾರೆ. 

ಶಿಕ್ಷಣವೂ ಮುಖ್ಯ ಎನ್ನುತ್ತಾರೆ ಮಂಜಿನ ನಗರಿ ಚೆಲುವೆ

ನನಗೆ ನಟನೆ ಅದೆಷ್ಟು ಮುಖ್ಯವೋ ಅಷ್ಟೇ ಶಿಕ್ಷಣ ಕೂಡಾ ಮುಖ್ಯ. ನಟನೆ ಮತ್ತು ಶಿಕ್ಷಣ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು.  ನಟನೆಯ ಅವಕಾಶ ಬಂದಾಗ ಹೆಚ್ಚಿನವರು ಓದನ್ನು ಅರ್ಧಕ್ಕೆ ಬಿಡುತ್ತಾರೆ. ಯಾವತ್ತಿಗೂ ಹಾಗೇ ಮಾಡಲೇಬಾರದು. ಬಹಳ  ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದು ನಟಿಯಾಗಿ ಮಿಂಚುತ್ತಿದ್ದರೂ  ನನ್ನ ಮೊದಲ ಆದ್ಯತೆ ಏನಿದ್ದರೂ ಶಿಕ್ಷಣಕ್ಕೆ ಎನ್ನುವ ಕೊಡಗಿನ ಸುಂದರಿ ಇದೀಗ ಉನ್ನತ ವ್ಯಾಸಂಗದ ತಯಾರಿಯಲ್ಲಿ ಇದ್ದಾರೆ. 

‘ಯಾರೇ ನೀ ಮೋಹಿನಿ’ ಯಲ್ಲಿ ಕಾಡುವ ನಟನ ನೆಗೆಟಿವ್ ಶೇಡ್ ಇದು!

ಅಪ್ಪ ಅಮ್ಮನ ಪ್ರೇರಣೇ ಕಾರಣ

ಬಣ್ಣದ ಲೋಕದಲ್ಲಿ ನಾನು ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ಅಪ್ಪ ಅಮ್ಮ. ಅವರ ಬೆಂಬಲದಿಂದಲೇ ಇದೆಲ್ಲಾ ಸಾಧ್ಯವಾದುದು ಎನ್ನುತ್ತಾರೆ ಲತಾ. 

- ಅನಿತಾ ಬನಾರಿ