ಏಕಕಾಲಕ್ಕೆ ಪಂಚಭಾಷೆಗಳಲ್ಲಿ ತೆರೆ ಕಂಡ ಡಾರ್ಲಿಂಗ್ ’ಸಾಹೋ’ ಸಿನಿಮಾ ಅಭಿಮಾನಿಗಳ ಮನಸ್ಸು ಕದ್ದಿರುವುದಂತೂ ಗ್ಯಾರಂಟಿ. 2019 ಮೋಸ್ಟ್‌ ಟಾಕ್ ಆಫ್ ದಿ ಸಿನಿಮಾ ಆಗಿದ್ದು ಮೊದಲ ಪ್ರದರ್ಶನ ಯಶಸ್ಸಿಯಾಗಿದೆ.

ಸಾಹೋ ಸಿನಿಮಾಗೆ ವಿವಾದವೊಂದು ತಳಕು ಹಾಕಿಕೊಂಡಿದೆ. ಬೆಂಗಳೂರು ಮೂಲದ ಕಲಾವಿದೆಯೊಬ್ಬರು ತಮ್ಮ ಆರ್ಟನ್ನು ಸಾಹೋದಲ್ಲಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಕಲಾವಿದೆ ಶಿಲೋ ಶಿವ್ ಸುಲೇಮಾನ್ ಪರ ನಟಿ ಲೀಸಾ ರೇ ಮಾತನಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

View post on Instagram

ನಾವು ಕೃತಿಚೌರ್ಯದ ಬಗ್ಗೆ ಮಾತನಾಡಬೇಕಿದೆ. ಚಿತ್ರತಂಡ ಈ ರೀತಿ ಕಲಾವಿದೆಯೊಬ್ಬರ ಆರ್ಟನ್ನು ಅವರ ಅನುಮತಿ ಇಲ್ಲದೇ ಬಳಸಿಕೊಳ್ಳುವುದು ತಪ್ಪು. ಇದು ಯಾರೂ ಒಪ್ಪತಕ್ಕಂತದ್ದಲ್ಲ. ಚಿತ್ರತಂಡ ಕಲಾವಿದೆಯನ್ನು ಸಂಪರ್ಕಿಸಿಲ್ಲ. ಅವರ ಅನುಮತಿ ಪಡೆದಿಲ್ಲ. ಹಾಗಾಗಿ ಇದು ಸರಿಯಲ್ಲ ಎಂದಿದ್ದಾರೆ. 

ಸಕ್ಸಸ್ ಖುಷಿಯಲ್ಲಿರುವ ‘ಸಾಹೋ’ಗೆ ಹೊಸ ವಿವಾದ ತಳುಕು

ಸಾಹೋ ಸಿನಿಮಾದಲ್ಲಿ ಬರುವ ಬೇಬಿ ವೋಂಟ್ ಯು ಟೆಲ್ ಮೀ ಹಾಡಿನ ಹಿಂಭಾಗದಲ್ಲಿ ಕಾಣುವ ಪೋಸ್ಟರನ್ನು ಕದಿಯಲಾಗಿದೆ ಎಂದು ಸುಲೇಮಾನ್ ಆರೋಪಿಸಿದ್ದಾರೆ. ಇದುವರೆಗೂ ಸಾಹೋ ತಂಡ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.