ಏಕಕಾಲಕ್ಕೆ ಪಂಚಭಾಷೆಗಳಲ್ಲಿ ತೆರೆ ಕಂಡ ಡಾರ್ಲಿಂಗ್ ’ಸಾಹೋ’ ಸಿನಿಮಾ ಅಭಿಮಾನಿಗಳ ಮನಸ್ಸು ಕದ್ದಿರುವುದಂತೂ ಗ್ಯಾರಂಟಿ. 2019 ಮೋಸ್ಟ್ ಟಾಕ್ ಆಫ್ ದಿ ಸಿನಿಮಾ ಆಗಿದ್ದು ಮೊದಲ ಪ್ರದರ್ಶನ ಯಶಸ್ಸಿಯಾಗಿದೆ.
ಶ್ರದ್ಧಾ ಕಪೂರ್, ಪ್ರಭಾಸ್ ಅಭಿನಯದ ಸಾಹೋ ದೇಶದಾದ್ಯಂತ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಟೀಸರ್ ರಿಲೀಸ್ ಆದಾಗಿನಿಂದಲೂ ಸಾಹೋ ಟಾಕ್ ಆಫ್ ದಿ ಟೌನ್ ಆಗಿತ್ತು. ಟೀಸರ್ ನಲ್ಲಿರುವ ಆ್ಯಕ್ಷನ್ ಸೀನ್ ಸಕತ್ ಥ್ರಿಲ್ ಮೂಡಿಸಿತ್ತು. ಇಂದು ಚಿತ್ರ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಪಾಸಿಟೀವ್, ನೆಗೆಟೀವ್ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಚಿತ್ರ ವಿಮರ್ಶೆ: 'ಸಾಹೋ'ಗೆ ಸಾಥ್ ಕೊಟ್ರಾ ಕನ್ನಡಿಗರು?
ಇದೀಗ ಸಾಹೋಗೆ ಹೊಸ ವಿವಾದವೊಂದು ಸುತ್ತಿಕೊಂಡಿದೆ. ಬೆಂಗಳೂರು ಮೂಲದ ಆರ್ಟಿಸ್ಟ್ ಶಿಲೋ ಶಿವ್ ಸುಲೇಮಾನ್ ತಾವು ಬಿಡಿಸಿರುವ ಆರ್ಟ್ ವೊಂದನ್ನು ಚಿತ್ರತಂಡ ಕದ್ದಿದೆ ಎಂದು ಆರೋಪಿಸಿದ್ದಾರೆ.
ಸಾಹೋದಲ್ಲಿ ಬರುವ ಬೇಬಿ ವೊಂಟ್ ಯು ಟೆಲ್ ಮೀ ಹಾಡಿನಲ್ಲಿ ಈ ಆರ್ಟನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ನನ್ನ ಅನುಮತಿ ಪಡೆದಿಲ್ಲ ಎಂದು ಶಿಲೋ ಶಿವ್ ಸುಲೇಮಾನ್ ಆರೋಪಿಸಿದ್ದಾರೆ.
