ಇಲ್ಲಿಯವರೆಗೂ ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿದ್ದ ರಘು ಕೋವಿ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಇವರ ಮೊದಲ ನಿರ್ದೇಶನದ ಚಿತ್ರಕ್ಕೆ ಕೇರಳ ಬ್ಯೂಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಬರುತ್ತಿರುವುದು ಖಚಿತವಾಗಿದೆ.

ಕೈ ಎತ್ತಿ ಪೋಸ್ ಕೊಟ್ಟ ಮಲೈಕಾಗೆ ಕಾಡಿದ ಕಂಕುಳ ಕೂದಲು

ಈಗಾಗಲೇ ಕೇರಳಕ್ಕೆ ತೆರಳಿ ಪ್ರಿಯಾ ವಾರಿಯರ್‌ಗೆ ಕತೆ ಹೇಳಿ ಬಂದಿರುವ ರಘು ಕೋವಿ, ಕಣ್ಸನ್ನೆ ಹುಡುಗಿಯನ್ನು ಕನ್ನಡಕ್ಕೆ ತರುವಲ್ಲಿ ಸಫಲರಾಗಿದ್ದಾರೆ. ಈ ಚಿತ್ರಕ್ಕೆ ಕುಮಾರ್‌ ಬಂಗಾರಪ್ಪ ಪುತ್ರ ಅಥವಾ ಕ್ರೇಜಿಸ್ಟಾರ್‌ ರವಿಚಂದ್ರನ್‌ ಎರಡನೇ ಮಗ ವಿಕ್ಕಿ ನಾಯಕರಾಗುವ ಸಾಧ್ಯತೆಗಳಿವೆ.

ಆದರೆ, ನಿರ್ದೇಶಕರು ಮಾತ್ರ ಇನ್ನೂ ಯಾರನ್ನೂ ಪಕ್ಕಾ ಮಾಡಿಕೊಂಡಿಲ್ಲ. ಒಂದು ವೇಳೆ ಅಂದುಕೊಂಡಂತೆ ಆದರೆ ಕುಮಾರ್‌ ಬಂಗಾರಪ್ಪ ಪುತ್ರ ರಘು ಕೋವಿ ಚಿತ್ರದ ಮೂಲಕ ಕನ್ನಡಕ್ಕೆ ಚಿತ್ರರಂಗಕ್ಕೆ ಬರಲಿದ್ದಾರೆ.

ಆಗಸ್ಟ್‌ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಬಿ ಎಸ್‌ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ನೈಜ ಕತೆಯ ಆಧಾರಿತ ಪ್ರೇಮ ಸಿನಿಮಾ. ಕನ್ನಡದಲ್ಲಿ ಇದುವರೆಗೂ ಇಂಥ ಪ್ರೇಮ ಕತೆ ಬಂದಿಲ್ಲ. ಈ ಕಾರಣಕ್ಕೆ ಹೆಸರಿನಿಂದ ಹಿಡಿದು ಎಲ್ಲವನ್ನೂ ಭಿನ್ನವಾಗಿಯೇ ಇಡುವುದಕ್ಕೆ ಹೊರಟಿದ್ದಾರೆ.

ಬೋಳು ತಲೆಯಿಂದ ಶಾಕ್ ಆಗಲಿಲ್ಲ, ಬದುಕು ದೊಡ್ಡದು ಎನಿಸಿತು: ಸೋನಾಲಿ ಬೇಂದ್ರೆ

ಸತ್ಯ ಹೆಗಡೆ ಕ್ಯಾಮೆರಾ, ಅರ್ಜುನ್‌ ಜನ್ಯಾ ಸಂಗೀತ ಈ ಚಿತ್ರಕ್ಕಿದೆ. ಕೆಜಿಎಫ್‌ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದ ಶಿವು ಈ ಚಿತ್ರಕ್ಕೆ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ರಘು ಕೋವಿ ಈ ಹಿಂದೆಯೇ ಶಶಾಂಕ್‌ ಸಿನಿಮಾಸ್‌ನಲ್ಲಿ ಬಂದ ಅಜಯ್‌ ರಾವ್‌ ಚಿತ್ರಕ್ಕೆ ಹಾಗೂ ಕೆ ಮಂಜು ಪುತ್ರ ಶ್ರೇಯಸ್‌ ನಟನೆಯ ಚಿತ್ರಕ್ಕೆ ನಿರ್ದೇಶಕರಾಗಬೇಕಿತ್ತು.

ನಮ್ಮ ಚಿತ್ರಕ್ಕೆ ನಾಯಕಿ ಆಗಿ ಪ್ರಿಯಾ ವಾರಿಯರ್‌ ಆಯ್ಕೆ ಆಗಿದ್ದಾರೆ. ಚಿತ್ರದ ನಾಯಕ ಯಾರೆಂಬುದು ಸದ್ಯದಲ್ಲೇ ಹೇಳುವೆ. ರವಿಚಂದ್ರನ್‌ ಪುತ್ರ ವಿಕ್ಕಿ, ಕುಮಾರ್‌ ಬಂಗಾರ ಮಗನನ್ನು ಗಮನದಲ್ಲಿಟ್ಟುಕೊಂಡು ಕತೆ ಮಾಡಲಾಗಿದೆ. ಯಾರು ಹೀರೋ ಆಗುತ್ತಾರೆಂಬುದು ಮುಂದೆ ಹೇಳುತ್ತೇನೆ. ಸದ್ಯಕ್ಕೆ ನಮ್ಮ ಮುಂದಿರುವುದು ವಿಕ್ಕಿ, ಕುಮಾರ್‌ ಬಂಗಾರಪ್ಪ ಪುತ್ರ ಹಾಗೂ ರಾಮ್‌ಕುಮಾರ್‌ ಮಗ ಧೀರನ್‌.

- ರಘು ಕೋವಿ, ನಿರ್ದೇಶಕ