ಮಲೈಕಾ ಅರೋರ ಇಂಟರ್ ನೆಟ್ ಸೆನ್ಸೆಶನ್ ಎಂದೇ ಒಂದು ಕಾಲದಲ್ಲಿ ಕರೆಸಿಕೊಂಡವಳು. ತಮ್ಮ ಇಸ್ಟಾಗ್ರ್ಯಾಮ್ ನಲ್ಲಿ ಹಾಕಿರುವ ಪೋಟೋಕ್ಕೆ ಬರೋಬ್ಬರಿ ಒಂದು ಲಕ್ಷದ ಎಪ್ಪತೈದು ಸಾವಿರ  ಲೈಕ್ಸ್ ಬಂದಿದೆ.  ಆದರೆ ಅಷ್ಟೆ ಕಮೆಂಟ್ ಗಳು  ಬಂದಿವೆ.

ಮುಂಬೈ(ಮೇ. 29) ಹೊಸ ಫೋಟೋ ಶೂಟ್ ಒಂದರಲ್ಲಿ ಪಾಲ್ಗೊಂಡಿದ್ದ ಮಲೈಕಾ ಅರೋರಾ ಪೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹರಿಯಬಿಟ್ಟಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಚಿತ್ರಕ್ಕೆ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಲೈಕಾ ಎರಡು ಕೈಗಳನ್ನು ಮೇಲೆ ಎತ್ತಿ ಪೋಸ್ ಕೊಟ್ಟಿದ್ದಾರೆ. ಆದರೆ ಕೆಲವರ ಕಣ್ಣು ಅವರ ಕಂಕುಳ ಮೇಲೆ ಬಿದ್ದಿದ್ದು ಅಲ್ಲಿರುವ ಕೂದಲುಗಳ ಬಗ್ಗೆಯೂ ಕಮೆಂಟ್ ಮಾಡಿದ್ದಾರೆ. ಇನ್ನೊಂದು ಕಡೆ ಬಹುತೇಕರು ಮಲೈಕಾ ಅವರ ಕೇಶ ವಿನ್ಯಾಸವನ್ನು ಕೂಡಾ ಕೊಂಡಾಡಿದ್ದಾರೆ.

ಶತಕವೀರ ರಾಹುಲ್ ಹಿಂದೆ ಬಿದ್ದಳಾ ಈ ಬಾಲಿವುಡ್ ಸುಂದರಿ?

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಒಟ್ಟಾಗಿ ಓಡಾಡುತ್ತಿದ್ದಾರೆ ಎಂಬ ಗುಸು ಗುಸು ಬಾಲಿವುಡ್ ವಲಯದಲ್ಲಿ ಕೇಳಿಬಂದಿತ್ತು. ಇಬ್ಬರು ಒಟ್ಟಿಗೆ ಓಡಾಡುವ ಚಿತ್ರಗಳು ಸಖತ್ ವೈರಲ್ ಆಗಿದ್ದವು.

View post on Instagram