ನಟಿ ಸೋನಾಲಿ ಬೇಂದ್ರೆ ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಕಿಮೋಥೆರಪಿಗೂ ಮುನ್ನ ಅವರ ಕೂದಲನ್ನು ಸಂಪೂರ್ಣವಾಗಿ ತೆಗೆಸಿಕೊಂಡಿದ್ದರು. ಇದೀಗ ಸ್ವಲ್ಪ ಸ್ವಲ್ಪ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಭಾರತಕ್ಕೆ ಮೊದಲ ಬಾರಿ ಆಗಮಿಸಿದ್ದಾರೆ. 

ಈಗ ಅವರ ಕೂದಲು ಸ್ವಲ್ಪ ಉದ್ದವಾಗಿದ್ದು ಮತ್ತೊಮ್ಮೆ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. ಜೊತೆಗೆ ಹೇರ್ ಕಲರಿಂಗ್ ಕೂಡಾ ಮಾಡಿಸಿಕೊಂಡಿಸಿದ್ದಾರೆ. ಅವರ ಹೊಸ ಲುಕ್ ಅವರಿಗೆ ಹೊಸ ಆರಂಭವನ್ನು ನೀಡಿದೆ. ‘ ನನ್ನ ಕೂದಲು ಮುಂಚಿನಂತೆ ಬೆಳೆಯುತ್ತಿರುವುದಕ್ಕೆ ಖುಷಿಯಾಗಿದೆ. ಯಾವಾಗಲೂ ನನಗೆ ದಟ್ಟವಾದ ಕೂದಲೆಂದರೆ ಇಷ್ಟ. ನಿಧಾನವಾಗಿ ನನ್ನ ಕೂದಲು ಬೆಳೆಯುತ್ತಿದೆ. ಅದಕ್ಕೆ ಖುಷಿಯಾಗಿದ್ದೇನೆ ಎಂದಿದ್ದಾರೆ. 

 

ನನಗೆ ಕ್ಯಾನ್ಸರ್ ಎಂದು ತಿಳಿದಾಗ ಕಿಮೋಥೆರಪಿ ಮಾಡಿಸಿಕೊಳ್ಳುವಾಗ ಸಂಪೂರ್ಣವಾಗಿ ಕೂದಲನ್ನು ತೆಗೆಸಿಕೊಳ್ಳಬೇಕಾಗಿತ್ತು. ಬೇರೆ ಆಯ್ಕೆಯಿರಲಿಲ್ಲ. ಕೂದಲು ತೆಗೆಸಿಕೊಳ್ಳುವ ಮುನ್ನ ಸಹೋದರಿ ಜೊತೆ ನಿಂತುಕೊಂಡು ಫೋಟೋ ತೆಗೆಸಿಕೊಂಡೆ. ನನಗೆ ಇದು ಶಾಕ್ ಆಗಿರಲಿಲ್ಲ.  ಎಲ್ಲದಕ್ಕಿಂತ ಬದುಕುವುದು ತುಂಬಾ ಮುಖ್ಯ ಎನ್ನುವ ಪಾಠವನ್ನು ಅದು ನನಗೆ ಕಲಿಸಿತು ಎಂದು ಸೋನಾಲಿ ಹೇಳಿದ್ದಾರೆ.