Kriti Sanon: ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಕಬೀರ್ ಬೇರೊಬ್ಬ ಯುವತಿ ಜೊತೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇವರಿಬ್ಬರ ಬ್ರೇಕಪ್ ಬಗ್ಗೆ ಚರ್ಚೆ ಶುರುಮಾಡಿದರು.

ನಟಿ ಕೃತಿ ಸನೋನ್ ಮತ್ತು ಉದ್ಯಮಿ ಕಬೀರ್ ಬಹಿಯಾ ಬ್ರೇಕಪ್ ಮಾಡಿಕೊಂಡ್ರಾ? ಇಂಥದ್ದೊಂದು ಸುದ್ದಿ ಹಬ್ಬಿದೆ. ಇದಕ್ಕೆ ಕಾರಣ, ಕಬೀರ್ ಬೇರೊಬ್ಬ ಯುವತಿ ಜೊತೆ ಕಾಣಿಸಿಕೊಂಡಿದ್ದು. ಆದರೆ, ಕಬೀರ್ ಆಪ್ತರು ಈ ಸುದ್ದಿಯನ್ನು ತಳ್ಳಿಹಾಕಿದ್ದು, ಆ ಯುವತಿ ಫ್ಯಾಮಿಲಿ ಫ್ರೆಂಡ್ ಅಷ್ಟೇ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್‌ನಲ್ಲಿ ಲವ್, ಬ್ರೇಕಪ್ ಕಥೆಗಳಿಗೆ ಏನೂ ಕಮ್ಮಿ ಇಲ್ಲ. ಈಗ ನಟಿ ಕೃತಿ ಸನೋನ್ ಮತ್ತು ಲಂಡನ್ ಮೂಲದ ಉದ್ಯಮಿ ಕಬೀರ್ ಬಹಿಯಾ ಅವರ ಸಂಬಂಧದ ಬಗ್ಗೆ ಹೊಸ ಗಾಸಿಪ್ ಶುರುವಾಗಿದೆ. ಕಬೀರ್ ಬಹಿಯಾ ಬೇರೊಬ್ಬ ಯುವತಿ ಜೊತೆ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಾದ ನಂತರ, ಕೃತಿ ಮತ್ತು ಕಬೀರ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ರೆಡ್ಡಿಟ್ ಸೇರಿದಂತೆ ಹಲವೆಡೆ ಹರಿದಾಡುತ್ತಿವೆ.

ಕೃತಿ ಮತ್ತು ಕಬೀರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಈ ಹಿಂದೆಯೂ ಹಲವು ಬಾರಿ ಸುದ್ದಿಯಾಗಿತ್ತು. ತಾನು ಚಿತ್ರರಂಗದವರಲ್ಲದ ವ್ಯಕ್ತಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಕೃತಿ ಒಂದು ಚಾಟ್ ಶೋನಲ್ಲಿ ಒಪ್ಪಿಕೊಂಡಿದ್ದರು. ಇಬ್ಬರೂ ಹಲವು ಕೌಟುಂಬಿಕ ಕಾರ್ಯಕ್ರಮ, ವೆಕೇಷನ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.

ವೈರಲ್ ಫೋಟೋ ಹಿಂದಿನ ಕಥೆ

ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಕಬೀರ್ ಬೇರೊಬ್ಬ ಯುವತಿ ಜೊತೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇವರಿಬ್ಬರ ಬ್ರೇಕಪ್ ಬಗ್ಗೆ ಚರ್ಚೆ ಶುರುಮಾಡಿದರು. ಕೃತಿ ಜೊತೆಗಿನ ಸಂಬಂಧ ಮುರಿದುಬಿತ್ತೇ ಎಂದು ಹಲವರು ಪ್ರಶ್ನಿಸಿದ್ದರು.

ವದಂತಿಗೆ ಬ್ರೇಕ್ ಹಾಕಿದ ಆಪ್ತರು

ಆದರೆ, ಕಬೀರ್ ಆಪ್ತ ಮೂಲಗಳು ಈ ಬ್ರೇಕಪ್ ವದಂತಿಯನ್ನು ತಳ್ಳಿಹಾಕಿವೆ. ಫೋಟೋದಲ್ಲಿರುವ ಯುವತಿ ಕಬೀರ್ ಅವರ ಫ್ಯಾಮಿಲಿ ಫ್ರೆಂಡ್, ಆಕೆಯನ್ನು ಕಬೀರ್ ತಂಗಿಯಂತೆ ಕಾಣುತ್ತಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. "ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಕಬೀರ್ ಮತ್ತು ಆ ಹುಡುಗಿಯ ಫೋಟೋವನ್ನು ತಪ್ಪಾಗಿ ಅರ್ಥೈಸಲಾಗಿದೆ. ಆಕೆ ಅವರ ಫ್ಯಾಮಿಲಿ ಫ್ರೆಂಡ್, ತಂಗಿ ಇದ್ದ ಹಾಗೆ. ಜನರು ಇಷ್ಟು ಬೇಗ ತೀರ್ಮಾನಕ್ಕೆ ಬಂದು ಸುಳ್ಳು ಸುದ್ದಿ ಹಬ್ಬಿಸುವುದು ಬೇಸರದ ಸಂಗತಿ" ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಈ ಎಲ್ಲಾ ವದಂತಿಗಳು ಸುಳ್ಳು ಅನ್ನೋದು ಸ್ಪಷ್ಟ. ಸದ್ಯ ಕೃತಿ ಸನೋನ್ ತಮ್ಮ 'ಕಾಕ್‌ಟೇಲ್ 2' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ.