ಲತಾ ಮಂಗೇಶ್ಕರ್ ಹಾಡನ್ನು ಕೊಲ್ಕತ್ತಾ ರೈಲ್ವೇ ಸ್ಟೇಷನ್ ನಲ್ಲಿ ಹಾಡುತ್ತಿದ್ದ ಸೋನು ಮಂಡಲ್ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್ ಆದರು. ಇವರ ಧ್ವನಿಯಲ್ಲಿ ಲತಾ ಜೀ ಹಾಡಿರುವ ’ಏಕ್ ಪ್ಯಾರ್ ಕ ನಗ್ಮಾ’ ಹೈ ಹಾಡು ಇವರ ಬದುಕಿನ ನಗ್ಮಾವನ್ನೇ ಬದಲಿಸಿತು. 

ಹಿಮೇಶ್ ರೇಶಮಿಯಾ ಜೊತೆ ’ತೇರಿ ಮೇರಿ ಕಹಾನಿ’ ಎಂದ ಜೂನಿಯರ್ ಲತಾ ಮಂಗೇಶ್ಕರ್

ಸೋನುನಲ್ಲಿರುವ ಪ್ರತಿಭೆಯನ್ನು ಗುರುತಿಸಿರುವ ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ’ತೆರಿ ಮೇರಿ ಕಹಾನಿ’ ಹಾಡು ಹೇಳಲು ಅವಕಾಶ ಕೊಟ್ಟರು. ಇದಾದ ನಂತರ ಅವಕಾಶಗಳು ರಾನು ರನ್ನು ಹುಡುಕಿಕೊಂಡು ಬರುತ್ತಿದೆ. ಸಿನಿಮಾಗಳಲ್ಲಿ ಆಫರ್ ಗಳು ಹುಡುಕಿಕೊಂಡು ಬರಲು ಶುರುವಾಗಿದೆ. ರಾನು ಅದೃಷ್ಟವೇ ಬದಲಾಗಿ ಹೋಗಿದೆ. ಇನ್ನೂ ಒಂದು ದೊಡ್ಡ ವಿಚಾರವೆಂದರೆ ಕಳೆದ 10 ವರ್ಷಗಳಿಂದ ದೂರವಾಗಿದ್ದ ರಾನು ಪುತ್ರಿ ವೈರಲ್ ವಿಡಿಯೋವನ್ನು ನೋಡಿ ಅಮ್ಮನನ್ನು ಹುಡುಕಿಕೊಂಡು ಬಂದಿದ್ದಾಳೆ. 

 

ಲತಾ ಧ್ವನಿ ಅನುಕರಿಸಿ ಸೂಪರ್‌ಹಿಟ್‌ ಆಗಿದ್ದ ರನುಗೆ ಹೊಸ ಲುಕ್‌!

ರಾನು ವಿಡಿಯೋ ಅವರಿಗೆ ಸೋಷಿಯಲ್ ಮೀಡಿಯಾ ಸ್ಟಾರ್ ಗಿರಿ ತಂದುಕೊಡುವುದರ ಜೊತೆಗೆ ಅಮ್ಮ- ಮಗಳನ್ನು ಒಂದು ಗೂಡಿಸಿದೆ. ಯಾರು ಇದ್ದ ಹಾಗೆ ಇರುವುದಿಲ್ಲ, ಅದೃಷ್ಟದ ಬಾಗಿಲು ಯಾವಾಗ ಬೇಕಾದರೂ ತೆಗೆಯಬಹುದು ಎನ್ನುವುದಕ್ಕೆ ಇದೇ ಸಾಕ್ಷಿ ಅಲ್ವಾ? 

"