ಕೋಲ್ಕತಾ[ಆ.11]: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರನ್ನು ಧ್ವನಿಯನ್ನೇ ಭರ್ಜರಿಯಾಗಿ ಹೋಲುವ ಮಹಿಳೆಯೊಬ್ಬರ ವಿಡಿಯೋ ವೈರಲ್‌ ಆಗಿತ್ತು.

ಕೋಲ್ಕತಾದ ರೈಲ್ವೆ ನಿಲ್ದಾಣದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ಸಾಗಿಸುವ ರನು ಮರಿಯಾ ಎಂಬ ಅನಾಥೆ ಹಾಡಿದ್ದ ‘ಏಕ್‌ ಪ್ಯಾರ್‌ ಕಾ ನಗ್ಮಾ’ ಸೋಷಿಯಲ್‌ ಮೀಡಿಯಾದಲ್ಲಿ ಸೂಪರ್‌ಹಿಟ್‌ ಆಗಿತ್ತು. ಕೇವಲ ಒಂದು ವಾರದಲ್ಲಿ ಆಕೆ ಅದೆಷ್ಟು ಜನಪ್ರಿಯ ಆಗಿದ್ದಾಳೆಂದರೆ ಸ್ಥಳೀಯ ಬ್ಯೂಟಿ ಪಾರ್ಲರ್‌ ಒಂದು ರನುಗೆ ಉಚಿತವಾಗಿ ಹೊಸ ಲುಕ್‌ ನೀಡಿದೆ.

ಇನ್ನು ಹಲವು ಮಂದಿ ಆಕೆಗೆ ಆರ್ಥಿಕ ನೆರವನ್ನೂ ಒದಗಿಸಿದ್ದಾರೆ. ಮುಂಬೈನಿಂದ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳವಂತೆ ಆಹ್ವಾನವೂ ಬಂದಿದೆ. ಕಳೆದ ವಾರ ಅತಿಂದ್ರಾ ಚಕ್ರಬರ್ತಿ ಎಂಬ ಇಂಜಿನಿಯರ್‌ ರೈಲ್ವೆ ನಿಲ್ದಾಣದಲ್ಲಿ ರನು ಮರಿಯಾ ಹಾಡಿನ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು. ಅದು ಭಾರೀ ವೈರಲ್‌ ಆಗಿತ್ತು.