ಶೋರ್ ಸಿನಿಮಾದ ಲತಾ ಮಂಗೇಶ್ಕರ್ ಹಿಟ್ ಹಾಡು ಏಕ್ ಪ್ಯಾರ್ ಕ ನಗ್ಮಾ ಹೈ’ ಹಾಡು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದವರು ರಾನು ಮಂದಾಲ್. ಇವರಲ್ಲಿರುವ ಟ್ಯಾಲೆಂಟ್ ಗಮನಿಸಿದ ಸಿಂಗರ್ ಹಿಮೇಶ್ ರೇಶಮಿಯಾ ಅವರಿಗೆ ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟಿದ್ದಾರೆ. 

ಹಿಮೇಶ್ ರೇಶಮಿಯಾ ಮುಂಬರುವ ಸಿನಿಮಾ ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್ ಸಿನಿಮಾದಲ್ಲಿ ತೆರಿ ಮೇರಿ ಕಹಾನಿ ಎನ್ನುವ ಹಾಡನ್ನು ಹಾಡಲು ಇವರಿಗೆ ಅವಕಾಶ ಕೊಟ್ಟಿದ್ದಾರೆ.

 

ಜೀವನದಲ್ಲಿ ಎಲ್ಲಿಯೇ ಆದರೂ ಪ್ರತಿಭಾನ್ವಿತರು ಸಿಕ್ಕರೆ ಅವರನ್ನು ಹಾಗೆಯೇ ಬಿಡಬಾರದು. ಅವರಲ್ಲಿರುವ ಪ್ರತಿಭೆಯನ್ನು ಹೊರ ತರಲು ನಾವು ಅವಕಾಶ ಮಾಡಿಕೊಡಬೇಕು ಎಂದು ಸಲ್ಮಾನ್ ಖಾನ್ ತಂದೆ ಸಲೀಮ್ ಅಂಕಲ್ ನನಗೆ ಆಗಾಗ ಹೇಳುತ್ತಿದ್ದರು. ಅದರಂತೆ ನಾನು ರಾನು ಅವರಿಗೆ ಅವಕಾಶ ಕೊಟ್ಟೆ ಎಂದು ರೇಶಮಿಯಾ ಹೇಳಿದ್ದಾರೆ.