ಕಿಚ್ಚನ 23 ವರ್ಷಗಳ ಸಿನಿ ಪಯಣವನ್ನು ನಿರ್ದೇಶಕ ಕಮ್ ಆ್ಯಕ್ಟರ್ ಪವನ್ ಒಡೆಯರ್ ಟ್ವಿಟರ್‌ನಲ್ಲಿ ಬರೆದು ಜನರಿಗೆ ತಿಳಿಸಿದರು. 23 ವರ್ಷದ ಸಿನಿ ಪಯಣ ಮುಗಿಸಿದ ಕಿಚ್ಚ 23 ವರ್ಷದಂತೆ ಕಾಣಿಸುತ್ತಾರೆಂದು ಶ್ಲಾಘಿಸಿದ್ದರು. ಈ ಎಲ್ಲ ಪ್ರತಿಕ್ರಿಯೆಗಳಿಗೆ ಕಿಚ್ಚ ಪತ್ರದ ಮೂಲಕ ತಮ್ಮ ಸಿನಿ ಪಯಣದ ಅಪ್ಸ್ ಆ್ಯಂಡ್ ಡೌನ್ಸ್ ಬಗ್ಗೆ ಈ ಜರ್ನಿಯಲ್ಲಿ ತಮಗೆ ಸಾಥ್ ನೀಡಿದವರು ಈ ಬಗ್ಗೆ ಹೇಳಿದ್ದು ಹೀಗೆ...

‘23 ವರ್ಷಗಳು. ಈ ಅದ್ಭುತವಾದ ಕಾಲ್ಪನಿಕ ಪ್ರಪಂಚವನ್ನು ಸಿನಿ ಜಗತ್ತಿನಲ್ಲಿ ಎಲ್ಲ ಯುವ ಕನಸುಗಾರನಂತೆ ನಾನೂ ಪ್ರವೇಶಿಸಿದೆ. ಎಲ್ಲಿ ನನ್ನ ಹೀರೋಗಳು, ನನ್ನ ಸ್ಪೂರ್ತಿದಾಯಕರು ಇದ್ದಾರೋ ಅದರ ಭಾಗವಾಗಿದ್ದು ವರ್ಣಿಸಲು ಅಸಾಧ್ಯವಾದ ಭಾವನೆ. ಏನೋ ದೊಡ್ಡದಾಗಿ ಮಾಡಬೇಕೆಂದು ಬಯಸಿದ್ದೆ. ಆದ್ರೆ ಅದನ್ನು ಕಾರ್ಯ ರೂಪಕ್ಕೆ ತರುವ ಆಲೋಚನೆಯೇ ಇರಲಿಲ್ಲ....

ನನಗೆ ಸಿನಿಮಾದ ಪ್ರತಿ ಸ್ಟುಡಿಯೋ, ಪ್ರತಿ ಸೆಟ್, ಪ್ರತಿ ಕಾಸ್ಟ್ಯೂಮ್ ಹ್ಯಾಂಗರ್, ಪ್ರತಿ ಸೆಟ್ ಪ್ರಾಪರ್ಟಿ, ಪ್ರತಿ ಲೈಟ್, ಸಿನಿಮಾಗೆ ಸಂಬಂಧಿಸಿದ ಎಲ್ಲವನ್ನೂ ಮ್ಯಾಜಿಕ್ ಮಾಡುತ್ತೆ ಎನ್ನಿಸುತ್ತಿತ್ತು....ಹೊಸದಾಗಿ ಚಿತ್ರರಂಗಕ್ಕೆ ಬಂದವರ ಮನಸ್ಸಿನ ಭಾವನೆಗಳನ್ನು ಪದಗಳಲ್ಲಿ ಹೇಳುವುದು ಕಷ್ಟ.

ಕಿಚ್ಚ ಸುದೀಪ್ ಶೂಟಿಂಗ್‌ಗೆ ಹೋಗುವ ಮುನ್ನ ತಪ್ಪದೇ ಹೀಗೆ ಮಾಡ್ತಾರಂತೆ!

ನನಗೆ ಬೇರೆಡೆಗೆ ಪಯಣಿಸುವುದು ಆಗ ಕಷ್ಟವಾಗುತ್ತಿತ್ತು. ನನ್ನ ತಂದೆ, ತಾಯಿಯಿಂದ ಹಣ ಪಡೆದುಕೊಳ್ಳುತ್ತಿದ್ದೆ. ಯವ್ವೌನದ ದಿನಗಳು ಮಧುರವಾಗಿದ್ದವು. ಸೆಟ್‌ಗೆ ಹೋಗುವುದು, ಸ್ಟುಡಿಯೋಗೆ ಹೋಗಿ ನಿರ್ದೇಶಕರ ಮುಂದೆ ಆಡಿಷನ್ ಕೊಡುವುದು ಎಲ್ಲವೂ ಕಷ್ಟವಾಗುತ್ತಿತ್ತು. ಕೆಲವು ಸ್ನೇಹಿತರು ತುಂಬಾ ಸಹಕರಿಸಿದ್ದಾರೆ. ನನ್ನ ಕ್ರಿಕೆಟ್ ಕ್ರೇಜ್ ಇದರಲ್ಲೊಂದು. ಹಾಗೂ ಪತ್ನಿ ಪ್ರಿಯಾ ದುಡಿದ ಹಣ ಹಾಗೂ ಸ್ಕೂಟಿ ನನನ್ನು ಕಾಪಾಡಿದ್ದು. ಇವೆಲ್ಲವಕ್ಕೂ ನನಗೆ ಸ್ವತಂತ್ರ ನೀಡಿದ್ದಕ್ಕೆ ನನ್ನ ತಂದೆಗೆ ಬಿಗ್ ಥ್ಯಾಂಕ್ಸ್...

ಕನ್ನಡ ಸಿನಿಮಾಗಳ ಬಗ್ಗೆ ಪೇಪರ್‌ನಲ್ಲಿ ಬರುತ್ತಿದ್ದ ಜಾಹೀರಾತು ಮತ್ತದರ ಡಿಸೈನ್ ನೋಡಲು ಶುಕ್ರವಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದೆ. ನಮ್ಮ ಸರೋವರ ಹೊಟೇಲ್ ಮೂಲಕವೇ ನಾನು ಸಿನಿಮಾರಂಗದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಕೆಲವೊಮ್ಮ ಚಿತ್ರೀಕರಣ, ಕೆಲವೊಮ್ಮೆ ಮುಹೂರ್ತ...ಕಾಲೇಜಿಗೆ ರಜೆ ಹಾಕಿ ಚಿತ್ರೀಕರಣ ನಡೆಯುವ ಸ್ಥಳಗಳಿಗೆ ಹೋಗುತ್ತಿದ್ದೆ. ತಾಯಿ ಯಾವಾಗಲೂ ಸ್ವಾತಂತ್ರ್ಯ ನೀಡಿದ್ದರು. ಬಹುತೇಕ ನಟರ ಚಿತ್ರಗಳು ಸರೋವರ ಹೋಟೆಲ್‌ನಲ್ಲಿಯೇ ಚಿತ್ರೀಕರಣಗೊಳ್ಳುತ್ತಿತ್ತು. ಅವರನ್ನು ಹತ್ತಿರದಿಂದ ನೋಡಲು ನನಗೆ ಅವಕಾಶ ಸಿಗುತ್ತಿತ್ತು...

ಹಲವು ಕಾರಣಗಳಿಗಾಗಿ ನಾನು ಹೊಟೇಲ್‌ಗೆ ಚೆನ್ನಾಗಿ ಡ್ರೆಸ್ ಅಪ್ ಆಗಿ ಹೋಗುತ್ತಿದ್ದೆ. ಹಾಗಂತ ಯಾವುದೇ ಪಾತ್ರಕ್ಕಾಗಿಯೂ ಸಿದ್ಧವಾಗಿರುತ್ತಿರಲಿಲ್ಲ. ನಾನು ಸಾಕಷ್ಟು ಹೊಟೇಲ್, ಮನೆ, ಸೆಟ್‌ಗಳಿಗೆ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಭೇಟಿಯಾಗಲು ಹೋಗಿದ್ದೆ. ಸುನೀಲ್ ಕುಮಾರ್ ದೇಸಾಯಿ ಮನೆ ಮುಂದೆ ಮಾತ್ರ ಗಂಟೆಗಟ್ಟಲೆ ಕಾದಿದ್ದೆ. ಅದು ನನ್ನ ಆಯ್ಕೆಯಾಗಿದ್ದು, ಅದಕ್ಕಾಗಿ ನಂಗೇನೂ ಬೇಸರವಿಲ್ಲ. ನಾನು ಅವರನ್ನ ಭೇಟಿ ಮಾಡಲೇಬೇಕು ಎಂದು ನಿರ್ಧರಿಸಿದ್ದೆ. ಈಗಿನಂತೆ ಆಗ ಒಬ್ಬರನ್ನ ಮೀಟ್ ಮಾಡೋದು, ಅಡ್ರಸ್ ಹುಡುಕೋದು ಸುಲಭವಲ್ಲ...

ವಾಹ್ ಎಂಥಾ ಮಾತು! ಮೋದಿ ಬಗ್ಗೆ ಕಿಚ್ಚ ಸುದೀಪ್ ಹೇಳೋದೇನು ಗೊತ್ತಾ?

ಕೆಲವು ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದಾರೆ. ಮುಖ್ಯವಾಗಿ ಅಂಬರೀಶ್ ಮಾಮ ಅವರು ಇಂದಿನ ಹ್ಯಾರಿಪಾಟರ್ ವರ್ಲ್ಡ್ ಇದ್ದಂತೆ. ವರ್ಣಮಯ. ಸಾಕಷ್ಟು ಜನರು, ಹೆಚ್ಚು ಸಮಯ, ಕಾರುಗಳು, ಫ್ಯಾನ್ಸಿ ವಾಚ್‌ಗಳು ರಾತ್ರಿ ಔತಣಕೂಟ... ಹೀಗೆ ಸಾಕಷ್ಟು.... ಅವರ ಸುತ್ತ ಯಾವಾಗಲೂ ಜನರಿರ್ತಿದ್ರು.... Name it, and he lived it all..ಅನ್ನುವಂತೆ ಇದ್ದವರು. ಶಂಕರ್ ನಾಗ್ ಸರ್ ಅವ್ರನ್ನ ಕೆಲವೊಮ್ಮೆ ನೋಡಿದ್ದೇನೆ. ನನ್ನ ಸ್ಫೂರ್ತಿ ಅವರು. ಅವರ ಫೋಟೋ ಒಂದಿದೆ. ಬಿಳಿ ಕುರ್ತಾ ಹಾಗೂ ಡೆನಿಮಂ ಪ್ಯಾಂಟ್‌ನಲ್ಲಿ ನಿಂತಿರುವುದು. ಅವರ ವೇಗಕ್ಕೆ ಯಾರೂ ಸರಿಸಾಟಿ ಇಲ್ಲ. ನನಗೆ ಸಿನಿಮಾ ಗೀಳು ಹುಟ್ಟಿದಾಗ ಅವರಿರಲಿಲ್ಲ. ಅವರ ಲೈಫ್ ಸ್ಟೈಲ್ ಹಾಗೂ ಮತ್ತಷ್ಟು ವಿಚಾರಗಳು ಸ್ಫೂರ್ತಿದಾಯಕ.

ರವಿಚಂದ್ರನ್ ಮತ್ತು ಶಿವಣ್ಣ ಇವರಿಬ್ಬರೂ ಯುವ ಜನರ ಐಕಾನ್‌ಗಳು. ಇವರಿಂದ ಅಭಿಮಾನಗಳಿಗೆ ಸದಾ ಸ್ಫೂರ್ತಿಯಾಗಿರುತ್ತಾರೆ. ನಾನು ಅವರ ಅರ್ಧದಷ್ಟು ಫಾಲೋವರ್‌ಗಳನ್ನಾದರೂ ಪಡೆಯಲು ಬಯಸುತ್ತೇನೆ. ಉಪೇಂದ್ರ ಅವ್ರಿಗೆ ಅಸಿಸ್ಟೆಂಟ್ ಆಗ್ಲಿಕ್ಕೆ ನಾನೀಗಲೂ ಸಿದ್ಧ. ಅವರು ನಟ ಉಪ್ಪಿ ಆಗಿರಲಿಲ್ಲ. ಆಗ ಸರೋವರ ಹೊಟೇಲ್‌ನ ವೆಜ್ ವೆಜ್ ಕೌಂಟರ್‌ನಲ್ಲಿ ತಂಡದ ಜೊತೆಗೆ ಕಾಣಿಸಿಕೊಳ್ತಿದ್ರು. ಇವ್ರಷ್ಟೇ ಅಲ್ಲ ಇನ್ನು ಸಾಕಷ್ಟು ಜನರಿದ್ದಾರೆ ನನ್ನ ಜೀವನದಲ್ಲಿ....

ಕೆಲವರ ಸಲಹೆ ಮೇರೆಗೆ ನಾನು ಮುಂಬೈನ ಆ್ಯಕ್ಟಿಂಗ್ ಸ್ಕೂಲ್ ಸೇರಿಕೊಂಡೆ. ಆಗ ವಿಮಾನದಲ್ಲಿ ಪಯಣಿಸುವಷ್ಟು ಹಣ ಇರುತ್ತಿರಲಿಲ್ಲ. ಅದಕ್ಕೆ ಮುಂಬೈನಿಂದ ಟ್ರೈನ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದೆ. ಬೆಂಗಳೂರಿಗೆ ಬಂದ ನಂತರ ನಾನು ಉಪೇಂದ್ರ ಸರ್ ಜೊತೆ ಸ್ವಲ್ಪ ಸಮಯ ಕೆಲಸ ಮಾಡಿದೆ. ಆಗ ಅವರು ಪೋರ್ಟ್‌ಪೊಲಿಯೋ ಶೂಟ್ ಮಾಡುವಂತೆ ಒತ್ತಾಯಿಸಿದರು. ಅದನ್ನ ಹಿಡಿದು ಸಾಕಷ್ಟು ನಿರ್ದೇಶಕರ ಬಳಿ ಹೋದೆ. ನನ್ನ ಪ್ರಯತ್ನ ನೋಡಿ ಅಪ್ಪ ಸ್ವಲ್ಪ ಹಣ ನೀಡಲು ಮುಂದಾದರು. ನನ್ನ ಉತ್ಸಾಹವನ್ನು, ಖುಷಿಯನ್ನು ಹಾಳು ಮಾಡಲು ಅಪ್ಪನಿಗೆ ಇಷ್ಟವಿರಲಿಲ್ಲ. ನನಗೆ ತಿಳಿಯದಂತೆ ನನಗೆ ಬೇಕಿರೋ ಎಲ್ಲವನ್ನೂ ಅಪ್ಪ ನನಗಾಗಿ ಕೊಟ್ಟಿದ್ದಾರೆ. ನನ್ನ ಫ್ಯಾಮಿಲಿ ನನಗೆ ಬ್ಯಾಕ್ ಬೋನ್. ಫೈನಲಿ 31 ಬಂದಿದೆ...1996ರಲ್ಲಿ ಇದೇ ದಿನ ನನ್ನ ಮೊದಲ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಆಗಿತ್ತು...

ಆ ಚಿತ್ರಕ್ಕೆ ಏನಾಯಿತು? ಯಾಕೆ ಅದನ್ನು ಪೂರ್ಣಗೊಳಿಸಲಿಲ್ಲ? ನನ್ನನ್ನು ಐರನ್‌ ಲೆಗ್ ಎಂದೇಕೆ ಕರೆಯಲಾಗುತ್ತಿತ್ತು? ಮುಂದಿನ ಕೆಲವು ವರ್ಷಗಳಿಂದ ನಾನು ಈ ಚಲನಚಿತ್ರವನ್ನು ನಿಲ್ಲಿಸಿದ ನಂತರ ಏನು ಮಾಡಿದೆ? ನಾನು ಯಾಕೆ ಕಿರುತೆರೆಗೆ ಹೋದೆ. ಆ್ಯಕ್ಸಿಂಡೆಂಟ್, ಆಪರೇಷನ್, ಸ್ಟ್ರಗಲ್ ಎಲ್ಲವೂ ಬೇರೆ ಬೇರೆ ಕಥೆ... ಎಲ್ಲವೂ ನನ್ನನ್ನು ಬೆಳೆಸಿದೆ.

23 ವರ್ಷಗಳು ವೇಗವಾಗಿ ಕಳೆದು ಹೋಗಿವೆ. ನಾನು ಬದುಕುತ್ತಿದ್ದೇನೆ. ಆನಂದಿಸಿ ಮತ್ತು ಅದರಲ್ಲಿ ಪ್ರತಿಯೊಂದೂ ಕ್ಷಣವನ್ನೂ ಸುಖವಾಗಿ ಸ್ವೀಕರಿಸಿದ್ದೇನೆ. ನನ್ನ ನಿರ್ಬಂಧಗಳು ಹಾಗೂ ನ್ಯೂನತೆಗಳಿಂದ ನಟನಾಗಿದ್ದೇನೆ. ನನಗೆ ನನ್ನವೇ ಮಿತಿಗಳಿವೆ. ಅದು ನನಗೆ ಗೊತ್ತು. ಆದರದು ಅಂತ್ಯವಲ್ಲ. ಬಿದ್ದರೂ ನಾನು ಮೇಲೆ ಏಳುತ್ತೇನೆ.

ನಾನೇನು ಎಲ್ಲವನ್ನೂ ಜಯಸಲಿಲ್ಲ. ಅದನ್ನು ಬಯಸುವುದೂ ಇಲ್ಲ. ನಾನು ಬದುಕಲು ಈ ಸುಂದರವಾದ ಚಿತ್ರೋದ್ಯಮ ಸಾಕು. ನನ್ನನ್ನು ನಿಮ್ಮವನಾಗಿ ಸ್ವೀಕರಿಸಿ, ಇಟ್ಟಿಕೊಂಡಿರುವುದಕ್ಕೆ ಎಲ್ಲರಿಗೂ ಥ್ಯಾಂಕ್ಸ್.

- ನಿಮ್ಮವ ಕಿಚ್ಚ ಸುದೀಪ