ಬೆಂಗಳೂರು (ಜ. 28): ಮನೆಯಿಂದ ಹೊರ ಹೋಗುವಾಗ ಅಪ್ಪ-ಅಮ್ಮನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಂಡು ಹೋಗುವ ಅಭ್ಯಾಸ ಇರುತ್ತದೆ. ಇದರಿಂದ ಹೋದ ಕೆಲಸ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಅವರದ್ದು. ಇದಕ್ಕೆ ನಮ್ಮ ಕಿಚ್ಚ ಸುದೀಪ್ ಕೂಡಾ ಹೊರತಲ್ಲ. 

ಮದಕರಿ ನಾಯಕ’ ಚಿತ್ರವನ್ನು ಸುದೀಪ್ ದರ್ಶನ್‌ಗೆ ಬಿಟ್ಟು ಕೊಟ್ಟಿದ್ಯಾಕೆ?

ಸಿನಿಮಾ ಶೂಟಿಂಗ್ ಗೆಂದು ಅಥವಾ ಬೇರೆ ಯಾವುದೇ ಕೆಲಸಕ್ಕಾಗಿ ಹೊರಗೆ ಹೋಗುವಾಗ ತಪ್ಪದೇ ಅಪ್ಪ-ಅಮ್ಮನ ಕಾಲಿಗೆ ಬೀಳುತ್ತಾರಂತೆ. ಅವರ ಆಶೀರ್ವಾದದೊಂದಿಗೆ ಹೊರ ಹೋಗುತ್ತಾರಂತೆ.  ಆಶೀರ್ವಾದದಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ ಕಿಚ್ಚ. ಹಾಗೆ ಮಾಡುವುದರಿಂದ ಕೆಲಸ ಒಳ್ಳೆಯದಾಗುತ್ತೆ ಎನ್ನುವುದು ಸುದೀಪ್ ನಂಬಿಕೆ. ಅಪ್ಪ-ಅಮ್ಮನೇ ನನಗೆ ಸರ್ವಸ್ವ ಎಂದು ಹೇಳಿದ್ದಾರೆ.