ಸಿದ್ದಾರ್ಥ್ ಮಲ್ಹೋತ್ರಾ ಜೊತೆಗಿನ ಹಳೆ ಸಂಬಂಧದ ಕಾರಣಕ್ಕೆ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ನಡುವೆ ಎಲ್ಲವೂ ಸರಿ ಇಲ್ಲ ಅಂತೊಂದು ವಿಡಿಯೋ ವೈರಲ್ ಆಗಿದೆ. ಇವರಿಬ್ಬರ ನಡುವೆ ಮುನಿಸು ಇದ್ಯಾ? ಇಂಟರ್‌ನೆಟ್‌ನಲ್ಲಿ ಏನಿದು ಚರ್ಚೆ? ತಿಳಿಯಲು ಮುಂದೆ ಓದಿ.

ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ಇಂಟರ್‌ನೆಟ್‌ನಲ್ಲಿ ಸಖತ್ ಹೈಪ್ ಸೃಷ್ಟಿಸಿದೆ. ಸಿನಿಮಾದಲ್ಲಿ ಇಬ್ಬರೂ ನಟಿಯರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಆಕ್ಷನ್-ಡ್ರಾಮಾ ಜೊತೆಗೆ ಹಲವು ಟ್ವಿಸ್ಟ್‌ಗಳಿರುವ ನಿರೀಕ್ಷೆ ಇದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಆದರೆ, ಈ ಕಾರ್ಯಕ್ರಮದಲ್ಲಿ ಕಿಯಾರಾ, ತನ್ನ ಸಹನಟಿ ತಾರಾ ಜೊತೆ ತುಂಬಾನೇ ಅನ್‌ಕಂಫರ್ಟಬಲ್ ಆಗಿದ್ದರು ಅಂತ ಅಭಿಮಾನಿಗಳು ಗುರುತಿಸಿದ್ದಾರೆ.

ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ನಡುವೆ ಮುನಿಸು?

ಹೌದು, ನೀವು ಓದಿದ್ದು ನಿಜ. ಇವರಿಬ್ಬರ ನಡುವೆ ಏನೋ ಸರಿಯಿಲ್ಲ ಅನ್ನೋ ಮಾತು ಈಗ ಹೊಸದಲ್ಲ. 2020ರಲ್ಲೇ ಒಂದು ಮದುವೆ ಸಮಾರಂಭದಲ್ಲಿ ಕಿಯಾರಾ, ತಾರಾರನ್ನು ಕಡೆಗಣಿಸಿದ್ದರು ಅಂತ ವರದಿಯಾಗಿತ್ತು. ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬರು ಇನ್‌ಫ್ಲುಯೆನ್ಸರ್ ಈ ಬಗ್ಗೆ ಮಾತನಾಡಿದ್ದಾರೆ. ಅವರ ಪ್ರಕಾರ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತಾರಾ ಹಿಂದೆ ಡೇಟಿಂಗ್‌ನಲ್ಲಿದ್ದರು ಅನ್ನೋ ಕಾರಣಕ್ಕೆ ಕಿಯಾರಾಗೆ ಅವರನ್ನು ಕಂಡರೆ ಒಂದು ಥರಾ 'ಬೆದರಿಕೆ' ಇದೆಯಂತೆ. ಸಿದ್ಧಾರ್ಥ್ ಮಾಜಿ ಪ್ರೇಯಸಿ ಆಲಿಯಾ ಭಟ್ ಜೊತೆ ಕಿಯಾರಾಗೆ ಈ ಸಮಸ್ಯೆ ಇಲ್ಲ, ಯಾಕಂದ್ರೆ ಆಲಿಯಾ 'ಬೇರೆ ಲೆವೆಲ್'ನಲ್ಲಿದ್ದಾರೆ, ಆದರೆ ತಾರಾ ವಿಚಾರದಲ್ಲಿ ಮಾತ್ರ ಕಿಯಾರಾ ಅಸಹಜವಾಗಿ ವರ್ತಿಸುತ್ತಾರೆ ಅಂತ ಆ ಇನ್‌ಫ್ಲುಯೆನ್ಸರ್ ಹೇಳಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ಒಬ್ಬ ಯೂಸರ್, "ಕಿಯಾರಾ ಜೊತೆ ಸಂಬಂಧ ಶುರುವಾಗೋಕೂ ಮುಂಚೆಯೇ ಆಲಿಯಾ-ಸಿದ್ಧಾರ್ಥ್ ಬ್ರೇಕಪ್ ಮಾಡಿಕೊಂಡಿದ್ದರು. ಆದರೆ ಸಿದ್ಧಾರ್ಥ್-ತಾರಾ ವಿಷಯದಲ್ಲಿ ಹಾಗಲ್ಲ, ಟೈಮ್‌ಲೈನ್ ಹತ್ತಿರದಲ್ಲಿದೆ" ಅಂತ ಬರೆದಿದ್ದಾರೆ. ಇನ್ನೊಬ್ಬರು, "ತಾರಾಗೆ ಒಳ್ಳೆ ಪೊಟೆನ್ಶಿಯಲ್ ಇತ್ತು, ಅವರು ಶ್ರದ್ಧಾ ಕಪೂರ್ ಹಾದಿಯಲ್ಲಿ ಸಾಗಬಹುದಿತ್ತು. ಈ ಜನರೇಷನ್‌ನ ಆಲಿಯಾ-ಶ್ರದ್ಧಾ ಜೋಡಿಯಂತೆ ತಾರಾ-ಅನನ್ಯಾ ಆಗಬೇಕಿತ್ತು. ತಾರಾಗೆ ಬಾಲಿವುಡ್‌ನಲ್ಲಿ ಇನ್ನಷ್ಟು ಅವಕಾಶಗಳು ಸಿಗಲಿ" ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, "ಸಿದ್ಧಾರ್ಥ್ ಎಲ್ಲರ ಜೊತೆನೂ ಸುತ್ತಾಡಿದ್ದಾರೆ, ಜಾಕ್ವೆಲಿನ್ ಕೂಡಾ. ಹಾಗಾದ್ರೆ ಯಾರು ಉಳಿದಿದ್ದಾರೆ? ಅಂದಹಾಗೆ, ಬಾಲಿವುಡ್‌ನಲ್ಲಿ ಓಪನ್ ಮ್ಯಾರೇಜ್, ರಣಬೀರ್ ಸೀರಿಯಲ್ ಚೀಟರ್, ಸಿದ್-ಕಿಯಾರಾ ಲ್ಯಾವೆಂಡರ್ ಹೋಮೋ ಮ್ಯಾರೇಜ್... ಹೀಗೆಲ್ಲಾ ಮಾತುಗಳಿವೆ. ಇದರಲ್ಲಿ ಯಾವುದು ನಿಜ? ಬಾಲಿವುಡ್‌ನಲ್ಲಿ ಯಾವುದೂ ನಿಜವಾದ ಮದುವೆಯಲ್ಲ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.