ಚಿತ್ರರಂಗದಲ್ಲೇ ಇತಿಗಹಾಸ ಬರೆದ ಕೆಜಿಎಫ್ | ಸಲಾಂ ರಾಕಿ ಭಾಯ್ ಎಂದ ಪ್ರೇಕ್ಷಕರು | ಬಾಲಿವುಡ್‌ನಲ್ಲೂ ದಾಖಲೆ 

ಬೆಂಗಳೂರು (ಡಿ. 21): ಎಲ್ಲಿ ನೋಡಿದ್ರೂ ಕೆಜಿಎಫ್ ದೇ ಧಮಾಕಾ...ರಾಕಿ ಭಾಯ್ ಗೆ ಫುಲ್ ಹವಾ ಎಬ್ಬಿಸಿದ್ದಾರೆ. ಇಂದು ಕೆಜಿಎಫ್ ದೇಶಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆಯಲಿದೆ ಕೆಜಿಎಫ್. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಡ್ ನ್ಯೂಸ್: KGF ಚಿತ್ರ ಅಬ್ಬರಕ್ಕೆ ತಡೆ ಕೋರಿದ್ದ ಅರ್ಜಿ ಧೂಳಿಪಟ

ಕನ್ನಡದಲ್ಲಿ 400, ಹಿಂದಿ 1500, ತೆಲುಗು 400, ತಮಿಳು 100, ಮಲಯಾಳಂ 60 ಒಟ್ಟು 2460 ಚಿತ್ರಮಂದಿರಗಳಲ್ಲೇ ರಿಲೀಸಾಗಿದೆ.

Scroll to load tweet…

ಒಂದು ದಿನದ ಕಲೆಕ್ಷನ್ ನಲ್ಲಿ ದಾಖಲೆ ಬರೆಯಲಿದೆ. ವರದಿಗಳ ಪ್ರಕಾರ ಹಿಂದಿ ವರ್ಶನ್ ಮೊದಲ ದಿನ 3-4 ಕೋಟಿ ಗಳಿಕೆ ಕಾಣಬಹುದು ಎನ್ನಲಾಗಿದೆ. ಕನ್ನಡದಲ್ಲಿ 20-30 ಕೋಟಿ ಗಳಿಕೆ ಆಗಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆ.

ರಾಕಿಭಾಯ್‌ಗೆ ರಾಧಿಕಾ ಸ್ಟೆಷಲ್ ವಿಶ್!

ಇಂದು ಶಾರೂಕ್ ಖಾನ್ ಅಭಿನಯದ ಜೀರೋ ಸಿನಿಮಾ ಬಿಡುಗಡೆಯಾಗಿದೆ. ಕೆಜಿಎಫ್ ಮುಂದೆ ಇದು ಸಪ್ಪೆ ಆಗಿರುವುದರಿಂದ ಕೆಜಿಎಫ್ ಗೆ ವರದಾನವಾಗಲಿದೆ.