ಹೆಣ್ಣು ಮಗುವಿನ ತಾಯಿಯಾಗಿ, 2ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು, ಫುಲ್ ಖುಷಿಯಲ್ಲಿ ಇರೋ ಯಶ್ ಹಾಗೂ ರಾಧಿಕಾ ದಂಪತಿಗೆ ಇದೀಗ ಕೆಜಿಎಫ್ ರಿಲೀಸ್ ಆಗಿರೋ ಮತ್ತೊಂದು ಸಂಭ್ರಮ. ಈ ಸಂದರ್ಭದಲ್ಲಿ ಪತಿಗೆ ರಾಧಿಕಾ ವಿಶ್ ಮಾಡಿದ್ದು ಹೀಗೆ....

ರಾಕಿಂಗ್ ಸ್ಟಾರ್ ಯಶ್ ಅವರ ಚಿತ್ರ ಕೆಜಿಎಫ್ ವಿಶ್ವಾದ್ಯಂತ ರಿಲೀಸ್ ಆಗಿದೆ. ಈಗಾಗಲೇ ಹೆಣ್ಣು ಮಗುವಿನ ಪೋಷಕರಾಗಿ ಫುಲ್ ಜೂಮ್‌ನಲ್ಲಿರೋ ಈ ದಂಪತಿಗೀಗ ಯಶ್ ಚಿತ್ರ ರಿಲೀಸ್ ಆಗಿರುವುದು ಸಂತೋಷವನ್ನು ಇಮ್ಮಡಿಗೊಳಿಸಿದೆ.

'ಕೆಜಿಎಫ್ ಚಿತ್ರ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಎಲ್ಲ ರೀತಿಯ ಯಶಸ್ಸು ಈ ತಂಡಕ್ಕೆ ಸಿಗಲಿ. ನಮ್ಮ ಕನ್ನಡ ಚಿತ್ರೋದ್ಯಮ ದೊಡ್ಡ ಮಟ್ಟಕ್ಕೆ ಯಾವ ತೊಂದರೆಯೂ ಇಲ್ಲದೆ ಬೆಳೆಯಲಿ. ಕೆಲಸವೆಂದರೆ ಪೂರ್ತಿ ತೊಡಗಿಸಿಕೊಳ್ಳುವ ಯಶ್, ಈ ಚಿತ್ರದ ಮುಖ್ಯ ಪಾತ್ರದಲ್ಲಿದ್ದು, ಅವರಿಗೆ ವಿಶೇಷ ಶುಭಾಶಯಗಳು. ಎಲ್ಲ ಸುಖ-ಸಂತೋಷಗಳೂ ಅವರದ್ದಾಗಲಿ, ' ಎಂದು ಶುಭ ಕೋರಿದ್ದಾರೆ.

View post on Instagram

ಡಿಸೆಂಬರ್ 2ರಂದು ಹೆಣ್ಣು ಮಗುವಿಗೆ ಜನ್ಮ ನೀಡಿರುವ ರಾಧಿಕಾ ಪಂಡಿತ್, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದಾಗ ಪ್ರೆಸ್ ಮೀಟ್‌ನಲ್ಲಿ ಕಾಣಿಸಿಕೊಂಡ ನಂತರ ಮತ್ತೆಲ್ಲೂ ಕಾಣಿಸಿಕೊಂಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಂ‌ನಲ್ಲಿ ತಿಂಗಳಿಗೊಂದೆರಡು ಪೋಸ್ಟ್ ಅಪ್ಲೋಡ್ ಮಾಡುತ್ತಾರೆ.

ಕೆಜಿಎಫ್ ಬಗ್ಗೆ ಯಶ್‌ಗೆ ಪುನೀತ್ ರಾಜ್‌ಕುಮಾರ್ ಕೂಡಾ ವಿಶ್ ಮಾಡಿದ್ದಾರೆ. 

"