ಮುಂಬೈ (ಡಿ. 11): ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ರಿಸೆಪ್ಷನ್ ನಲ್ಲಿ ಕತ್ರಿನಾ ಕಾಣಿಸಿಕೊಂಡು ಶಾಕ್ ನೀಡಿದ್ದಾರೆ. 

ದೀಪಿಕಾ ರಣವೀರ್ ಮದುವೆಯಲ್ಲಿ ಪಾಲ್ಗೊಂಡವರಿಗೆ ಸಿಕ್ತು ಈ ಗಿಫ್ಟ್!

ಕತ್ರಿನಾ ಹಾಗೂ ದೀಪಿಕಾ ರಣಬೀರ್ ಕಪೂರ್ ಜೊತೆ ಡೇಟಿಂಗ್ ನಡೆಸಿದವರು. ಹಾಗಾಗಿ ಸಹಜವಾಗಿ ಇಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನುವಂತಾಗಿತ್ತು. ಆದರೆ ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳದೇ ದೀಪಿಕಾ, ಕತ್ರಿನಾರನ್ನು ಮದುವೆಗೆ ಆಹ್ವಾನಿಸಿದ್ದರು.

ಈ ಬಗ್ಗೆ ಕತ್ರಿನಾ ಪ್ರತಿಕ್ರಿಯಿಸುತ್ತಾ, ರಿಸೆಪ್ಷನ್ ನಲ್ಲಿ ನಾನು ರಾತ್ರಿ ಇಡೀ ಡ್ಯಾನ್ಸ್ ಮಾಡಿದೆ. ಕೊನೆಯವರೆಗೆ ಇದ್ದವರಲ್ಲಿ ನಾನೂ ಒಬ್ಬಳು. ನವ ದಂಪತಿಗಳ ಜೊತೆ ಚಾಕಲೇಟನ್ನು ತಿಂದು ಎಂಜಾಯ್ ಮಾಡ್ದೆ. ನನ್ನನ್ನು ನನಗೆ ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕಂಟ್ರೋಲ್ ಮಾಡಿಕೊಳ್ಳುವ ಅಗತ್ಯವಿದೆ. ಇದೊಂದು ಲವ್ಲಿ ರೆಸೆಪ್ಷನ್. ಪ್ರತಿಯೊಬ್ಬರೂ ಎಂಜಾಯ್ ಮಾಡಿದ್ದಾರೆ. ಮರೆಯಲಾಗದ ಕ್ಷಣವಾಗಿತ್ತು. ದೀಪಿಕಾ-ರಣವೀರ್ ಕೂಡಾ ಮುದ್ದಾಗಿ ಕಾಣಿಸುತ್ತಿದ್ದರು ಎಂದು ಭಾವುಕರಾಗಿ ಹೇಳಿದ್ದಾರೆ. 

ಎಂಥೆಂಥವರಿಗೂ ಮದುವೆ ಆಸೆ ಹುಟ್ಟಿಸಿದ ದೀಪಿಕಾ ಮ್ಯಾರೇಜ್!

ದೀಪಿಕಾ ಮದುವೆಗೆ ಆಹ್ವಾನಿಸಿದಾಗ ಮದುವೆಗೆ ಹೋಗಬೇಕೆಂದು ನನ್ನ ಮನಸ್ಸು ಹೇಳುತ್ತಿತ್ತು. ಅವರಿಬ್ಬರ ಜೊತೆ ಫೋಟೋ ತೆಗೆದುಕೊಳ್ಳಬೇಕೆಂದು ಆಸೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಕ್ಕಿಂತ ಮುಖ್ಯವೆಂದರೆ ಅದೊಂದು ಗುಡ್ ಟೈಮ್ ಆಗಿತ್ತು ಎಂದಿದ್ದಾರೆ. 

'ರಾಮ್ ಲೀಲಾ' ಅದ್ಧೂರಿ ವಿವಾಹದ ಕಲರ್‌ಫುಲ್ ಫೋಟೋ ಆಲ್ಬಂ

ದೀಪಿಕಾ-ಕತ್ರಿನಾ ಹಿಂದಿನದ್ದೆಲ್ಲವನ್ನು ಮರೆತು ಪರಸ್ಪರ ಒಂದಾಗಿದ್ದಾರೆ. ಇಬ್ಬರ ನಡುವೆ ಉತ್ತಮ ಸಂಬಂಧವಿದೆ. ಒಬ್ಬರನೊಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಲು ಶುರು ಮಾಡಿಕೊಂಡಿದ್ದಾರೆ.