ಬಾಲಿವುಡ್‌ನ ಕ್ಯೂಟ್ ಕಪಲ್ ದೀಪಿಕಾ, ರಣವೀರ್ ಸಿಂಗ್ ಇಬ್ಬರೂ ಅಧಿಕೃತವಾಗಿ ಸತಿ-ಪತಿಗಳಾಗಿದ್ದಾರೆ. ಇಟಲಿಯ ಲೇಕ್ ಕೋಮೋದಲ್ಲಿ ಕೊಂಕಣಿ ಹಾಗೂ ಸಿಂಧಿ ಸಂಪ್ರದಾಯದಂತೆ ಈ ಜೋಡಿ ನವೆಂಬರ್ 14 ಹಾಗೂ 15 ರಂದು ವಿವಾಹವಾಗಿತ್ತು. ಆದರೀಗ ಈ ದಂಪತಿಗೆ ಸಂಬಂಧಿಸಿದ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಈ ಬಾಲಿವುಡ್ ಜೋಡಿ ತಮ್ಮ ಮದುವೆಗೆ ಅಗಮಿಸಿದ್ದ ಅತಿಥಿಗಳಿಗೆ ಅತ್ಯಂತ ಸುಂದರವಾದ ಗಿಫ್ಟ್ ನೀಡಿದ್ದಾರೆನ್ನಲಾಗಿದೆ. ಆ ಗಿಫ್ಟ್ ಏನು? ಇಲ್ಲಿದೆ ವಿವರ

ಬಾಲಿವುಡ್‌ನ ಕ್ಯೂಟ್ ಕಪಲ್ ದೀಪಿಕಾ, ರಣವೀರ್ ಸಿಂಗ್ ಇಬ್ಬರೂ ಅಧಿಕೃತವಾಗಿ ಸತಿ-ಪತಿಗಳಾಗಿದ್ದಾರೆ. ಇಟಲಿಯ ಲೇಕ್ ಕೋಮೋದಲ್ಲಿ ಕೊಂಕಣಿ ಹಾಗೂ ಸಿಂಧಿ ಸಂಪ್ರದಾಯದಂತೆ ಈ ಜೋಡಿ ನವೆಂಬರ್ 14 ಹಾಗೂ 15 ರಂದು ವಿವಾಹವಾಗಿತ್ತು. ಮದುವೆಯಾದ ಬಳಿಕ ಮುಂಬೈಗೆ ಬಂದಿದ್ದ ನವ ದಂಪತಿ, ನವೆಂಬರ್ 21 ರಂದು ದೀಪಿಕಾಳ ತವರು ನಾಡು ಬೆಂಗಳೂರಿನಲ್ಲಿ ತಮ್ಮ ಮದುವೆಯ ಮೊದಲ ಗ್ರ್ಯಾಂಡ್ ರಿಸೆಪ್ಶನ್ ನೀಡಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೀಗ ದೀಪ್‌ವೀರ್ ದಂಪತಿಗೆ ಸಂಬಂಧಿಸಿದ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಈ ಬಾಲಿವುಡ್ ಜೋಡಿ ತಮ್ಮ ಮದುವೆಗೆ ಅಗಮಿಸಿದ್ದ ಅತಿಥಿಗಳಿಗೆ ಅತ್ಯಂತ ಸುಂದರವಾದ ಗಿಫ್ಟ್ ನೀಡಿದ್ದಾರೆನ್ನಲಾಗಿದೆ. ಮದುವೆ ರಿಸೆಪ್ಶನ್‌ನಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಸಿಲ್ವರ್ ಪ್ಲೇಟೆಡ್ ಫ್ರೇಮ್ ನೀಡಿದ್ದು, ಇದರಲ್ಲಿ ದೀಪಿಕಾ, ರಣವೀರ್ ಮದುವೆಯ ಸುಂದರವಾದ ಫೋಟೋ ಕೂಡಾ ಇದೆ. ಈ ಫೋಟೋ ಫ್ರೇಮ್‌ನೊಂದಿಗೆ ಥ್ಯಾಂಕ್ಸ್ ಗೀವಿಂಗ್ ನೋಟ್ ಕೂಡಾ ನೀಡಲಾಗಿದೆ. 

View post on Instagram

ದೀಪಿಕಾ, ರಣವೀರ್ ಮದುವೆ ಅತ್ಯಂತ ಖಾಸಗಿಯಾಗಿ ನಡೆದಿದ್ದು, ಕುಟುಂಬಸ್ಥರು ಸೇರಿದಂತೆ ಕೇವಲ 30 ರಿಂದ 40 ಮಂದಿಯಷ್ಟೇ ಪಾಲ್ಗೊಂಡಿದ್ದರು. ಸದ್ಯ ಮದುವೆಯಲ್ಲಿ ಸಿಕ್ಕ ಈ ಗಿಫ್ಟ್‌ನ್ನು ಹಲವಾರು ಮಂದಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ.