ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆ ದೊಡ್ಡ ಸುದ್ದಿಯಾಗಿದ್ದು ಮದುವೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳು ಒಂದರ ಹಿಂದೆ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇವೆ.
ನಾನು ಒಂದು ಮದುವೆಯಾಗಬೇಕು...ಹೀಗೆಂದು ಬಾಲಿವುಡ್ ಸ್ಟಾರ್ ಗಳಿಗೆ ಅನಿಸುತ್ತಿದೆಯಂತೆ. ಎಲಿಜೆಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಮಾತ್ರ ಈ ಬಗ್ಗೆ ಮಾತನಾಡಿಲ್ಲ. ಹಾಗಾದರೆ ಸ್ಟಾರ್ ಗಳಿಗೆ ಮದುವೆ ಆಸೆ ಚಿಗುರಲು ಕಾರಣ ಏನು?
ನಿರ್ದೇಶಕ ಕರಣ್ ಜೋಹರ್, ನಟಿ ಸೋನಾಕ್ಷಿ ಸಿಹ್ಹಾ ಸೇರಿದಂತೆ ಬಾಲಿವುಡ್ ನ ಅನೇಕ ಮಂದಿಗೆ ಮದುವೆಯ ಆಸೆ ಚಿಗುರೊಡೆದಿದೆ. ಇದಕ್ಕೆ ಕಾರಣ ದೀಪಿಕಾ ಮದುವೆ.
'ರಾಮ್ ಲೀಲಾ' ಅದ್ಧೂರಿ ವಿವಾಹದ ಕಲರ್‌ಫುಲ್ ಫೋಟೋ ಆಲ್ಬಂ
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಬಾಲಿವುಡ್ ಮಂದಿಗೆ ಕೆಲ ನೆಟ್ಟಿಗರು ಕೈ ಜೋಡಿಸಿದ್ದಾರೆ. ಇಂದು ಅಂದರೆ ನವೆಂಬರ್ 21 ರಂದು ಸಂಜೆ ದೀಪಿಕಾ ಮತ್ತು ರಣ್ ವೀರ್ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ನಡೆಯಲಿದೆ. ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ಹೊಸ ಜೋಡಿ ಗಣ್ಯರನ್ನು ಬರಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದೆ.
ದೀಪಿಕಾ-ರಣ್‌ವೀರ್ ಮದುವೆ ಪೋಟೋಕ್ಕೆ ಕಾದವ ಏನಾದ?
ಇಟಲಿಯಲ್ಲಿ ದೀಪಿಕಾ, ರಣವೀರ್ ಮದ್ವೆ
ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ
ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ
ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ನವೆಂಬರ್ 14 ರಂದು ಕೊಂಕಣಿ ಸಮುದಾಯದ ಆಚಾರದಂತೆ ಇಟಲಿಯಲ್ಲಿ ಮದುವೆಯಾಗಿದ್ದರು. ಅದ್ದೂರಿ ಕಲ್ಯಾಣಕ್ಕೆ ಆಪ್ತರು, ಸಂಬಂಧಿಕರಷ್ಟೆ ಸಾಕ್ಷಿಯಾಗಿದ್ದರು.
