2025-26ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿದಂತೆ, ರಾಜ್ಯಾದ್ಯಂತ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 200 ರೂ. ಮೀರದಂತೆ ಪ್ರವೇಶದರ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಲ್ಟಿಫ್ಲೆಕ್ಸ್‌ಗಳು ಸೇರಿದಂತೆ, ಎಲ್ಲಾ ಥಿಯೇಟರ್‌ಗಳಲ್ಲಿ ಏಕರೂಪ ದರ ಇಂದಿನಿಂದಲೇ ನಿಗದಿ ಆಗಿದೆ.

ಮಲ್ಟಿಫ್ಲೆಕ್ಸ್ ಸೇರಿದಂತೆ, ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರವನ್ನು. 200 ರೂಪಾಯಿಗೆ ನಿಗದಿ ಪಡಿಸಲಾಗಿದೆ. ಇಂದಿನಿಂದಲೇ ಈ ರೂಲ್ಸ್ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಕನ್ನಡ ಸಿನಿಪ್ರೇಮಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಹೀಗಾಗಿ ಇನ್ಮುಂದೆ ಕರ್ನಾಟಕದ ಯಾವುದೇ ಥಿಯೇಟರ್‌ಗಳಲ್ಲಿ ಸಿನಿಮಾ ಟಿಕೆಟ್‌ಗೆ 200 ರೂಪಾಯಿಗಳಿಗಿಂತ ಹೆಚ್ಚು ತೆಗದುಕೊಳ್ಳುವಂತಿಲ್ಲ.

ಈ ಬಗ್ಗೆ ಇದೀಗ ಕನ್ನಡ ಸಿನಿಪ್ರೇಮಿಗಳು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೊದಲು ಕರ್ನಾಟಕದ ಒದೊಂದು ಥಿಯೇಟರ್‌ಗಳಲ್ಲಿ ಪ್ರತ್ಯೇಕ ದರ ನಿಗದಿ ಆಗಿತ್ತು. ಅದರಲ್ಲೂ ಮಲ್ಟಿಫ್ಲೆಕ್ಸ್‌ಗಳಲ್ಲಿ ಮನಸ್ಸಿಗೆ ತೋಚಿದ ದರವನ್ನು ನಿಗದಿ ಪಡಿಸಲಾಗಿತ್ತು. ಟಿಕೆಟ್ ಬೆಲೆಗಳಿಗೆ ಯಾವುದೇ ಕಡಿವಾಣ ಇರಲಿಲ್ಲ. ಇದೀಗ ಈ ಮೂಲಕ ಸರ್ಕಾರ ಸಿನಿಪ್ರೇಮಿಗಳಿಗೆ ಆಗುತ್ತಿದ್ದ ಅನ್ಯಾಯಕ್ಕೆ ಬ್ರೇಕ್ ಹಾಕಿದೆ ಎನ್ನಬಹುದು.

ಮಲ್ಟಿಫ್ಲೆಕ್ಸ್ ಸೇರಿ ಥಿಯೇಟರ್‌ಗಳಲ್ಲಿ ಏಕರೂಪ ಟಿಕೆಟ್‍ ದರ ನಿಗದಿ; 'ಪಾಕೆಟ್ ಫ್ರೆಂಡ್ಲಿ' ಕಾರ್ಯತಂತ್ರ ಯಾರದ್ದು?

ಕನ್ನಡ ಚಿತ್ರಗಳನ್ನು ಜನರು ಥಿಯೇಟರ್‌ಗಳಿಗೆ ಬಂದು ನೋಡುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿರುವುದು ಇಂದು ನಿನ್ನೆಯದಲ್ಲ. ಇತ್ತೀಚಿನ ವರ್ಷಗಳಲ್ಲಿ ಜನರು ಥಿಯೇಟರ್‌ ಕಡೆ ಮುಖ ಮಾಡುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಎದ್ದು ಕಾಣಿಸುತ್ತಿದೆ. ಸ್ಟಾರ್ ಸಿನಿಮಾಗಳಿಗೆ, ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಮಾತ್ರ ಪ್ರೇಕ್ಷಕರು ಸಿಗುತ್ತಿದ್ದಾರೆ. ಹೀಗಾದರೆ ಮುಂದೇನು ಗತಿ ಎಂಬ ಪ್ರಶ್ನೆ ಚಿತ್ರರಂಗವನ್ನು ಕಾಡುತ್ತಿದೆ. ಚಿತ್ರರಂಗದ ಸಮಸ್ಯೆ ಅಂದರೆ ಅದು ಫಿಲ್ಮ್‌ ಚೇಂಬರ್ ಬಗೆಹರಿಸಬೇಕಾದ ಸಮಸ್ಯೆಯೂ ಹೌದು ಎನ್ನಬಹುದು. ಹೀಗಾಗಿ ಕರ್ನಾಟಕ ಚಲನಚಿತ್ರ ಮಂಡಳಿ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಟಿ-ನಿರ್ದೇಶಕಿ ಡಾ. ರೂಪಾ ಅಯ್ಯರ್ (ರಾಜ್ಯ ಸಂಚಾಲಕಿ, ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ, ಬಿಜೆಪಿ), ಆತ್ಮಾನಂದ, (ಸಹ ಸಂಚಾಲಕ - ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಬಿಜೆಪಿ) ಹಾಗೂ ಗೋವಿಂದ ರಾವ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಥ್ಯದ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದನ್ನು ಪರಿಗಣಿಸಿದ ಸರ್ಕಾರ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿರುವ ದುಬಾರಿ ಟಿಕೆಟ್‍ ಬೆಲೆಯನ್ನು ಕಡಿಮೆ ಮಾಡುವುದರ ಜೊತೆಗೆ ಪಕ್ಕದ ರಾಜ್ಯಗಳಲ್ಲಿರುವಂತೆ ಏಕರೂಪ ಟಿಕೆಟ್‍ ದರ ನಿಗದಿಪಡಿಸಲು ರಾಜ್ಯ ಸರ್ಕಾರ ಮಂಗಳವಾರವಷ್ಟೇ ಅಧಿಸೂಚನೆ ಹೊರಡಿಸಿದೆ. ಈ ಆದೇಶ ಇನ್ನೂ ಜಾರಿಯಾಗಿಲ್ಲ.

ಅನೇಕ ವರ್ಷಗಳ ಹೋರಾಟಕ್ಕೆ ಕನ್ನಡ ಚಿತ್ರ ಪ್ರೇಮಿ ಪ್ರಜೆಗಳಿಗೆ ಸಿಕ್ಕ ಜಯ

ಆದರೆ, ಕಲಾವಿದೆ ರೂಪಾ ಅಯ್ಯರ್ ಅವರು ತಮ್ಮ ಮನವಿಯನ್ನು ಸರ್ಕಾರ ಪರಿಗಣಿಸಿ ಆದೇಶ ಸಿರುವುದನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಅವರು 'ಇದು ಅನೇಕ ವರ್ಷಗಳ ಹೋರಾಟಕ್ಕೆ ಕನ್ನಡ ಚಿತ್ರ ಪ್ರೇಮಿ ಪ್ರಜೆಗಳಿಗೆ ಸಿಕ್ಕ ಜಯ. ರಾಜ್ಯ ಸರ್ಕಾರದ ನಿಲುವು ಪ್ರಶಂಸನೀಯ. ಟಿಕೆಟ್ ದರ ಕಡಿಮೆ ಮಾಡಿ ಕನ್ನಡ ಚಿತ್ರ ರಸಿಕರನ್ನ ಮತ್ತೆ ಥಿಯೇಟರ್‌ಗೆ ಕರೆತರಲು ಪ್ರೋತ್ಸಾಹ ನೀಡಿದೆ. ಈ ಆದೇಶ ಜಾರಿಯಾದರೆ ಥಿಯೇಟರ್‌ಗೆ ಬರುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ತುಂಬಾ ವರ್ಷಗಳ ನಮ್ಮ ಹೋರಾಟಕ್ಕೆ ಈಗ ಫಲ ಸಿಕ್ಕಿರೋದು ಖುಷಿ ತಂದಿದೆ' ಎಂದಿದ್ದಾರೆ.

2025-26ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿದಂತೆ, ರಾಜ್ಯಾದ್ಯಂತ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 200 ರೂ. ಮೀರದಂತೆ ಪ್ರವೇಶದರ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಲ್ಟಿಫ್ಲೆಕ್ಸ್‌ಗಳು ಸೇರಿದಂತೆ, ಎಲ್ಲಾ ಥಿಯೇಟರ್‌ಗಳಲ್ಲಿ ಏಕರೂಪ ದರ ಇಂದಿನಿಂದಲೇ ನಿಗದಿ ಆಗಿದೆ. ಈಗ ಪ್ರೇಕ್ಷಕರ ಸಂಖ್ಯೆಯಲ್ಲಿ ಖಂಡಿತ ಹೆಚ್ಚಳವಾಗಿ ಈಗ ಸೊರಗಿರುವ ಚಿತ್ರರಂಗ ಮತ್ತೆ ಚಿಗುರಿಕೊಳ್ಳಲಿದೆ.

ಈ ದರ ಸಿನಿಪ್ರೇಮಿಗಳ ಜೇಬಿಗೆ ಭಾರವಾಗಲ್ಲ!

ಹೊಸಬರ ಚಿತ್ರಗಳೂ ಕೂಡ ಪ್ರೇಕ್ಷಕರಿಗೆ ರೀಚ್ ಆಗಲಿವೆ. ಈ ದರ ಸಿನಿಪ್ರೇಮಿಗಳ ಜೇಬಿಗೆ ಭಾರವಾಗಲ್ಲ. ಜನರು ಚಿತ್ರಮಂದಿರದತ್ತ ಬರಲು ಇದರಿಂದ ಅನುಕೂಲ ಆಗಲಿದೆ. ಇಂದು ಕರ್ನಾಟಕ ಸರ್ಕಾರ ಈ ಆದೇಶ ಹೊರಡಿಸಿದೆ. ಇದರಿಂದ ಆ ಬಗ್ಗೆ ಪ್ರಯತ್ನ ಪಟ್ಟಿರುವ ರೂಪಾ ಅಯ್ಯರ್ ಸೇರಿದಂತೆ, ಎಲ್ಲರಿಗೂ ಕರ್ನಾಟಕ ಸರ್ಕಾರದ ಈ ಆದೇಶ ಖುಷಿ ತಂದಿದೆ.