ಪುಟ್ಟಗೌರಿ, ಕನ್ನಡತಿ ಸೀರಿಯಲ್​ ಮೂಲಕ ಫೇಮಸ್​ ಆಗಿರೋ ನಟಿ ರಂಜನಿ ರಾಘವನ್​ ಇದೀಗ ಕಾಂಟ್ರವರ್ಸಿಯಲ್ಲಿ ಸಿಲುಕಿದ್ದಾರೆ. ಏನದು ನೋಡಿ!

ಪುಟ್ಟಗೌರಿ ಮದುವೆ, ಕನ್ನಡತಿ ಸೇರಿದಂತೆ ಹಲವು ಸೀರಿಯಲ್​ಗಳ ಮೂಲಕ ಮನೆ ಮಾತಾಗಿರುವ ನಟಿ ರಂಜನಿ ರಾಘವನ್​ (Ranjani Raghavan) . ಇವರು ನಟಿಯ ಜೊತೆಜೊತೆಗೇ ಒಳ್ಳೆಯ ಬರಹಗಾರ್ತಿ ಕೂಡ. ಇದಾಗಲೇ ಇವರ ‘ಕತೆ ಡಬ್ಬಿ’ ಎಂಬ ಕಥಾಸಂಕಲನ ಮತ್ತು ‘ಸ್ವೈಪ್ ರೈಟ್’ ಎಂಬ ಕಾದಂಬರಿ ಬರೆದು ಸಾಹಿತ್ಯ ಲೋಕದಲ್ಲಿಯೂ ಮಿಂಚುತ್ತಿದ್ದಾರೆ. ರಂಜನಿ ಅವರಿಗೆ ಕನ್ನಡದ ಮೇಲೆ ಹೆಚ್ಚು ಆಸಕ್ತಿ. ಸಾಹಿತ್ಯ ಲೋಕದಲ್ಲಿಯೂ ಗುರುತಿಸಿಕೊಳ್ಳುವ ಮೂಲಕ ಇದನ್ನು ಅವರು ಸಾಬೀತು ಮಾಡಿದ್ದಾರೆ. ಶೂಟಿಂಗ್​ನ ಬಿಜಿ ಶೆಡ್ಯೂಲ್​ ನಡುವೆಯೂ ಪುಸ್ತಕ ಬರೆಯಲು ಟೈಂ ಮಾಡಿಕೊಳ್ತಾರೆ. ನಟನೆಯಲ್ಲಿ ತೊಡಗಿಸಿಕೊಂಡವರು ಬರವಣಿಗೆ ಬಗ್ಗೆ ಗಮನ ನೀಡೋಕೆ ಸಮಯ ಸಿಗೋದು ಕಡಿಮೆ. ಅದರಲ್ಲೂ ಧಾರಾವಾಹಿ ನಟ-ನಟಿಯರು ಪ್ರತಿ ದಿನ ಶೂಟಿಂಗ್​ನಲ್ಲೇ ಮುಳುಗಿರುತ್ತಾರೆ. ಅದರ ನಡುವೆಯೂ ಕಥೆ, ಕಾದಂಬರಿ ಬರೆಯಬೇಕು ಎಂದರೆ ಸಮಯ ಹೊಂದಿಸಿಕೊಳ್ಳುವುದು ಸುಲಭದ ಮಾತಲ್ಲ. ಆ ಎಲ್ಲ ನೆಪಗಳನ್ನು ಬದಿಗಿಟ್ಟು ನಟಿ ರಂಜನಿ ರಾಘವನ್​ ಅವರು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.

ಈ ಹಿಂದೆ ತಮಗೆ ಸಾಹಿತ್ಯದಲ್ಲಿ ಅಭಿರುಚಿ ಮೂಡಿದ್ದು ಹೇಗೆ ಎಂಬ ಬಗ್ಗೆ ನಟಿ ಮಾತನಾಡಿದ್ದರು. ‘ಶಾಲೆಯಲ್ಲಿ ಸ್ಕಿಟ್​ ಮಾಡುವಾಗ ಪರಸ್ಪರ ಚರ್ಚೆ ಮಾಡುತ್ತಿದ್ದೆವು. ಸೀರಿಯಲ್​ನಲ್ಲೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕಲಾವಿದರು ಇಲ್ಲಿ ಹೇಳಿದ್ದನ್ನಷ್ಟೇ ಮಾಡಿ ಸುಮ್ಮನಾಗಬೇಕು ಎಂಬ ವಾತಾವರಣ ಎದುರಾಯಿತು. ಒಂದೆರಡು ಬಾರಿ ಏನೋ ಹೇಳಲು ಹೋಗಿ ಬೈಯ್ಯಿಸಿಕೊಂಡಿದ್ದೂ ಆಯ್ತು. ಹೇಳುವ ಅಗತ್ಯ ಇದೆ ಅಂತ ಅನಿಸಿದಾಗಲೂ ಬಾಯಿ ಮುಚ್ಚಿಕೊಂಡಿದ್ದುಂಟು’ ಎಂದಿದ್ದಾರೆ ರಂಜನಿ ರಾಘವನ್​. ಇಂಥ ಸಂದರ್ಭ ಎದುರಾಗಲೇ ಅವರಿಗೆ ಬರೆಯಬೇಕು ಎಂಬ ಹಂಬಲ ಶುರುವಾಯಿತು ಎಂದಿದ್ದರು.

ಇವೆಲ್ಲಾ ಸರಿ. ಆದರೆ ಇದೀಗ ನಟ ಕಮಲ ಹಾಸನ್​ ಅವರಿಗೆ ಕನ್ನಡದ ಪುಸ್ತಕವನ್ನು ನೀಡುವ ಮೂಲಕ ಇನ್ನಿಲ್ಲದಂತೆ ಟ್ರೋಲ್​ಗೆ ಗುರಿಯಾಗಿದ್ದಾರೆ ರಂಜಿನಿ. ಅಷ್ಟಕ್ಕೂ ಕಾರಣ ಗೊತ್ತಿದ್ದದ್ದೇ. ಸದ್ಯ ಬಹುತೇಕ ಕನ್ನಡಿಗರು ಕಮಲ ಹಾಸನ್​ ವಿರುದ್ಧ ತಿರುಗಿಬಿದ್ದಿದ್ದಾರೆ. ಕನ್ನಡದ ವಿರುದ್ಧ ಮಾತನಾಡಿದ್ದರಿಂದ ಅವರ ಬಗ್ಗೆ ಇನ್ನಿಲ್ಲದ ಅಸಮಾಧಾನ ಹೊಗೆಯಾಡುತ್ತಿದೆ. ಅವರಿಗೆ ಏನೂ ಹೇಳದ ಶಿವರಾಜ್​ ಕುಮಾರ್​ ವಿರುದ್ಧವೇ ಹಲವರು ಅಸಮಾಧಾನ ಹೊರ ಹಾಕುತ್ತಿರುವುದು ಇದೆ. ಇಂಥ ಸಂದರ್ಭದಲ್ಲಿ ರಂಜನಿ ಅವರು ಪುಸ್ತಕವನ್ನು ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಫೇಮಸ್​ ಆಗಲು ಬಹುತೇಕ ಮಂದಿ ಹುಡುಕುತ್ತಿರುವ ದಾರಿ ಎಂದರೆ ಅದು ಕಾಂಟ್ರವರ್ಸಿ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೂ ಉದ್ದೇಶಪೂರ್ವಕವಾಗಿ ಕಾಂಟ್ರವರ್ಸಿ ಕ್ರಿಯೇಟ್​ ಮಾಡುವುದು ಇದೆ. ಹೀಗಾದರೆ ತಮಗೆ ಪ್ರಚಾರ ಸಿಗುತ್ತದೆ ಎನ್ನುವುದು ಗೊತ್ತು. ಅದರಲ್ಲಿಯೂ ನಟ-ನಟಿಯರಿಗೆ ಇದು ಮಾಮೂಲು ಆಗಿದೆ. ಹೀಗಿರುವಾಗ ನಟಿ ರಂಜನಿ ಕೂಡ ಈ ಸಮಯದಲ್ಲಿ ಕಮಲ ಹಾಸನ್​ ಅವರಿಗೆ ಪುಸ್ತಕ ನೀಡಿರುವ ಉದ್ದೇಶವೂ ಇದೇ ಎಂದು ಬಹುತೇಕ ಮಂದಿ ಕಿಡಿ ಕಾರುತ್ತಿದ್ದಾರೆ. ಮತ್ತೆ ಈಕೆಯ ಅಭಿಮಾನಿಗಳು ಸರಿಯಾದ ಟೈಮ್​ನಲ್ಲಿ ಅವರಿಗೆ ಕನ್ನಡ ಪುಸ್ತಕ ಕೊಟ್ಟಿದ್ದೀರಿ ಎಂದೂ ಹೇಳುತ್ತಿದ್ದಾರೆ.

ಅಂದಹಾಗೆ ಈಚೆಗಷ್ಟೇ ನಟಿಗೆ ಇನ್ನೊಂದು ಹೆಮ್ಮೆಯ ಗರಿ ಮೂಡಿದೆ. ಇವರ ಸಾಹಿತ್ಯ ಪ್ರೇಮವನ್ನು ಗುರುತಿಸಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಯುವ ಸಾಹಿತ್ಯ ರತ್ನ ಬಿರುದು ನೀಡಿ ಗೌರವಿಸಲಾಗಿದ್ದು, ಇದನ್ನು ನಟಿ ತಮ್ಮ ಸೋಷಿಯಲ್​​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಈ ಪ್ರಶಸ್ತಿ ಸಿಗುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ. ಈ ಹಿಂದೆ ನಾನು ಬರೆದಿದ್ದ ಕಥೆ ಡಬ್ಬಿ ಸಂಕಲನವನ್ನು ಬಹಳಷ್ಟು ಮಂದಿ ಓದಿ ಮೆಚ್ಚಿಕೊಂಡಿರುವಿರಿ, ನನ್ನ ಫ್ಯಾನ್ಸ್​ ಪೇಜ್​ಗಳಲ್ಲಿಯೂ ಇದನ್ನು ತುಂಬಾ ಪ್ರಮೋಟ್​ ಮಾಡಿರುವಿರಿ ಎಲ್ಲರಿಗೂ ಧನ್ಯವಾದ ಎಂದಿದ್ದರು. ನಾನು ಬಹಳ ಮುಜುಗರದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ . ಈ ಪ್ರಶಸ್ತಿಯನ್ನು ಎಲ್ಲಾ ಯುವ ಸಾಹಿತಿಗಳಿಗೆ , ಓದುಗರಿಗೆ ಮತ್ತು ಅಭಿಮಾನಿಗಳಿಗೆ ಅರ್ಪಿಸುತ್ತಿದ್ದೇನೆ . ಅಭಿಮಾನಿಗಳು ನನಗೆ ನೀಡಿರುವ ಬೆಂಬಲವನ್ನು ಎಂದಿಗೂ ಮರೆಯುವುದಿಲ್ಲ ಎಂದ ಹೇಳಿದ್ದರು.

View post on Instagram