Asianet Suvarna News Asianet Suvarna News

'ಕನ್ನಡತಿ' ರಂಜನಿ ರಾಘವನ್​ಗೆ ಯುವ ಸಾಹಿತ್ಯ ರತ್ನ ಬಿರುದು: ನಟಿ ಹೇಳಿದ್ದೇನು?

ಪುಟ್ಟಗೌರಿ ಮದುವೆ, ಕನ್ನಡತಿ ಮೂಲಕ ಖ್ಯಾತಿ ಪಡೆದಿರುವ ನಟಿ ರಂಜನಿ ರಾಘವನ್​ಗೆ ಯುವ ಸಾಹಿತ್ಯ ರತ್ನ ಬಿರುದು ನೀಡಲಾಗಿದೆ. ನಟಿ ಹೇಳಿದ್ದೇನು? 
 

Kannadathi Ranjani Raghavan wins Youth Sahitya Ratna award What did the actress say suc
Author
First Published Jul 7, 2024, 3:44 PM IST

ಪುಟ್ಟಗೌರಿ ಮದುವೆ, ಕನ್ನಡತಿ ಸೇರಿದಂತೆ ಹಲವು ಸೀರಿಯಲ್​ಗಳ ಮೂಲಕ ಮನೆ ಮಾತಾಗಿರುವ ನಟಿ ರಂಜನಿ ರಾಘವನ್​ (Ranjani Raghavan) . ಇವರು ನಟಿಯ ಜೊತೆಜೊತೆಗೇ  ಒಳ್ಳೆಯ ಬರಹಗಾರ್ತಿ ಕೂಡ. ಇದಾಗಲೇ  ಇವರ ‘ಕತೆ ಡಬ್ಬಿ’ ಎಂಬ ಕಥಾಸಂಕಲನ ಮತ್ತು  ‘ಸ್ವೈಪ್ ರೈಟ್’ ಎಂಬ ಕಾದಂಬರಿ ಬರೆದು ಸಾಹಿತ್ಯ ಲೋಕದಲ್ಲಿಯೂ ಮಿಂಚುತ್ತಿದ್ದಾರೆ. ರಂಜಿನಿ ಅವರಿಗೆ ಕನ್ನಡದ ಮೇಲೆ ಹೆಚ್ಚು ಆಸಕ್ತಿ. ಸಾಹಿತ್ಯ ಲೋಕದಲ್ಲಿಯೂ ಗುರುತಿಸಿಕೊಳ್ಳುವ ಮೂಲಕ ಇದನ್ನು ಅವರು ಸಾಬೀತು ಮಾಡಿದ್ದಾರೆ. ಶೂಟಿಂಗ್​ನ ಬಿಜಿ ಶೆಡ್ಯೂಲ್​ ನಡುವೆಯೂ  ಪುಸ್ತಕ ಬರೆಯಲು ಟೈಂ ಮಾಡಿಕೊಳ್ತಾರೆ.  ನಟನೆಯಲ್ಲಿ ತೊಡಗಿಸಿಕೊಂಡವರು ಬರವಣಿಗೆ ಬಗ್ಗೆ ಗಮನ ನೀಡೋಕೆ ಸಮಯ ಸಿಗೋದು ಕಡಿಮೆ. ಅದರಲ್ಲೂ ಧಾರಾವಾಹಿ ನಟ-ನಟಿಯರು ಪ್ರತಿ ದಿನ ಶೂಟಿಂಗ್​ನಲ್ಲೇ ಮುಳುಗಿರುತ್ತಾರೆ. ಅದರ ನಡುವೆಯೂ ಕಥೆ, ಕಾದಂಬರಿ ಬರೆಯಬೇಕು ಎಂದರೆ ಸಮಯ ಹೊಂದಿಸಿಕೊಳ್ಳುವುದು ಸುಲಭದ ಮಾತಲ್ಲ. ಆ ಎಲ್ಲ ನೆಪಗಳನ್ನು ಬದಿಗಿಟ್ಟು ನಟಿ ರಂಜನಿ ರಾಘವನ್​ ಅವರು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇದೀಗ ನಟಿಗೆ ಇನ್ನೊಂದು ಹೆಮ್ಮೆಯ ಗರಿ ಮೂಡಿದೆ.  ಇವರ ಸಾಹಿತ್ಯ ಪ್ರೇಮವನ್ನು ಗುರುತಿಸಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ  ಯುವ ಸಾಹಿತ್ಯ ರತ್ನ ಬಿರುದು ನೀಡಿ ಗೌರವಿಸಲಾಗಿದ್ದು, ಇದನ್ನು ನಟಿ ತಮ್ಮ ಸೋಷಿಯಲ್​​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಈ ಪ್ರಶಸ್ತಿ ಸಿಗುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ. ಈ ಹಿಂದೆ ನಾನು ಬರೆದಿದ್ದ ಕಥೆ ಡಬ್ಬಿ ಸಂಕಲನವನ್ನು ಬಹಳಷ್ಟು ಮಂದಿ ಓದಿ ಮೆಚ್ಚಿಕೊಂಡಿರುವಿರಿ, ನನ್ನ ಫ್ಯಾನ್ಸ್​ ಪೇಜ್​ಗಳಲ್ಲಿಯೂ ಇದನ್ನು ತುಂಬಾ ಪ್ರಮೋಟ್​ ಮಾಡಿರುವಿರಿ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. 

ಕೆಮ್ಮು, ಶೀತ, ಅಲರ್ಜಿ, ಕ್ರಿಮಿ ಕಡಿತ... ಅಬ್ಬಬ್ಬಾ ದೊಡ್ಡಪತ್ರೆ ಪ್ರಯೋಜನ ಒಂದೆರಡಲ್ಲ... ಅದಿತಿ ಪ್ರಭುದೇವ ಟಿಪ್ಸ್​​

 ನಾನು ಬಹಳ ಮುಜುಗರದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ . ಈ ಪ್ರಶಸ್ತಿಯನ್ನು  ಎಲ್ಲಾ ಯುವ ಸಾಹಿತಿಗಳಿಗೆ , ಓದುಗರಿಗೆ ಮತ್ತು ಅಭಿಮಾನಿಗಳಿಗೆ ಅರ್ಪಿಸುತ್ತಿದ್ದೇನೆ . ಅಭಿಮಾನಿಗಳು ನನಗೆ ನೀಡಿರುವ ಬೆಂಬಲವನ್ನು ಎಂದಿಗೂ ಮರೆಯುವುದಿಲ್ಲ ಎಂದ ಹೇಳಿದ್ದಾರೆ.   ಈ ಹಿಂದೆ ತಮಗೆ ಸಾಹಿತ್ಯದಲ್ಲಿ ಅಭಿರುಚಿ ಮೂಡಿದ್ದು ಹೇಗೆ ಎಂಬ ಬಗ್ಗೆ ನಟಿ ಮಾತನಾಡಿದ್ದರು. ‘ಶಾಲೆಯಲ್ಲಿ ಸ್ಕಿಟ್​ ಮಾಡುವಾಗ ಪರಸ್ಪರ ಚರ್ಚೆ ಮಾಡುತ್ತಿದ್ದೆವು. ಸೀರಿಯಲ್​ನಲ್ಲೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕಲಾವಿದರು ಇಲ್ಲಿ ಹೇಳಿದ್ದನ್ನಷ್ಟೇ ಮಾಡಿ ಸುಮ್ಮನಾಗಬೇಕು ಎಂಬ ವಾತಾವರಣ ಎದುರಾಯಿತು. ಒಂದೆರಡು ಬಾರಿ ಏನೋ ಹೇಳಲು ಹೋಗಿ ಬೈಯ್ಯಿಸಿಕೊಂಡಿದ್ದೂ ಆಯ್ತು. ಹೇಳುವ ಅಗತ್ಯ ಇದೆ ಅಂತ ಅನಿಸಿದಾಗಲೂ ಬಾಯಿ ಮುಚ್ಚಿಕೊಂಡಿದ್ದುಂಟು’ ಎಂದಿದ್ದಾರೆ ರಂಜನಿ ರಾಘವನ್​. ಇಂಥ ಸಂದರ್ಭ ಎದುರಾಗಲೇ ಅವರಿಗೆ ಬರೆಯಬೇಕು ಎಂಬ ಹಂಬಲ ಶುರುವಾಯಿತು ಎಂದಿದ್ದರು. 

 ಆರಂಭದಲ್ಲಿ ಪುಸ್ತಕ ಬರೆಯುವ ಅಳುಕು ಇತ್ತು. ಆದರೆ ವಿಕಾಸ್​ ನೇಗಿಲೋಣಿ ಅವರ ಪುಸ್ತಕ ಬಿಡುಗಡೆಗೆ ಹೋಗಿದ್ದಾಗ ಅಲ್ಲಿ  ಲೇಖಕ ಜೋಗಿ ಅವರ ಪರಿಚಯ ಆಯಿತು. ಅವರ ಬಳಿ ನನ್ನ ಆಸೆ ಹೇಳಿಕೊಂಡಿದ್ದೆ. ಆರಂಭದಲ್ಲಿ  ಆನ್​ಲೈನ್​ನಲ್ಲಿ ಕಥೆ ಬರೆಯಲು ಆರಂಭಿಸಿದ್ದೆ,  ಕಥೆಗಳಿಗೆ  ಉತ್ತಮ ಸ್ಪಂದನೆ ನೀಡಿದರು. ಆಗ ನನಗೆ ಧೈರ್ಯ ಬಂತು. ಇದೇ ನಾನು ಪುಸ್ತಕ ಬರೆಯಲು ಸ್ಫೂರ್ತಿ ಎಂದಿದ್ದರು.  

ಮದ್ಯ, ಮಾಂಸವಿಟ್ಟು ಪೂಜೆ ಮಾಡಿದ ಬಳಿ ಗೆಟಪ್ಪೇ ಚೇಂಜು: ನನಗೊಂದು ಚೆಂದದ ಶೀರ್ಷಿಕೆ ಕೊಡಿ ಎಂದ ನಿಶ್ವಿಕಾ\

 

Latest Videos
Follow Us:
Download App:
  • android
  • ios