ಸೋಷಿಯಲ್ ಮೀಡಿಯಾದಲ್ಲಿ ಹ್ಯಾಂಗೌಟ್‌ ಮಾಡೋರಿಗೆ ನಮಸ್ಕಾರ ದೇವ್ರು ಅಂದ ಕೂಡಲೇ ಕಿವಿ ನೆಟ್ಟಗಾಗುತ್ತೆ. ಪಕ್ಕದ್ಮನೆ ಹುಡುಗನ ಥರ ಇರೋ 23ರ ಹರೆಯದ ಯುವಕ ಈ ಡಾ ಬ್ರೋ. ಅಚ್ಚಗನ್ನಡದಲ್ಲಿ ಮಾತಾಡ್ತಾನೇ ದುಬೈ, ರಷ್ಯಾ, ಪಾಕಿಸ್ತಾನದಲ್ಲೆಲ್ಲ ಸುತ್ತಾಡುತ್ತಾ ವ್ಲಾಗ್ ಮಾಡೋ ಈ ಹುಡುಗನ ಕಥೆ ಇಂಟರೆಸ್ಟಿಂಗ್‌.

ಡಾ ಬ್ರೋ ಅನ್ನೋ ವೀಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ, ಯೂಟ್ಯೂಬ್‌ನಲ್ಲೆಲ್ಲ ಸಿಗುತ್ತೆ. ಬೀದಿಲಿ ಹೋಗೋ ಹುಡುಗರ ಥರನೇ ಮಾತಾಡ್ತಾ ಒಬ್ಬ ಹುಡುಗ ಯಾವ್ದೋ ದೇಶದಲ್ಲಿ ನಿಂತು ಅಲ್ಲಿನ ಊಟ, ತಿಂಡಿ, ಜನ, ಲೈಫಿನ ಬಗ್ಗೆ ಹೇಳ್ತಾ ಹೋಗ್ತಾನೆ. ಶುರುವಲ್ಲಿ ಇದೇನೋ ಗ್ರಾಫಿಕ್ ಗಿಮಿಕ್ ಇರಬಹುದಾ ಅನ್ನೋ ಡೌಟ್ ಬರುತ್ತೆ. ಇಲ್ಲಾಂದ್ರೆ ತೀರಾ ಸಾಮಾನ್ಯ ಅನಿಸೋ ಮಿಡಲ್ ಕ್ಲಾಸ್ ಹುಡುಗ ರಷ್ಯಾ, ಉಜ್ಬೇಕಿಸ್ತಾನ್‌ನಲ್ಲೆಲ್ಲ ಓಡಾಡಿ ವೀಡಿಯೋ ಮಾಡೋದನ್ನು ಕನಸಲ್ಲೂ ಊಹಿಸೋದು ಸಾಧ್ಯ ಇಲ್ಲ. ಜೊತೆಗೆ ಈ ಹುಡುಗನ ಭಾಷೆ, ಅದು ಅಚ್ಚಗನ್ನಡ. ಇಂಗ್ಲೀಷ್ ಭಾಷೆಯೂ ಸರಿಯಾಗಿ ಗೊತ್ತಿರೋ ಹಾಗಿಲ್ಲ. ಕೈಯಲ್ಲಿ ಕಾಸಿರೋದಂತೂ ಸಾಧ್ಯವೇ ಇಲ್ಲ. ಹೀಗಿರುವಾಗ ರಷ್ಯಾ, ಪಾಕಿಸ್ತಾನ, ಉಜ್ಬೇಕಿಸ್ತಾನಕ್ಕೆಲ್ಲ ಹೋಗೋದು ಹೇಗೆ ಸಾಧ್ಯ ಅನ್ನೋದೇ ಗೊತ್ತಾಗಲ್ಲ. ಆದರೆ ಈ ಹುಡುಗ ನಿಜಕ್ಕೂ ಅಲ್ಲಿಗೆಲ್ಲ ಹೋಗಿದ್ದಾನೆ. ಕೈಯಲ್ಲಿ ಕಾಸಿಲ್ದೇ ಇದ್ರೂ, ಇಂಗ್ಲೀಷ್ ಬರದಿದ್ರೂ ಫಾರಿನ್ ಟೂರ್ ಮಾಡಬಹುದು ಅನ್ನೋದನ್ನು ಸಾಧಿಸಿತೋರಿಸಿದ್ದಾನೆ. ಮಿಲಿಯನ್ ಗಟ್ಟಲೆ ವ್ಯೂಸ್ ಇರುವ ಈತನ ಯೂಟ್ಯೂಬ್ ಪೇಜ್‌ಗೆ ವಿಸಿಟ್ ಮಾಡಿದ್ರೆ ಈ ಹುಡುಗ ನಿಜಕ್ಕೂ ಅಸಾಧ್ಯ ಅನಿಸಿಬಿಡ್ತಾನೆ.

ಅಷ್ಟಕ್ಕೂ ಈ ಡಾ ಬ್ರೋ ನಿಜ ಹೆಸರು ಗಗನ್ ಅಂತ. ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರು. ತಾಯಿ ಹಸು ಕಟ್ಕೊಂಡಿದ್ದಾರಂತೆ. ಈತನಿಗೂ ಅರ್ಚನೆ ಮಾಡೋದು ಬರುತ್ತೆ. ಒಂದಿಷ್ಟು ಸಮಯ ಅರ್ಚನೆ, ಕ್ಯಾಬ್ ಡ್ರೈವಿಂಗ್ ಮಾಡ್ತಾ ಹಣ ಒಟ್ಟು ಮಾಡ್ತಾನೆ. ಈತ ಮಾಡೋ ಯೂಟ್ಯೂಬ್ ವೀಡಿಯೋಗಳಿಂದಲೂ ಒಳ್ಳೆ ಹಣ ಬರುತ್ತೆ. ಇದನ್ನಿಟ್ಟುಕೊಂಡು ದೇಶ ದೇಶ ಸುತ್ತೋದು, ಅಚ್ಚಗನ್ನಡದಲ್ಲಿ ಅಲ್ಲಿನ ಜನ ಜೀವನವನ್ನು ಈತನ ವೀಡಿಯೋ ಫಾಲೋ ಮಾಡೋ ಸಬ್‌ಸ್ಕ್ರೈಬರ್ಸ್ ಗೆ ನೀಡೋದು. ಲಕ್ಷಗಟ್ಟಲೆ ಸಬ್‌ಸ್ಕ್ರೈಬರ್ಸ್ ಈತನಿಗಿದ್ದಾರೆ.

ನಾವಿಬ್ಬರು ಒಟ್ಟಿಗಿಲ್ಲ; ರಾಕೇಶ್ ಜೊತೆ ಬ್ರೇಕಪ್ ಖಚಿತಪಡಿಸಿದ ಶಮಿತಾ ಶೆಟ್ಟಿ

ಅವರನ್ನೀತ ದೇವ್ರು ಅಂತನೇ ಕರೀತಾನೆ. 'ನಮಸ್ಕಾರ ದೇವ್ರೂ..' ಅಂತನೇ ಮಾತು ಸ್ಟಾರ್ಟ್ ಮಾಡೋ ಈ ಹುಡುಗ ಎದುರಿನ ಬೀದಿಯಲ್ಲಿ ಹುಡುಗ್ರು ಮಾತಾಡೋವ ರೀತಿಯಲ್ಲೇ ಎಕ್ಸ್ ಪ್ರೆಶನ್ ಕೊಡ್ತಾನೆ. 'ಹಾರುವ ಪಲ್ಯ' ಅನ್ನೋದು ಈತನ ಫೇಮಸ್ ವೀಡಿಯೋ. 'ಅಯ್ಯಯ್ಯಪ್ಪಾ,, ವಿಲ ವಿಲ ಅಂತಾಯಿದೆ, ಒದ್ದಾಡ್ತಾ ಇವೆ ಹುಳಗಳೆಲ್ಲ. ಥರ ಥರದ ಹುಳ ಇಟ್ಕೊಂಡವ್ರೆ. ಯಾರ್ಯಾರಿಗೆ ಯಾವ್ಯಾವ ಹುಳ ಬೇಕೋ ಅದನ್ನು ಉಪ್ಪು ಕಾರ ಹಾಕಿ ಕೊಡ್ತಾರೆ. ಎದೆ ಝಲ್ಲಂತು ಇದನ್ನೆಲ್ಲ ನೋಡಿ.. ಜನ ಹೆಂಗೆ ತಿಂತವರೆ ಈ ಹುಳಗಳನ್ನ?' ಅನ್ನುತ್ತಲೇ ಥಾಯ್ ರೆಸ್ಟೊರೆಂಟ್‌ನಲ್ಲಿ ಹಸಿ ಹುಳಗಳ ಪಲ್ಯದ ವೀಡಿಯೋ ತೋರಿಸ್ತಾನೆ.

ಈತನ ಮಾತು ಪಕ್ಕಾ ಲೋಕಲ್ ಅನ್ನೋದು ವಿಶೇಷ. ಮಿಡಲ್ ಕ್ಲಾಸ್ (Middle Class) ಜನರ ತೋರಿಕೆ ಇಲ್ಲ ಎಕ್ಸ್‌ಪ್ರೆಶನ್‌, ಪಾಲಿಶ್ಡ್ ಅಲ್ಲದ ಭಾಷೆ ಎಲ್ಲವೂ ಕೇಳೋಕೆ ಸಖತ್ ಮಜಾ ಕೊಡುತ್ತೆ. ತನ್ನ ವೀಡಿಯೋ ನೋಡ್ತಿರೋ ಕನ್ನಡಿಗರಿಗೆ ಜಗತ್ತು ತೋರಿಸಬೇಕು ಅಂತ ಪ್ಲಾನ್ ಮಾಡಿಕೊಂಡಿರೋ ಈ ಹುಡುಗ ರಷ್ಯಾ, ಪಾಕಿಸ್ತಾನ್, ಉಜ್ಬೇಕಿಸ್ತಾನ್, ದುಬೈ, ಪಾಕಿಸ್ತಾನ ಮೊದಲಾದ ದೇಶಗಳಿಗೆ ಸುತ್ತಾಡಿದ್ದಾನೆ. ನಮ್ಮ ದೇಶದ ಬೇರೆ ಬೇರೆ ಜಾಗಗಳಿಗೆ ಹೋಗಿದ್ದಾನೆ. ಅಷ್ಟಕ್ಕೂ ಈತ ಡಾ ಬ್ರೋ ಅಂತ ಹೆಸ್ರಿಟ್ಟುಕೊಂಡಿರೋದ್ಯಾಕೆ ಅನ್ನೋದಕ್ಕೂ ಈತನ ಬಳಿ ಉತ್ತರ ಇದೆ. ವೈದ್ಯಕೀಯ ಪದವಿ ಪಡೆದ ಡಾಕ್ಟರು ಮನುಷ್ಯನ ದೇಹದೊಳಗೆ ಎಕ್ಸ್‌ಪ್ಲೋರ್ ಮಾಡ್ತಾರೆ, ನಾನು ದೇಹದ ಹೊರಗೆ ಎಕ್ಸ್‌ಪ್ಲೋರ್ ಮಾಡ್ತೀನಿ, ನನ್ನ ಜನರಿಗೆ ಇಡೀ ಜಗತ್ತನ್ನು ಕನ್ನಡ ಭಾಷೆಯಲ್ಲಿ ಪರಿಚಯಿಸಬೇಕು ಅಂತ ಡಾ ಬ್ರೋ ಅಂತ ಹೆಸರಿಟ್ಟೆ. ನೀವು ಒರಿಜಿನಲ್ ಡಾಕ್ಟರಾ, ಪಿಎಚ್‌ಡಿ ಡಾಕ್ಟರಾ ಅಂತ ಕೆಲವ್ರು ಕೇಳ್ತಾರೆ, ನಾನು ಅವರಿಗೆ ಫೇಕ್ ಡಾಕ್ಟರ್ ಅಂತ ಹೇಳ್ತೀನಿ ಅನ್ನೋ ಗಗನ್ ಸದ್ಯ ಥೈಲ್ಯಾಂಡಿನ ವೀಡಿಯೋ ಹಾಕ್ತಿದ್ದಾನೆ. ಅಂದರೆ ಈ ಹುಡುಗ ಈಗ ಥೈಲ್ಯಾಂಡಿನ ಬೀದಿಗಳಲ್ಲಿ ಅಲೆದಾಡ್ತಿರಬಹುದು.

ರೋಹಿತ್ ಶೆಟ್ಟಿಯ ತಾಯಿ ಕೂಡ ಡೇಂಜರಸ್‌ ಸ್ಟಂಟ್‌ಗಳನ್ನು ಮಾಡುವುದರಲ್ಲಿ ಎಕ್ಸ್‌ಪರ್ಟ್