ರಾಜ್ಯದಲ್ಲಿ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ಚಿತ್ರವನ್ನು ಏಕಕಾಲದಲ್ಲೇ ತೆರೆಗೆ ತರುವ ಪ್ಲಾನ್‌ ಕೂಡ ಚಿತ್ರತಂಡಕ್ಕಿದೆ. ಸದ್ಯಕ್ಕೀಗ ರಿಲೀಸ್‌ ಸಿದ್ಧತೆಯಲ್ಲೇ ಬ್ಯುಸಿ ಆಗಿರುವ ಚಿತ್ರ ತಂಡವು ನಾಳೆ( ಸೆ.25) ರಿಂದ ಚಿತ್ರದ ಮೊದಲ ವಿಡಿಯೋ ಸಾಂಗ್‌ ಲಾಂಚ್‌ ಮೂಲಕ ಚಂದನವನದಲ್ಲಿ ‘ರೋರಿಸಂ’ ಕ್ರೇಜ್‌ ಸೃಷ್ಟಿಸಲು ಹೊರಟಿದೆ.

‘ರೋರಿಸಂ’ ಎನ್ನುವುದು ಭರಾಟೆ ಚಿತ್ರದ ಇಂಟ್ರಡಕ್ಷನ್‌ ಸಾಂಗ್‌. ಚಿತ್ರದ ನಾಯಕ ನಟ ಶ್ರೀ ಮುರುಳಿ ಅವರ ಮ್ಯಾನರಿಸಂಗೆ ತಕ್ಕಂತೆ ನಿರ್ದೇಶಕ ಚೇತನ್‌ ಕುಮಾರ್‌ ಬರೆದಿರುವ ಸಾಹಿತ್ಯಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ರಾಕ್‌ ಸ್ಟಾರ್‌ ಚಂದನ್‌ ಶೆಟ್ಟಿಹಾಡಿದ್ದು, ಭರಾಟೆ ಎನ್ನುವ ಚಿತ್ರದ ಟೈಟಲ್‌ಗೆ ತಕ್ಕಂತೆ ಅದು ಭರ್ಜರಿ ಧ್ವನಿಯಲ್ಲೇ ಮೂಡಿಬಂದಿದೆ. ಬುಧವಾರ ಅದನ್ನು ಸ್ಯಾಂಡಲ್‌ವುಡ್‌ನ ಸ್ಟಾರ್‌ ನಿರ್ದೇಶಕರಾದ ಸಂತೋಷ್‌ ಆನಂದ ರಾಮ್‌, ತರುಣ್‌ ಸುದೀರ್‌ ಹಾಗೂ ನರ್ತನ್‌ ಲಾಂಚ್‌ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಎರಡು ಲಿರಿಕಲ್‌ ಸಾಂಗ್‌ ಲಾಂಚ್‌ ಮೂಲಕ ಸೋಷಲ್‌ ಮೀಡಿಯಾದಲ್ಲಿ ದೊಡ್ಡ ಕ್ರೇಜ್‌ ಸೃಷ್ಟಿಸಿರುವ ‘ಭರಾಟೆ’ಯ ಪ್ರಚಾರದ ಹಂತವನ್ನು, ಇಂಡಕ್ಷನ್‌ ವಿಡಿಯೋ ಸಾಂಗ್‌ ‘ರೋರಿಸಂ’ ಇನ್ನೊಂದು ಲೆವಲ್‌ಗೆ ತೆಗೆದುಕೊಂಡು ಹೋಗಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು.

'ಮದಗಜ'ನಿಗೆ ಜೋಡಿಯಾದ ಕೀರ್ತಿ ಸುರೇಶ್!

‘ ನಾಯಕ ನಟ ಶ್ರೀಮುರುಳಿ ಅವರಿಗೆ ಭರಾಟೆ ಒಂದು ಸ್ಪೆಷಲ್‌ ಸಿನಿಮಾ. ಇಡೀ ಸಿನಿಮಾ ಅವರ ಇಮೇಜ್‌ ಅನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ಈ ಸಾಂಗ್‌ ಕೂಡ ಚಿತ್ರಕ್ಕೆ ದೊಡ್ಡ ಪ್ಲಸ್‌ ಪಾಯಿಂಟ್‌ ಅಂತಲೇ ಹೇಳಬಹುದು. ಕತೆಯ ಪಾತ್ರಕ್ಕೆ ಅನುಗುಣವಾಗಿ ಅವರ ರಿಯಲ್‌ ಲೈಫ್‌ ಮ್ಯಾನರಿಸಂ ಗಮನದಲ್ಲಿಟ್ಟುಕೊಂಡೇ ಈ ಹಾಡಿನ ಸಾಹಿತ್ಯ ರಚಿಸಲಾಗಿದೆ. ಸಾಹಿತ್ಯಕ್ಕೆ ತಕ್ಕಂತೆ ಅರ್ಜುನ್‌ ಜನ್ಯ ಅವರ ಸಂಗೀತ ಹಾಗೂ ಚಂದನ ಶೆಟ್ಟಿಅವರ ಗಾಯನ ಮೈ ನವಿರೇಳಿಸುವಂತೆ ಮಾಡಿದೆ. ಈ ಹಾಡಿನ ವಿಡಿಯೋ ಸಾಂಗ್‌ ಬಿಡುಗಡೆಯಾದ್ರೆ, ಖಂಡಿತವಾಗಿಯೂ ಸ್ಯಾಂಡಲ್‌ವುಡ್‌ನಲ್ಲಿ ರೋರಿಸಂ ಕ್ರೇಜ್‌ ದೊಡ್ಡ ಮಟ್ಟದಲ್ಲಿ ಶುರುವಾಗುವ ವಿಶ್ವಾಸವಿದೆ’ಎನ್ನುತ್ತಾರೆ ನಿರ್ದೇಶಕ ಚೇತನ್‌ ಕುಮಾರ್‌.

15 ವರ್ಷದ ನಂತರ 'ಶಂಭು' ಪ್ರೇಯಸಿ ಜೊತೆ ಒಂದಾದ ಶ್ರೀಮುರಳಿ!

ಅದೆಲ್ಲಕ್ಕಿಂತ ಮುಖ್ಯವಾಗಿ ಚಿತ್ರಕ್ಕೆ ನಿರ್ದೇಶಕರಾದ ಸಂತೋಷ್‌ ಆನಂದ ರಾಮ್‌, ತರುಣ್‌ ಸುಧೀರ್‌ ಹಾಗೂ ನರ್ತನ್‌ ಬೆಂಬಲ ನೀಡಿರುವುದು ಚಿತ್ರ ತಂಡಕ್ಕೆ ದೊಡ್ಡ ಖುಷಿ ಕೊಟ್ಟಿದೆ.‘ ಒಳ್ಳೆಯ ಒಡನಾಟಕ್ಕೆ ಅವರು ಕೊಟ್ಟಬೆಲೆ ಇದು. ಸ್ನೇಹಿತರಾಗಿ ಬಂದು ವಿಡಿಯೋ ಲಾಂಚ್‌ ಮಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ಖುಷಿ ಆಗಿದೆ’ ಎನ್ನುವುದು ಚೇತನ್‌ ಪ್ರತಿಕ್ರಿಯೆ. ಇನ್ನು ಈ ಚಿತ್ರಕ್ಕೆ ನಟ ಶಿವರಾಜ್‌ ಕುಮಾರ್‌ ಕೂಡ ಬೆಂಬಲ ನೀಡಿದ್ದಾರೆ. ಚಿತ್ರಕತೆಯ ಪರಿಚಯದ ಮಾತುಗಳಿಗೆ ಮೊನ್ನೆಯಷ್ಟೇ ನಟ ಶಿವರಾಜ್‌ ಕುಮಾರ್‌ ಧ್ವನಿ ನೀಡಿ, ಚಿತ್ರತಂಡಕ್ಕೆ ಸಾಥ್‌ ನೀಡಿದ್ದಕ್ಕೆ ನಾಯಕ ನಟ ಶ್ರೀ ಮುರುಳಿ ಫುಲ್‌ ಖುಷ್‌ ಆಗಿದ್ದಾರೆ.‘ ನಾನು ನಟನಾಗುವುದಕ್ಕೆ ಶಿವರಾಜ್‌ ಕುಮಾರ್‌ ಅವರೇ ಸ್ಫೂರ್ತಿ.

ಅಬ್ಬಾ...! ರೋರಿಂಗ್ ಸ್ಟಾರ್ ಶೇಷಾದ್ರಿಪುರಂ ಕಾಲೇಜ್ ಲವ್ ಸ್ಟೋರಿ ಕೇಳಿದ್ದೀರಾ ?

ಪ್ರತಿ ಹಂತದಲ್ಲೂ ನನ್ನನ್ನು ಬೆಂಬಲಿಸಿ, ಪ್ತೋತ್ಸಾಹಿಸುತ್ತಾ ಬರುತ್ತಿದ್ದಾರೆ. ಒಟ್ಟಿಗೆ ಸಿನಿಮಾ ಮಾಡುವ ಅವಕಾಶವೂ ಸಿಕ್ಕಿದೆ. ಈಗ ಮತ್ತೆ ನನ್ನನ ಚಿತ್ರಕ್ಕೆ ಧ್ವನಿ ನೀಡಿ, ಬೆನ್ನಿಗೆ ನಿಂತಿರುವುದಕ್ಕೆ ಎಷ್ಟುಧನ್ಯವಾದ ಹೇಳಿದರೂ ಸಾಲದು’ಎನ್ನುತ್ತಾರೆ ನಟ ಶ್ರೀ ಮುರುಳಿ.