ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ತನ್ನ ಅಭಿಮಾನಿಗಳನ್ನು ಸ್ನೇಹಿತರಂತೆ 'ಚಿನ್ನಾ', 'ಬಂಗಾರ' ಎಂದೆಲ್ಲಾ ಹೆಸರಿಟ್ಟು ಮಾತನಾಡಿಸುತ್ತಾರೆ. ಇನ್ನು ತಮ್ಮ ಆತ್ಮೀಯ ಗೆಳೆಯರಿಗೆ ಆತ್ಮೀಯತೆ ತೋರುವುದಿಲ್ಲವೇ?

ಹೌದು. 15 ವರ್ಷಗಳ ನಂತರ ಮುರುಳಿ ನಟಿ ಮಾನ್ಯರನ್ನು ಭೇಟಿ ಮಾಡಿದ್ದಾರೆ. ಮದುವೆಯಾದ ಬಳಿಕ ಅಮೇರಿಕಾದಲ್ಲಿ ವಾಸಿಸುತ್ತಿರುವ ಮಾನ್ಯರನ್ನು ಮುರುಳಿ ಪತ್ನಿ ವಿದ್ಯಾ ಆಗಾಗ ಭೇಟಿ ಮಾಡುತ್ತಿದ್ದರು. ಆದರೆ ಬ್ಯುಸಿ ಶೂಟಿಂಗ್ ಶೆಡ್ಯೂಲ್ ನಿಂದಾಗಿ ಮುರುಳಿ ಭೇಟಿ ಮಾಡಲು ಆಗಿರಲಿಲ್ಲ.

 

 
 
 
 
 
 
 
 
 
 
 
 
 

Look who came to visit us in New York City! #sriimurali

A post shared by Manya (@manya_naidu) on Aug 18, 2019 at 7:32pm PDT

ಕೆಲ ದಿನಗಳ ಹಿಂದೆ ಅಮೇರಿಕಾಗೆ ತೆರಳಿದ ಮುರುಳಿ ಮಾನ್ಯ ಅವರ ಕುಟುಂಬದವರ ಜೊತೆ ಸಮಯ ಕಳೆದು ಅವರ ತಾಯಿಯ ಆರೋಗ್ಯ ವಿಚಾರಿಸಿಕೊಂಡು ಅಶೀರ್ವಾದ ಪಡೆದಿರುವ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇನ್ನು ಮುರುಳಿ ಹಾಗೂ ಮಾನ್ಯ ಭೇಟಿ ಮಾಡಿರುವ ವಿಡಿಯೋವನ್ನು ವಿದ್ಯಾ ಮುರುಳಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.