ಕೀರ್ತಿ ಸುರೇಶ್ ಅವರನ್ನು ಚಿತ್ರಕ್ಕೆ ನಾಯಕಿಯನ್ನಾಗಿ ತರಲು ಚಿತ್ರತಂಡ ಸಾಕಷ್ಟು ಪ್ರಯತ್ನ ನಡೆಸಿದ್ದು, ಆ ನಿಟ್ಟಿನಲ್ಲಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದೆ ಎನ್ನಲಾಗಿದೆ. ಚಿತ್ರತಂಡದ ಮಾತುಕತೆ ಫಲಪ್ರದವಾಗಿ ಕೀರ್ತಿ ಸುರೇಶ್ ಅಭಿನಯಿಸಲು ಒಪ್ಪಿಕೊಂಡು ಬಂದರೆ ಕನ್ನಡಕ್ಕೆ ಇದು ಅವರ ಮೊದಲ ಚಿತ್ರ.

ಶ್ರೀಮುರಳಿ ಕಷ್ಟಕ್ಕೆ ಕೈ ಹಿಡಿದ ದರ್ಶನ್!

ತೆಲುಗಿನ ‘ಮಹಾನಟಿ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ ಕೀರ್ತಿ ಸುರೇಶ್, ತೆಲುಗು, ತಮಿಳು, ಮಲಯಾಳಂನಲ್ಲಿ ಬಹು ಬೇಡಿಕೆಯ ನಟಿ. ಆ ಕಡೆಯಿಂದ ಪ್ರಿಯಾ ಆನಂದ್ ಸೇರಿದಂತೆ ಹಲವರು ಬಂದು ಹೋದ ಹಾಗೆಯೇ ಕೀರ್ತಿ ಸುರೇಶ್ ಅವರನ್ನು ಕನ್ನಡಕ್ಕೆ ತರಬೇಕೆನ್ನುವ ನಿಟ್ಟಿನಲ್ಲಿ ಹಲವು ನಿರ್ದೇಶಕರು ಪ್ರಯತ್ನಿಸಿದ್ದು ಹೊಸದಲ್ಲ.

ಶ್ರೀಮುರಳಿ 'ಮದಗಜ' ಚಿತ್ರದಲ್ಲಿ ವಿಜಯಲಕ್ಷ್ಮಿ!

ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರಕ್ಕೆ ಕೀರ್ತಿ ಸುರೇಶ್ ಬರುವುದು ಖಚಿತ ಅಂತಲೂ ಹೇಳಲಾಗಿತ್ತು. ಕೊನೆಗೆ ಆ ಚಿತ್ರಕ್ಕೆ ಬಂದಿದ್ದು ಮುಂಬೈ ಬೆಡಗಿ ಸಯ್ಯೇಷಾ. ‘ಮದಗಜ’ ಚಿತ್ರ ಕತೆ ಹೇಗೋ ಏನೋ ಗೊತ್ತಿಲ್ಲ. ಆದರೆ ಆ ಚಿತ್ರದ ನಾಯಕಿ ಜಾಗಕ್ಕೆ ಈಗಾಗಲೇ ಕನ್ನಡದ ಹಲವು ಸ್ಟಾರ್ ನಟಿಯರ ಹೆಸರು ಕೂಡ ಚಾಲ್ತಿಗೆ ಬಂದಿದ್ದವು. ಆದರೆ ಅವ್ಯಾವು ಫೈನಲ್ ಅಲ್ಲ ಎನ್ನುವ ಮಾತನ್ನು ನಿರ್ದೇಶಕರೇ ಹೇಳಿದ್ದರು.

ಇದೆಲ್ಲವನ್ನು ನೋಡಿದರೆ ಪರಭಾಷೆ ನಟಿಯರತ್ತ ಚಿತ್ರತಂಡ ಗಮನ ಹರಿಸಿರುವುದು ನಿಜ. ಆ ನಿಟ್ಟಿನಲ್ಲೇ ಕೀರ್ತಿ ಸುರೇಶ್ ಅವರನ್ನು ಚಿತ್ರತಂಡ ಭೇಟಿ ಮಾಡಿ ಮಾತುಕತೆ ನಡೆಸಿದೆ ಎನ್ನುತ್ತಿವೆ ಮೂಲಗಳು

15 ವರ್ಷದ ನಂತರ 'ಶಂಭು' ಪ್ರೇಯಸಿ ಜೊತೆ ಒಂದಾದ ಶ್ರೀಮುರಳಿ!