ಕೆಜಿಎಫ್ -2 ಶೂಟಿಂಗ್ ಭರದಿಂದ ಸಾಗುತ್ತಿದೆ. ಕೆಜಿಎಫ್-2 ತಂಡ ಬಿಗ್ ನ್ಯೂಸ್ ಕೊಡುವುದಾಗಿ ಹೇಳಿತ್ತು. ಅದರಂತೆ ಚಿತ್ರದಲ್ಲಿ ಬರುವ ಅಧೀರನ ಪಾತ್ರದ ಪೋಸ್ಟರನ್ನು ರಿಲೀಸ್ ಮಾಡಿದೆ.

ಕೆಜಿಎಫ್-2 ಗೆ ಬಾಲಿವುಡ್‌ನ ’ಮಳೆ ಹುಡುಗಿ’

 

ನಟ ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ‘ಕೆಜಿಎಫ್‌ 2’ ಚಿತ್ರದ ಅಧೀರ ಪಾತ್ರದಾರಿಯ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ.  ಬಾಲಿವುಡ್‌ನ ಸಂಜಯ್‌ ದತ್ ಅಧೀರನ ಪಾತ್ರ ಮಾಡುತ್ತಾರೆ ಎಂಬುದು ಚಾಲ್ತಿಯಲ್ಲಿರುವ ಸುದ್ದಿ. ಇವರ ಲುಕ್‌ ಅನ್ನು ಚಿತ್ರತಂಡ ಜು.29 ರಂದು ಬೆಳಗ್ಗೆ ಅನಾವರಣಗೊಳಿಸುತ್ತಿದೆ. 

ಬೆಂಗಳೂರಿನಲ್ಲಿ ಕೆಜಿಎಫ್ ಗಾಗಿ ನಿರ್ಮಾಣ ಆಯ್ತು ‘ನರಾಚಿ’

ಸದ್ಯಕ್ಕೆ ಮುಖ ಕಾಣದ, ಬಿಗಿ ಮುಷ್ಠಿ ಹಿಡಿದು ನಿಂತ ಅಧೀರನ ಪಾತ್ರ ಹೇಗಿರಬಹುದು ಎನ್ನುವ ಕುತೂಹಲ ಜೋರಾಗಿಯೇ ಇದೆ.  ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿರುವ ‘ಕೆಜಿಎಎಫ್‌ 2’ ಅಧೀರನ ಪಾತ್ರದ ಮೂಲಕ ಗಮನ ಸೆಳೆಯುವುದಕ್ಕೆ ಹೊರಟಿದೆ. 

ಜು.29 ರಂದು ಸಂಜಯ್‌ ದತ್ ಅವರ ಹುಟ್ಟು ಹಬ್ಬ. ಈ ಕಾರಣಕ್ಕೆ ಚಿತ್ರತಂಡ ಪ್ಲಾನ್‌ ಮಾಡಿಕೊಂಡೇ ಅಧೀರನ ಪಾತ್ರವನ್ನು ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.