ಎರಡು ವರ್ಷಗಳಿಂದ ನಾನಾ ಕಾರಣಕ್ಕೆ ಸುದ್ದಿ ಮಾಡುತ್ತಲೇ ಬಂದ ‘ಮೀನಾ ಬಜಾರ್‌’ ಚಿತ್ರವೀಗ ರಿಲೀಸ್‌ಗೆ ರೆಡಿ ಆಗಿದೆ. ಕನ್ನಡದ ಜತೆಗೆ ಇದು ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಎರಡು ಭಾಷೆಯಲ್ಲೂ ಈಗ ಸೆನ್ಸಾರ್‌ ಮುಗಿಸಿದೆ. ತೆಲುಗಿನಲ್ಲಿ ಯು/ಎ ಸರ್ಟಿಫಿಕೇಟ್‌ ಸಿಕ್ಕಿದೆ. ಕನ್ನಡದಲ್ಲಿ ‘ಎ’ ಸರ್ಟಿಫಿಕೇಟ್‌ ಕೊಟ್ಟಿದ್ದಾರಂತೆ. ಇದೆಲ್ಲ ಹೀಗೆ ಸಾಧ್ಯ ಎನ್ನುವುದು ಅವರ ಪ್ರಶ್ನೆ. ಚಿತ್ರದ ಪೋಸ್ಟರ್‌ ಹಾಗೂ ಟೀಸರ್‌ ಲಾಂಚ್‌ ಸಂದರ್ಭದಲ್ಲಿ ಅವರು ತಮ್ಮೊಳಗಿನ ನೋವನ್ನು ತಣ್ಣಗೆ ಹೊರ ಹಾಕಿದರು.

ನಟಿಗೆ ಮೋಸ ಮಾಡಿ ‘ಗೀತಾ’ ಹಿಟ್ ಆಯ್ತಾ? ಶಾನ್ವಿ ಬರೆದ್ರು ಅಸಮಾಧಾನ ಪತ್ರ!

‘ಚಿತ್ರದ ಪೂರ್ಣ ಹೆಸರು ‘ಡಿಡಿಡಿ.ಮೀನಾಬಜಾರ್‌.,’ ಶೀರ್ಷಿಕೆ ಕೊಂಚ ವಿಭಿನ್ನ ಮತ್ತು ವಿಕ್ಷಿಪ್ತವಾಗಿದೆ. ಆದರೂ ತಕ್ಷಣಕ್ಕೆ ಇದು ಡಾಟ್‌.ಕಾಮ್‌ಗೆ ಸಂಬಂಧಿಸಿದ ಚಿತ್ರ ಎಂದುಕೊಳ್ಳುವುದು ಅಷ್ಟೇ ಸಹಜ. ಆ ಗೊಂದಲಕ್ಕೆ ಮೊದಲು ಸ್ಪಷ್ಟನೆ ಕೊಟ್ಟರು ಸುನೀಲ್‌ ಕುಮಾರ್‌ ಸಿಂಗ್‌.‘ ಇದು ಡಾಟ್‌.ಕಾಮ್‌ ಅಲ್ಲ. ಡಾಟ್‌ ಕಾಮಾ. ಕಾಮ ಅಂದ್ರೆ ಸೆಕ್ಸ್‌ ಆಗಬಹುದು, ಬಯಕೆ ಅಂತಲೂ ಇರಬಹುದು. ಇಲ್ಲವೇ ಮುಂದುವರೆದ ಭಾಗ ಅಂತಲೂ ಆಗಬಹುದು. ಚಿತ್ರದ ಕತೆಗೆ ತಕ್ಕಂತೆ ಈ ಟೈಟಲ್‌ ಇಟ್ಟಿದ್ದೇವೆ’ ಎನ್ನುತ್ತಾರೆ ರಾಣಾ ಸುನೀಲ್‌ ಕುಮಾರ್‌ ಸಿಂಗ್‌.

ಸಿಂಗರ್‌ ಚನ್ನಪ್ಪಗೆ 'ಲೈಟಾಗಿ ಲವ್ವಾಗಿದೆ'!

ನಿರ್ದೇಶಕ ಸುನೀಲ್‌ ಕುಮಾರ್‌ ಸಿಂಗ್‌ ಅವರೇ ಈ ಚಿತ್ರದ ಪ್ರಧಾನ ಪಾತ್ರಧಾರಿ. ವೈಭವಿ ಜೋಷಿ ಹಾಗೂ ಮುಂಬೈ ಮೂಲದ ನಟಿ ಶ್ರೀಜಿತ್‌ ಘೋಷ್‌ ನಾಯಕಿಯರು. ಅವರೊಂದಿಗೆ ಆಲಿಷಾ ಕೂಡ ಇದ್ದಾರೆ. ರಾಜೇಶ್‌ ನಟರಂಗ, ಅರವಿಂದ್‌ ರಾವ್‌, ಲಕ್ಷ್ಮಿ ಹೆಗಡೆ, ರೂಪೇಶ್‌ ಕುಮಾರ್‌, ಜೀವಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಶಿವಣ್ಣ ಅಂದ್ರೆ ಫೆಂಟಾಸ್ಟಿಕ್‌, ವೆರಿ ಹಂಬಲ್‌, ವೆರಿ ಸಿನ್ಸಿಯರ್‌:ದ್ವಾರಕೀಶ್‌

ಸಿಂಗ್‌ ಸಿನಿಮಾಸ್‌ನ ನಾಗೇಂದ್ರ ಸಿಂಗ್‌ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ಸುನೀಲ್‌ ಕುಮಾರ್‌ ಅವರೇ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ, ಶ್ರೀಕಾಂತ್‌ ಸಂಕಲನ, ಮ್ಯಾಥ್ಯೂ ಛಾಯಾಗ್ರಹಣ ಈ ಚಿತ್ರಕ್ಕಿದೆ. ಆದಿನ ಚಿತ್ರದ ವಿಭಿನ್ನ ಪೋಸ್ಟರ್‌ ಲಾಂಚ್‌ಗೆ ಬೆಂಗಳೂರಿನ ವಿಜಯ್‌ ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು. ಹಾಗೆಯೇ ಟೀಸರ್‌ ಲಾಂಚ್‌ಗೆ ಮೂವರು ಸಾಫ್ಟ್‌ವೇರ್‌ ಉದ್ಯೋಗಿಗಳ ಬಂದಿದ್ದರು. ಅವರೊಂದಿಗೆ ವಿಭಿನ್ನವಾಗಿ ಪೋಸ್ಟರ್‌ ಮತ್ತು ಟೀಸರ್‌ ಲಾಂಚ್‌ ಮಾಡಿಸಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಆಲೋಚನೆಯಲ್ಲಿದೆ.