ಶಿವಣ್ಣ ಅಂದ್ರೆ ಫೆಂಟಾಸ್ಟಿಕ್‌, ವೆರಿ ಹಂಬಲ್‌, ವೆರಿ ಸಿನ್ಸಿಯರ್‌:ದ್ವಾರಕೀಶ್‌

ಶಿವಣ್ಣ ಅಂದ್ರೆ ಫೆಂಟಾಸ್ಟಿಕ್‌, ಶಿವಣ್ಣ ಅಂದ್ರೆ ವೆರಿ ಹಂಬಲ್‌, ಶಿವಣ್ಣ ಅಂದ್ರೆ ವೆರಿ ಸಿನ್ಸಿಯರ್‌...

- ಶಿವರಾಜ್‌ಕುಮಾರ್‌ ಅವರನ್ನು ಹೀಗೆಲ್ಲ ತಮ್ಮದೇ ಮಾತುಗಳಲ್ಲಿ ಬಣ್ಣಿಸುತ್ತಾ ಹೋದರು ಹಿರಿಯ ನಟ ದ್ವಾರಕೀಶ್‌. 

Kannada director Actor Dwarakish talks about Shivarajkumar ayushman bhava press meet

ಶಿವರಾಜ್‌ ಕುಮಾರ್‌ ಹಾಗೂ ರಚಿತಾರಾಮ್‌ ಅಭಿನಯದ ಚಿತ್ರ‘ಆಯುಷ್ಮಾನ್‌ ಭವ’. ನವೆಂಬರ್‌ 1ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ‘ಶಿವಲಿಂಗ’ ನಂತರ ಶಿವರಾಜ್‌ ಕುಮಾರ್‌ ಹಾಗೂ ನಿರ್ದೇಶಕ ಪಿ.ವಾಸು ಮತ್ತೆ ಒಂದಾಗಿದ್ದಾರೆ. ಹಾಗೆಯೇ ಇದು ದ್ವಾರಕೀಶ್‌ ಚಿತ್ರ ಸಂಸ್ಥೆಯ 52ನೇ ಚಿತ್ರ.

ತೆರೆಗೆ ಬರಲು ಸಿದ್ಧವಾಯ್ತು ‘ಆಯುಷ್ಮಾನ್ ಭವ’

ಚಿತ್ರತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದು ಮಾತನಾಡಿತು. ನಿರ್ಮಾಪಕ ಯೋಗಿ ಅವರದ್ದು ಮೊದಲು ಮಾತು. ‘ಸಿನಿಮಾ ಆಗಿದ್ದು ಶಿವರಾಜ್‌ಕುಮಾರ್‌ ಮೂಲಕ. ‘ಅಮ್ಮ ಐ ಲವ್‌ ಯೂ’ ಚಿತ್ರ ರಿಲೀಸ್‌ ಆದ ನಂತರ ಒಮ್ಮೆ ಸಿಕ್ಕಿದ್ದರು. ಕಲೆಕ್ಷನ್‌ ಏನಾಯ್ತು ಅಂತ ವಿಚಾರಿಸಿದರು. ನಿರೀಕ್ಷೆಯಷ್ಟುಆಗಲಿಲ್ಲ ಎಂದಾಗ ಒಂದು ಸಿನಿಮಾ ಮಾಡೋಣ ಅಂದ್ರು. ಅವರೇ ಒಂದು ಕತೆ ಕೇಳಿಸಿದರು. ಹಾಗೆ ಶುರುವಾಗಿದ್ದು ‘ಆಯುಷ್ಮಾನ್‌ ಭವ’. ಕತೆ ತುಂಬಾ ಚೆನ್ನಾಗಿದೆ. ಸಾಮಾನ್ಯವಾಗಿ ನಮ್ಮ ಬ್ಯಾನರ್‌ನಲ್ಲಿ ಕೌಟುಂಬಿಕ ಕತೆಗಳೇ ಆಯ್ಕೆ. ಅಂತಹದೇ ಕತೆಯಿದು’ ಎಂದರು ನಿರ್ಮಾಪಕ ಯೋಗೇಶ್‌ ದ್ವಾರಕೀಶ್‌. ಆನಂತರ ದ್ವಾರಕೀಶ್‌ ಕೈಗೆ ಮೈಕ್‌ ಬಂತು. ದ್ವಾರಕೀಶ್‌ ಚಿತ್ರ ಸಂಸ್ಥೆಗಾಗಿಯೇ ಸಿನಿಮಾ ಮಾಡಲು ಬಂದ ಶಿವರಾಜ್‌ ಕುಮಾರ್‌ ಅವರನ್ನು ಮುಕ್ತ ಕಂಠದಿಂದ ಮೆಚ್ಚಿಕೊಂಡರು ನಟ ದ್ವಾರಕೀಶ್‌.

ಮೊದಲು ನಾವು ಭಾರತೀಯರು, ಆಮೇಲೆ ಮಾತೃಭಾಷೆ: ಶಿವರಾಜ್‌ಕುಮಾರ್‌

ವಾಸು ಜತೆಗೆ ಎರಡನೇ ಸಿನಿಮಾ. ದ್ವಾರಕೀಶ್‌ ಚಿತ್ರ ಸಂಸ್ಥೆಯಲ್ಲಿ ಮೊದಲ ಸಿನಿಮಾ. ಟೈಟಲ್‌ ತಕ್ಕಂತೆ ಸಿನಿಮಾ ಪ್ರತಿಯೊಬ್ಬರ ಬುದುಕಿನ ಕುರಿತು ಮಾತನಾಡುತ್ತೆ. ಪ್ರತಿಯೊಬ್ಬರಿಗೂ ಭಾವನೆಗಳು ಇರುತ್ತವೆ. ಅಲ್ಲಿ ಒಳ್ಳೆಯದು ಇರುತ್ತವೆ, ಹಾಗೆಯೇ ಕೆಟ್ಟದ್ದು ಕೂಡ ಇರುತ್ತವೆ. ಅಂತಹ ಭಾವನೆಗಳ ನಡುವಿನ ಒದ್ದಾಟ, ತಾಕಲಾಟದ ಕತೆಯಿದು.- ಶಿವರಾಜ್‌ಕುಮಾರ್‌

ಸಂಗೀತ ನಿರ್ದೇಶಕ ಗುರುಕಿರಣ್‌ ಅವರಿಗೆ ಇದು ನೂರನೇ ಚಿತ್ರ. 5 ಹಾಡು, 5 ಬಿಟ್ಸ್‌ ಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರಂತೆ. ಚಿತ್ರದ ನಾಯಕಿಯರಾದ ರಚಿತಾ ರಾಮ್‌, ನಿಧಿ ಸುಬ್ಬಯ್ಯ ಹಾಜರಿದ್ದು, ತಮ್ಮ ಪಾತ್ರಗಳ ಜತೆಗೆ ಚಿತ್ರೀಕರಣದ ಅನುಭವ ಹಂಚಿಕೊಂಡರು. ‘ಶಿವರಾಜ್‌ ಕುಮಾರ್‌ ಜತೆಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದೇ ಒಂದು ಅದೃಷ್ಟ. ಚೆನ್ನಾಗಿ ಅಭಿನಯಿಸಿದ್ದೇನೆನ್ನುವ ಖುಷಿಯಿದೆ. ಆದರೂ ಒಳ್ಳೆಯದಾದರೂ, ಕೆಟ್ಟದ್ದೇ ಆದರೂ ಅದಕ್ಕೆ ನಿರ್ದೇಶಕರೇ ಕಾರಣ’ ಎಂದು ರಚಿತಾರಾಮ್‌ ಹೇಳುತ್ತಿದ್ದಂತೆ ‘ರಚಿತಾ ತುಂಬಾ ಡ್ರಾಮಾ ಮಾಡ್ತಾರೆ’ ಅಂತಲೇ ಮಾತ ತಮಾಷೆ ಮಾಡಿ ಮಾತಿಗೆ ನಿಂತರು ಶಿವರಾಜ್‌ ಕುಮಾರ್‌. ‘ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ’ ಎಂದರು.

ನೂರು ಸಿನಿಮಾ ಸಂಭ್ರಮದಲ್ಲಿ ಗುರುಕಿರಣ್‌!

ಸಾಧು ಕೋಕಿಲ, ಛಾಯಾಗ್ರಾಹಕ ಪಿ.ಕೆ. ಎಸ್‌. ದಾಸ್‌ ಕೂಡ ಚಿತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಸಂಭ್ರಮ, ನಗು, ತಮಾಷೆ, ಕಾಲೆಳೆಯುವ ಮಾತುಗಳ ಮೂಲಕ ಚಿತ್ರ ತಂಡ ‘ಆಯುಷ್ಮಾನ್‌ಭವ ’ದ ಮೊದಲ ಸುದ್ದಿಗೋಷ್ಠಿಗೆ ಮುಗಿಸಿತು.

Latest Videos
Follow Us:
Download App:
  • android
  • ios