ರಕ್ಷಿತ್ ಶೆಟ್ಟಿ ಜೊತೆ ಅವನೇ ಶ್ರೀಮನ್ನಾರಾಮಯಣ, ಗೋಲ್ಡನ್ ಗಣಿ ಜೊತೆ ಗೀತಾ , ರವಿಚಂದ್ರನ್ ಜೊತೆ ರವಿಚಂದ್ರ ಸಿನಿಮಾದಲ್ಲಿ ನಟಿಸಿರುವ ವಾರಣಾಸಿ ಮೂಲದ ಚೆಲುವೆ ಶಾನ್ವಿ ಶ್ರೀವಾಸ್ತವ್. 

ಎರಡು ವರ್ಷದ ಬಳಿಕ ಎರಡು ಶೇಡ್ ನಲ್ಲಿ ಶಾನ್ವಿ!

ಶಾನ್ವಿ ಶ್ರೀವಾಸ್ತವ್, ಗೋಲ್ಟನ್ ಗಣಿ ಜೊತೆ ಮಾಡಿರುವ ‘ಗೀತಾ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಗೀತಾ ಯಶಸ್ಸಿನ ಖುಷಿಯಲ್ಲಿದ್ದಾರೆ ಮಾಸ್ಟರ್ ಪೀಸ್ ಚೆಲುವೆ. ಕನ್ನಡ ಸಿನಿಮಾ ಬಗ್ಗೆ ದಿಢೀರನೇ ಪೋಸ್ಟೊಂದನ್ನು ಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ. 

ನಾವು ಒಳ್ಳೆಯ ಸಿನಿಮಾಗಳನ್ನು ಮಾಡಿದರೆ ನೋಡುವುದಕ್ಕೆ ಯಾರಿಗಿಷ್ಟವಿಲ್ಲ ಹೇಳಿ? ಪ್ರೇಕ್ಷಕರಿಗಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಲು ಯಾರು ಬಯಸುವುದಿಲ್ಲ ಹೇಳಿ? ಸೋಲು-ಗೆಲುವನ್ನು ಲೆಕ್ಕಿಸದೇ ಒಳ್ಳೆಯ ಸಿನಿಮಾಗಳನ್ನು ನಾವು ಕೊಡಬೇಕು ಎಂದಿದ್ದಾರೆ. 

ಸಿನಿಮಾ ಮಾಡುವಾಗ ಕಲಾವಿದರಿಗೆ ನಿರ್ದೇಶಕರು ಕಥೆಯನ್ನು ಸರಿಯಾಗಿ ವಿವರಿಸಬೇಕು. ತೆರೆ ಮೇಲೆ ಹೇಗೆ ಬರುತ್ತದೆ ಎಂಬುದನ್ನೂ ವಿವರಿಸಬೇಕು. ಕಲಾವಿದರಿಗೆ ತಿಳಿಸದೇ ಬದಲಾವಣೆಗಳನ್ನು ಮಾಡಿದರೆ ಅದು ಅವರಿಗೆ ಅವಮಾನ ಮಾಡಿದಂತೆ. ಚಿತ್ರದ ಬಗ್ಗೆ ಸುಳ್ಳು ಭರವಸೆ ಕೊಟ್ಟು ನಟರಿಗೆ ಮೋಸ ಮಾಡಬಾರದು. ಇದು ಸಹಿಸಿಕೊಳ್ಳುವಂತಹ ವಿಚಾರವಲ್ಲ. ಒಳ್ಳೆಯ ರೀತಿಯಲ್ಲಿ ಸಿನಿಮಾ ಮಾಡಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಶಾನ್ವಿ ಯಾಕೆ ಇದ್ದಕ್ಕಿದ್ದಂತೆ ಈ ಪೋಸ್ಟ್ ಹಾಕಿದ್ರು ಅನ್ನೋದು ಇನ್ನೂ ಗೊತ್ತಾಗಿಲ್ಲ. ಯಾಕೆ ಬೇಸರ ವ್ಯಕ್ತಪಡಿಸಿದ್ರು ಎಂಬ ಕುತೂಹಲ ಮೂಡಿಸಿದ್ದಾರೆ.