ಕನ್ನಡದ ಸಾಕಷ್ಟು ನಟನಟಿಯರು ಕನ್ನಡದ ಮಧ್ಯೆ ಇಂಗ್ಲಿಷ್ ಸೇರಿಸಿ ಮಾತನ್ನಾಡುವ ಅಭ್ಯಾಸ ಹೊಂದಿದ್ದಾರೆ. ಆದರೂ ಯಾಕೆ ಕಂಗ್ಲಿಷ್ ಮಾತನ್ನಾಡುವ ಬಗ್ಗೆ ಕೇವಲ ನಟಿ ರಶ್ಮಿಕಾ ಮಂದಣ್ಣ ಅವರನ್ನೇ ಟಾರ್ಗೆಟ್..

ಕನ್ನಡತಿ, ಈ ಮೊದಲು ಕರ್ನಾಟಕ ಕ್ರಶ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಸದ್ಯ ಭಾರತದ ನಂಬರ್ ಒನ್ ನಟಿ ರಶ್ಮಿಕಾ ಮಂದಣ್ಣ ಎಂದರೆ ತಪ್ಪೇನೂ ಇಲ್ಲ ಎನ್ನಬಹುದು. ಸಮಂತಾ ಸದ್ದು-ಗದ್ದಲದಲ್ಲಿ ನಂಬರ್ ಒನ್ ಇದ್ದರೆ, ನಯನತಾರಾ ಸಂಭಾವನೆಯನ್ನು ಯಾವುದೋ ಒಂದು ಚಿತ್ರಕ್ಕೆ ಹೆಚ್ಚು ಪಡೆದಿದ್ದರೆ ಅದು ಮುಖ್ಯವಲ್ಲ. ಆದರೆ, ನಟಿ ರಶ್ಮಿಕಾ ಮಂದಣ್ಣ ಅವರು, ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂಬ ಬೇಧವಿಲ್ಲದೇ, ಸದ್ಯಕ್ಕೆ ದೊಡ್ಡ ದೊಡ್ಡ ಸ್ಟಾರ್‌ಗಳೊಂದಿಗೆ ಚಾನ್ಸ್ ಪಡೆಯುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ 'ಸಿಕಂದರ್' ಸಿನಿಮಾ ಬಿಟ್ಟರೆ ಸದ್ಯ ರಶ್ಮಿಕಾ ಚಿತ್ರ ಸೋಲನ್ನು ಕಂಡಿಲ್ಲ.

ಹೌದು, ಅಲ್ಲು ಅರ್ಜುನ್ ಜೊತೆಗಿನ ಪುಷ್ಪಾ, ಪುಷ್ಪಾ 2 ಸೇರಿದಂತೆ, ವಿಕ್ಕಿ ಕೌಶಲ್ ಜೊತೆಗಿನ 'ಛಾವಾ' ಕೂಡ ಸೂಪರ್ ಹಿಟ್ ದಾಖಲಿಸಿದೆ. ಅದಕ್ಕೂ ಮೊದಲು ಕೂಡ ರಶ್ಮಿಕಾ ಮಂದಣ್ಣ ನಟನೆಯ ಸಾಕಷ್ಟು ಸಿನಿಮಾಗಳು ಭಾರೀ ಗಳಿಕೆ ಕಂಡಿವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಸೋಲು ಬಿಟ್ಟರೆ, ನಟಿ ರಶ್ಮಿಕಾ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಹಾಗಿದ್ದರೆ, ರಶ್ಮಿಕಾ ಈ ಮ್ಯಾಜಿಕ್‌ಗೆ ಕಾರಣವೇನು? ಈ ಬಗ್ಗೆ ಬಲ್ಲವರು ಹಲವು ಕಾರಣಗಳನ್ನು ಮುಂದಿಡುತ್ತಾರೆ.

ಮೊಟ್ಟಮೊದಲನೆಯದಾಗಿ, ನಟಿ ರಶ್ಮಿಕಾ ಅವರ ಚಾರ್ಮಿಂಗ್ ಫೇಸ್. ಮುಖದಲ್ಲಿ ಯಾವತ್ತೂ ನಗುವನ್ನು ಹೊರಸೂಸುವ ಅವರ ಮುಗ್ಧ ಸೌಂದರ್ಯ ಹಾಗೂ ನಿಷ್ಕಲ್ಮಶ ನಗು ಅವರಿಗೆ ದೊಡ್ಡ ಶ್ರೀರಕ್ಷೆ ಎನ್ನಲಾಗುತ್ತದೆ. ಜೊತೆಗೆ, ಕನ್ನಡ ಹೊರತುಪಡಿಸಿ, ಬಾಲಿವುಡ್ ಸೇರಿದಂತೆ ಎಲ್ಲೂ ಕೂಡ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಇಲ್ಲವೇ ಇಲ್ಲ. ಕನ್ನಡ ಸಿನಿಮಾ ಉದ್ಯಮದಲ್ಲಿ ಮಾತ್ರ ನಟಿ ರಶ್ಮಿಕಾ ಮಂದಣ್ಣ ಅವರ 'ಮುರಿದ ನಿಶ್ಚಿತಾರ್ಥ' ಹಾಗೂ 'ಕನ್ನಡ ಮಾತನ್ನಾಡುವಿಲ್ಲ' ಎಂಬ ಸಂಗತಿ ಇಟ್ಟುಕೊಂಡು ಅವರನ್ನು ಟ್ರೋಲ್ ಮಾಡಲಾಗುತ್ತದೆ. ಆದರೆ, ಅದ್ಯಾವುದೂ ಅವರ ಬೆಳಣಿಗೆಗೆ ಅಡ್ಡಿಯಾಗಿಲ್ಲ.

ಕಾರಣ, ನಿಶ್ಚಿತಾರ್ಥವನ್ನು ಮಾಡಿಕೊಂಡಿರುವುದು ಇಬ್ಬರೂ ಸೇರಿ, ಅವರಲ್ಲಿ ಮುರಿದುಕೊಂಡಿರುವುದು ಯಾರು ಎಂಬ ಸಂಗತಿ ಎಷ್ಟೋ ಜನರಿಗೆ ಗೊತ್ತಿಲ್ಲ. ಇಬ್ಬರೂ ಸೇರಿಕೊಂಡು ಆಗಿರುವ ಎಂಗೇಜ್‌ಮೆಂಟ್ ಇಬ್ಬರ ಒಪ್ಪಿಗೆಯ ಮೇರೆಗೇ ಮುರಿದು ಬಿದ್ದರಬಹುದಲ್ಲ! ಅದಕ್ಕೇ ರಶ್ಮಿಕಾ ಮಂದಣ್ಣ ಅವರನ್ನೇ ದೂಷಿಸುವುದು ಯಾಕೆ? ಅಥವಾ, ಎಂಗೇಜ್‌ಮೆಂಟ್ ಮುರಿದುಕೊಂಡಿದ್ದು ರಶ್ಮಿಕಾ ಬದಲು ರಕ್ಷಿತ್ ಅವರೇ ಆಗಿದ್ದಿರಬಹುದು. ಆ ಸಂಗತಿಯನ್ನು ಅವರಿಬ್ಬರೂ ಬಹಿರಂಗ ಪಡಿಸಿಲ್ಲ. ಆದ್ದರಿಂದ, ನಿಶ್ಚಿತಾರ್ಥ ಮುರಿದುಬಿದ್ದಿದ್ದಕ್ಕೆ ರಶ್ಮಿಕಾರನ್ನೇ ದೂಷಿಸುವುದು ತಪ್ಪು. ಅಷ್ಟಕ್ಕೂ ಅದು ಅವರಬ್ಬರ ವೈಯಕ್ತಿಕ ಸಂಗತಿ.

ಇನ್ನು, ಕನ್ನಡ ಮಾತನ್ನಾಡುವ ಬಗ್ಗೆಯೂ ಅಷ್ಟೇ. ಕನ್ನಡದ ಸುದ್ದಿಗೋಷ್ಟಿಯಲ್ಲಿ ಅವರು ಕನ್ನಡಲ್ಲೇ ಹೆಚ್ಚಾಗಿ ಮಾತನ್ನಾಡುತ್ತಾರೆ. ಮಧ್ಯೆ ಮಧ್ಯೆ ಇಂಗ್ಲೀಷ್ ಸೇರಿಸುವ ಅಭ್ಯಾಸ ಸುದೀಪ್ ಹಾಗೂ ರಮ್ಯಾಗೆ ಕೂಡ ಇದೆ. ಅವರಷ್ಟೇ ಅಲ್ಲ, ಕನ್ನಡದ ಸಾಕಷ್ಟು ನಟನಟಿಯರು ಕನ್ನಡದ ಮಧ್ಯೆ ಇಂಗ್ಲಿಷ್ ಸೇರಿಸಿ ಮಾತನ್ನಾಡುವ ಅಭ್ಯಾಸ ಹೊಂದಿದ್ದಾರೆ. ಆದರೂ ಯಾಕೆ ಕಂಗ್ಲಿಷ್ ಮಾತನ್ನಾಡುವ ಬಗ್ಗೆ ಕೇವಲ ನಟಿ ರಶ್ಮಿಕಾ ಮಂದಣ್ಣ ಅವರನ್ನೇ ಟಾರ್ಗೆಟ್ ಮಾಡಲಾಗುತ್ತದೆ? ಅದಕ್ಕೆ ಫ್ಯಾನ್ಸ್ ಹೇಳೋದು- 'ಕೆಲವರಿಗೆ ರಶ್ಮಿಕಾರ ಬೆಳವಣಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ' ಅಂತ..!

ಅದೇನೇ ಇರಲಿ, ಕನ್ನಡತಿಯೊಬ್ಬರು ಇಂದು ನ್ಯಾಷನಲ್ ಕ್ರಶ್‌ ಆಗಿ ಹೆಸರು ಮಾಡಿರೋದು, ಭಾರತದ ನಂಬರ್‌ ಒನ್ ನಟಿ ಪಟ್ಟಕ್ಕೆ ಏರಿರುವುದು ಸಣ್ಣ ಸಾಧನೆಯಂತೂ ಖಂಡಿತ ಅಲ್ಲ. ಈ ಬಗ್ಗೆ ಕನ್ನಡಿಗರು ಹೆಮ್ಮೆ ಪಡಲೇಬೇಕು. ನಟಿ ರಶ್ಮಿಕಾ ಸ್ವತಃ ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಆದರೆ, ಇಡೀ ಭಾರತ ಅವರನ್ನು ಕನ್ನಡತಿ ಎಂದು, ಜಗತ್ತು ಭಾರತದ ನಟಿ ಎಂದು ಗುರುತಿಸುತ್ತದೆ. ಅದು ಭಾರತೀಯರಿಗೆ, ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಮಾತನ್ನಾಡುವಾಗ ಇನ್ನೂ ಸ್ವಲ್ಪ ಎಚ್ಚರಿಕೆಯನ್ನು ಅಭ್ಯಾಸ ಮಾಡಿಕೊಂಡರೆ, ನಟಿ ರಶ್ಮಿಕಾರನ್ನು ಸದ್ಯ ಮೀರಿಸುವ ನಟಿ ಮತ್ತೊಬ್ಬರಿಲ್ಲ ಎನ್ನಬಹುದು. ನೀವೇನಂತೀರಾ?