ರಿಷಭ್ ಶೆಟ್ಟಿ ನಿರ್ದೇಶನದ 'ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾವನ್ನು ಒಮ್ಮೆ ನೋಡಿ. ಅದೊಂದು ಫೆಂಟಾಸ್ಟಿಕ್ ಸಿನಿಮಾ. ಇಂದು ಆ ಸಿನಿಮಾ ಮತ್ತೆ ರಿಲೀಸ್ ಆದರೆ ಆ ಸಿನಿಮಾ ಬಿಗ್ ಹಿಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಲೂಸಿಯಾ ಕೂಡ ನಮ್ಮ ಕನ್ನಡ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು.
ಅದೊಂದು ಸಂದರ್ಶನದಲ್ಲಿ ಯಶ್ (Rocking Star Yash) ಅವರು ಕಾಂತಾರ (Kantara Movie) ಸಿನಿಮಾದ ಬಗ್ಗೆ ಹೇಳಿರುವ ಮಾತು ಸಖತ್ ವೈರಲ್ ಆಗ್ತಿದೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನ್ನಾಡುತ್ತಿದ್ದ ನಟ ಯಶ್ ಅವರಿಗೆ ನಿರೂಪಕರು ಕಾಂತಾರ ಸಿನಿಮಾ ಬಗ್ಗೆ ಹೇಳುತ್ತ 'ಅದು ನಿಮ್ಮ ಸಿನಿಮಾ ಅಲ್ಲ' ಎನ್ನುತ್ತಿದ್ದಂತೆ, ಮುಂದಕ್ಕೆ ಮಾತು ತಡೆದ ನಟ ಯಶ್ ಅವರು 'ಅದು ಕೂಡ ನನ್ನ ಸಿನಿಮಾವೇ' ಎಂದಿದ್ದರು. ಅದನ್ನು ಮತ್ತೊಂದು ಸಂದರ್ಶನದಲ್ಲಿ ದಾಖಲಿಸಿದ ಆ ಸಂದರ್ಶಕಿ ಹಾಗೂ ಯಶ್ ಅವರಿಬ್ಬರ ಮಾತುಕತೆ ಇಲ್ಲಿದೆ ನೋಡಿ..
ಯಶ್ ಅವರನ್ನು ಸಂದರ್ಶನ ಮಾಡುತ್ತಿದ್ದ ನಿರೂಪಕಿ 'ಕಾಂತಾರ' ಸಿನಿಮಾ ಕೂಡ ನನ್ನದೇ ಅಂತ ಯಶ್ ಮಾತನ್ನು ಉಲ್ಲೇಖಿಸಿ 'ನನಗೆ ನಿಮ್ಮ ಮಾತು ತುಂಬಾ ಇಷ್ಟವಾಯ್ತು' ಎಂದು ಹೇಳಿದ್ದಾರೆ. ಜೊತೆಗೆ, ಈ ನಿಟ್ಟಿನಲ್ಲಿ ಯಶ್ ಮಾತನ್ನು ಉಲ್ಲೇಖಿಸಿದ ಬಳಿಕ ನಟ ಯಶ್ ಅವರನ್ನು ಮಾತನ್ನಾಡಲು ಬಿಟ್ಟಿದ್ದಾರೆ. ಆಗ ರಾಕಿಂಗ್ ಸ್ಟಾರ್ ಯಶ್ 'ಒಂದು ಕೆಜಿಎಫ್ ಸಿನಿಮಾ ಇಡೀ ಕನ್ನಡ ಸಿನಿಮಾ ಉದ್ಯಮವನ್ನು ಚೇಂಜ್ ಮಾಡಲು ಸಾಧ್ಯವಿಲ್ಲ. ಕೆಜಿಎಫ್ ಸಿನಿಮಾದಲ್ಲಿ ನಮ್ಮ ಸಿನಿಮಾರಂಗದ ಉಳಿದ ಬಹಳಷ್ಟು ಜನರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅದು ನಮ್ಮದೇ ಉದ್ಯಮ' ಎಂದಿದ್ದಾರೆ.
ಮುಂದುವರೆದ ನಟ ಯಶ್ ಅವರು 'ರಿಷಬ್ ಶೆಟ್ಟಿ (Rishab Shetty) ಸಿನಿಮಾದಲ್ಲಿ ಕೂಡ ನಮ್ಮ ಉದ್ಯಮದ ಬಹಳಷ್ಟು ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ನಟ-ನಿರ್ದೇಶಕ ರಿಷಬ್ ಅವರು ಇದಕ್ಕೂ ಮೊದಲು ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅವರು ಕಾಂತಾರ ಸಿನಿಮಾಕ್ಕೂ ಮೊದಲು ಕೂಡ ಶ್ರೇಷ್ಠ ನಿರ್ದೇಶಕರೇ ಅಗಿದ್ದಾರೆ. ಅವರಿಗೆ ಎಲ್ಲ ಅರ್ಹತೆ ಹಾಗೂ ಯೋಗ್ಯತೆ ಇದೆ. ಕಾಂತಾರ ಸಿನಿಮಾ ಹಿಟ್ ಆದಾಗ ನನಗೆ ತುಂಬಾ ಖುಷಿಯಾಗಿದೆ. ಅದು ಕೂಡ ನನ್ನದೇ ಸಿನಿಮಾ' ಎಂದಿದ್ದಾರೆ.
ರಿಷಭ್ ಶೆಟ್ಟಿ ನಿರ್ದೇಶನದ 'ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾವನ್ನು ಒಮ್ಮೆ ನೋಡಿ. ಅದೊಂದು ಫೆಂಟಾಸ್ಟಿಕ್ ಸಿನಿಮಾ. ಇಂದು ಆ ಸಿನಿಮಾ ಮತ್ತೆ ರಿಲೀಸ್ ಆದರೆ ಆ ಸಿನಿಮಾ ಬಿಗ್ ಹಿಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಲೂಸಿಯಾ ಕೂಡ ನಮ್ಮ ಕನ್ನಡ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. 'ಗರುಡ ಗಮನ ವೃಷಭ ವಾಹನ' ಸಿನಿಮಾ ಕೂಡ ಉತ್ತಮ ಸಿನಿಮಾ. ನನಗೆ ಅವೆಲ್ಲವೂ ಇಷ್ಟ ಹಾಗೂ ನನಗೆ ಅವೆಲ್ಲವುಗಳ ಬಗ್ಗೆ ಅರಿವಿದೆ.
ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ರೀತಿಯಲ್ಲಿ ಬಂದ ಸಿನಿಮಾ ಹಲವಾರು ಇದೆ. ಇಲ್ಲಿ ಹಲವು ನಟರು ಇದ್ದಾರೆ, ನಿರ್ದೇಶಕರಿದ್ದಾರೆ, ಸಿನಿಮಾಗಳು ಗ್ರೇಟ್ ಎನ್ನಿಸಿವೆ. ಅದರಲ್ಲೂ ಕೆಜಿಎಫ್ ಸಿನಿಮಾ ಕೂಡ ಒಂದು. ಇದು ಬೇರೆ ಸಿನಿಮಾಗಳಿಗಿಂತ ಹೆಚ್ಚು ರೀಚ್ ಆಗಿರಬಹುದು. ದೇಶದ ಎಲ್ಲಾ ಕಡೆ ನಾನು ಹೋದಾಗ ಜನರು ನನ್ನನ್ನು ಈ ಸಿನಿಮಾ ಹೆಸರು ಹೇಳಿ ಜನರು ನನ್ನನ್ನು ಪ್ರೀತಿಸುತ್ತಾರೆ. ನನ್ನನ್ನು ಕನ್ನಡಿಗರು ಜೀರೋದಿಂದ ಬೆಳೆಸಿದ್ದಾರೆ. ನನ್ನನ್ನು ಈ ಸಿನಿಮಾ ಮೂಲಕ ಜನರೇ ದೇಶದ ಎಲ್ಲಾ ಕಡೆ ಕಳಿಸಿದ್ದಾರೆ. ಈ ಸಿನಿಮಾದಲ್ಲಿ ನಾನು 'ಪ್ಲೇ' ಮಾಡಿದ್ದು ಕೂಡ ನನ್ನ ಸಿನಿಮಾ ಉದ್ಯಮದ ಜನರಿಂದಲೇ ಆಗಿದೆ' ಎಂದಿದ್ದಾರೆ ನಟ ಯಶ್.
