ಕಾಂತಾರ ಪ್ರೀಕ್ವೆಲ್ ಬಗ್ಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತ ಹಾಗೂ ಪ್ರಪಂಚದ ಹಲವು ಕಡೆಗಳಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ. ಕಾರಣ, ಈ ಮೊದಲು ತೆರೆಗೆ ಬಂದಿದ್ದ ಕಾಂತಾರ ಸಿನಿಮಾ ಹುಟ್ಟಿಸಿರುವ ಭರವಸೆ ಹಾಗೂ ಕ್ರೇಜ್.

ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಕಾಂತಾರ ಪ್ರೀಕ್ವೆಲ್ (Kantara Prequel) ಸಿನಿಮಾ ಕೆಲಸದಲ್ಲಿ ಸದ್ಯ ಬ್ಯುಸಿ ಆಗಿರೋದು ಗೊತ್ತೇ ಇದೆ. ಸದ್ಯ ಕಾಂತಾರ ಶೂಟಿಂಗ್ ಹಲವು ಕಡೆ ನಡೆದಿದ್ದು, ಇನ್ನೂ ಕೆಲವು ಕಡೆ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಕಾಂತಾರ ಸಿನಿಮಾ ಚಿತ್ರೀಕರಣದ ಮಧ್ಯೆ ಚಿತ್ರತಂಡಕ್ಕೆ ಬಹಳಷ್ಟು ಅಡ್ಡಿ-ಆತಂಕಗಳು ಎದುರಾಗಿವೆ. ಆದರೂ ಕೂಡ ಅವೆಲ್ಲವೂ ವೃತ್ತಿಜೀವನದ ಒಂದು ಭಾಗ ಎನ್ನುವ ಮೆಚ್ಯೂರಿಟಿ ಹೊಂದಿರುವ ರಿಷಬ್ ಶೆಟ್ಟಿಯವರು ತಮ್ಮ ಕೆಲಸ ಮುಂದುವರೆಸುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿಯವರ ಸಂಭಾವನೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ.

ಹಾಗಿದ್ದರೆ ಅದೇನು? ಹೌದು, ರಿಷಬ್ ಶೆಟ್ಟಿಯವರು ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟ ಹಾಗೂ ನಿರ್ದೇಶಕ ಆಗಿರೋದು ಗೊತ್ತೇ ಇದೆ. ಈ ಮೊದಲು ಅವರ ಸಂಭಾವನೆ ಬಗ್ಗೆ ಯಾರ ಕಣ್ಣೂ ಬಿದ್ದಿರಲಿಲ್ಲ. ಆದರೆ ಈಗ, ಕಾಂತಾರ ಬಳಿಕ ಅವರ ಸಂಭಾವನೆ ಎಷ್ಟಿರಬಹುದು, ಕಾಂತಾರ ಪ್ರೀಕ್ವೆಲ್‌ಗೆ ಅದೆಷ್ಟು ಚಾರ್ಜ್ ಮಾಡಿರಬಹುದು ಎಂಬ ಬಗ್ಗೆ ಸಹಜವಾಗಿಯೇ ಚರ್ಚೆ ನಡೆಯುತ್ತಿತ್ತು. ಅದಕ್ಕೆ ಉತ್ತರವಾಗಿ ಇದೀಗ ಒಂದು ನಂಬರ್ ಸಿಕ್ಕಿದೆ. ಅದೇ 'ಕಾಂತಾರ 1' ರಿಷಬ್ ಶೆಟ್ಟಿ ಸಂಭಾವನೆ ಎನ್ನಲಾಗುತ್ತಿದೆ. ಹಾಗಿದ್ದರೆ ಅದು ಎಷ್ಟು?

ಸಿಕ್ಕ ಮಾಹಿತಿ ಪ್ರಕಾರ, 2022ರಲ್ಲಿ ತೆರೆಗೆ ಬಂದಿದ್ದ ಕಾಂತಾರ ಚಿತ್ರದ ಸಂಭಾವನೆಗಿಂತ ಈ ಪ್ರೀಕ್ವೆಲ್‌ಗೆ ರಿಷಬ್ ಶೆಟ್ಟಿಯವರು ತುಂಬಾ ಹೆಚ್ಚಿನ ಸಂಭಾವನೆ (Remuneration) ಪಡೆದಿದ್ದಾರೆ. ಕಾಂತಾರ ಸಿನಿಮಾದ 2400 ಪಟ್ಟು ಹೆಚ್ಚು (2400%) ಸಂಭಾವನೆ ಕಾಂತಾರ ಪ್ರೀಕ್ವೆಲ್‌ಗೆ ಅವರಿಗೆ ಸಿಕ್ಕಿದೆ ಎಂಬ ಮಾಹಿತಿ ಇದೆ. ಅದರ ಪ್ರಕಾರ, ಮುಂಬರುವ ಕಾಂತಾರ ಭಾಗ-1 ಸಿನಿಮಾಗೆ ಅವರಿಗೆ 4 ಕೋಟಿಗಿಂತಲೂ ಹೆಚ್ಚಿನ ಸಂಭಾವನೆ ದೊರಕಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ರಿಷಬ್ ಶೆಟ್ಟಿಯವರಾಗಲೀ ಅಥವಾ ಕೊಟ್ಟಿರುವ ನಿರ್ಮಾಣ ಸಂಸ್ಥೆಯಾಗಲೀ ಕನ್ಫರ್ಮ್ ಮಾಡಿಲ್ಲ. ಆದರೆ, ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರೋದಂತೂ ಸತ್ಯ.

ಇನ್ನು, ಕಾಂತಾರ ಪ್ರೀಕ್ವೆಲ್ ಬಗ್ಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತ ಹಾಗೂ ಪ್ರಪಂಚದ ಹಲವು ಕಡೆಗಳಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ. ಕಾರಣ, ಈ ಮೊದಲು ತೆರೆಗೆ ಬಂದಿದ್ದ ಕಾಂತಾರ ಸಿನಿಮಾ ಹುಟ್ಟಿಸಿರುವ ಭರವಸೆ ಹಾಗೂ ಕ್ರೇಜ್. ಸದ್ಯ ಶೂಟಿಂಗ್ ಹಂತದಲ್ಲಿರುವ ಕಾಂತಾರ ಪ್ರೀಕ್ವೆಲ್‌ಗೆ ಕೆಲವು ಅಡೆತಡೆಗಳು ಬಂದಾಗ, ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರ್ ಹಾಗೂ ಚಿತ್ರತಂಡ ಅದನ್ನು ಧೈರ್ಯವಾಗಿ ಎದುರಿಸಿದರೂ 'ಕಾಂತಾರ' ಪ್ರಿಯರು ಬಹಳಷ್ಟು ಅತಂಕಕ್ಕೆ ಒಳಗಾಗಿದ್ದಾರೆ. ಆದರೆ, ಸಿನಿಮಾ ಶೂಟಿಂಗ್ ಅಂದುಕೊಂಡ ಸಮಯಕ್ಕೇ ಮುಗಿದಿದ್ದು, ಈ ಮೊದಲು ಹೇಳಿದಂತೆ ಬಿಡುಗಡೆ ಕೂಡ ಫಿಕ್ಸ್ ಆಗಿದೆ.

ಕಳೆದ ವರ್ಷವೇ 'ಕಾಂತಾರ 1' ಚಿತ್ರವನ್ನು 02 ಅಕ್ಟೋಬರ್ 2025 ರಂದು ರಿಲೀಸ್ ಮಾಡಲಾಗುವುದು ಎಂದಿತ್ತು ಚಿತ್ರತಂಡ. ಅದರಂತೆ, ಈಗಲೂ ಅದೇ ಡೇಟ್‌ಗೆ ಈ ಸಿನಿಮಾ ತೆರೆಗೆ ಬರಲಿದೆ ಎಂದು ಇತ್ತೀಚೆಗೆ ನಡೆದ ರಿಷಬ್ ಶೆಟ್ಟಿ ಹುಟ್ಟುಹಬ್ಬದ ಸಮಯದಲ್ಲೂ ಘೋಷಣೆ ಮಾಡಲಾಗಿದೆ. ಶೂಟಿಂಗ್ ಸಮಯದಲ್ಲಿ ಚಿತ್ರತಂಡಕ್ಕೆ ನಾನಾ ಅಡ್ಡಿಗಳು ಎದುರಾದರೂ, ಎಲ್ಲ ಸಮಸ್ಯೆಗಳ ನಡುವೆಯೂ ರಿಷಬ್ ಅವರು ಅಂದುಕೊಂಡ ಸಮಯಕ್ಕೆ ಶೂಟಿಂಗ್ ಮುಗಿಸಿದ್ದಾರೆ.

ಸದ್ಯ ರಿಲೀಸ್ ಆಗಿರೋ ಪೋಸ್ಟರ್ ನಲ್ಲಿ ರಿಷಬ್ ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 'ದಂತ ಕಥೆಯ ಮುನ್ನುಡಿ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ..' ಅಂತ ಬರೆಯಲಾಗಿದ್ದು, ಜೊತೆಗೆ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಕನ್ನಡ ಸೇರಿದಂತೆ, 6 ಭಾಷೆಗಳಲ್ಲಿ 'ಕಾಂತಾರ 1' ಸಿನಿಮಾ ಸಿದ್ಧವಾಗಿದ್ದು, ಇಂಗ್ಲಿಷ್ ಭಾಷೆಯಲ್ಲಿ ಕೂಡಾ ರಿಲೀಸ್ ಆಗಲಿದೆ. ಒಟ್ಟಾರೆಯಾಗಿ, ಕಾಂತಾರ ಚಾಪ್ಟರ್ 1 ಮೇಲೆ ಫ್ಯಾನ್ಸ್ ಗೆ ನೂರೆಂಟು ನಿರೀಕ್ಷೆ ಇವೆ. ಆ ನಿರೀಕ್ಷೆಗೆ ತಕ್ಕ ಸಿನಿಮಾ ಕೊಡ್ತೀನಿ ಅನ್ನೋ ಸೂಚನೆ ಕೊಟ್ಟಿದ್ದಾರೆ 'ಕಾಂತಾರ ಭಾಗ-1' ಸೂತ್ರಧಾರಿ ರಿಷಬ್ ಶೆಟ್ಟಿ.