ನಿರ್ಮಾಪಕರು, ನಿರ್ದೇಶಕರು, ಇಂಡಸ್ಟ್ರಿ, ನೆಪೊಟಿಸಂ ಬಗ್ಗೆ ಮಾತನಾಡುತ್ತಾ ದಿನವೈ ಹೆಡ್‌ಲೈನ್ ಸುದ್ದಿಯಾಗುತ್ತಿರುವ ಕಂಗನಾ ಬಗ್ಗೆ ಅನುರಾಗ್ ಕಷ್ಯಪ್ ಸರಣಿ ಟ್ವೀಟ್ ಮಾಡಿದ್ದಾರೆ.

ನನಗೆ ಹೊಸ ಕಂಗನಾಳನ್ನು ಗೊತ್ತಿಲ್ಲ. ಆಕೆಯ ಸ್ನೇಹಿತರು, ಆಪ್ತರಿಗೂ ಆಕೆ ಏನು ಮಾಡುತ್ತಿದ್ದಾಳೆಂದು ತಿಳಿಯುತ್ತಿಲ್ಲ. ಈಗ ಆಕೆಯ ಆಪ್ತರ್ಯಾರೂ ಆಕೆ ಜೊತೆಗಿಲ್ಲ ಎಂದಿದ್ದಾರೆ.

ಸುಶಾಂತ್‌ ಸಾವಿಗೆ ನ್ಯಾಯ ಸಿಗದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿಸುವೆ: ಕಂಗನಾ

ಬಾಲಿವುಡ್ ನೆಪೊಟಿಸಂ ಬಗ್ಗೆ ತೀವ್ರ ಚರ್ಚೆಗಳಾಗುತ್ತಿರುವ ಸಂದರ್ಭ ಅನುರಾಗ್ ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಕಂಗನಾ ವಿವಾದಾತ್ಮಕವಾಗಿ ಮಾತನಾಡಿದ ಅವರ ಮಣಿಕರ್ಣಿಕಾ ಸಿನಿಮಾ ಹಳೆಯ ಇಂಟರ್‌ವ್ಯೂ ತುಣುಕೊಂದನ್ನು ಶೇರ್ ಮಾಡಿದ್ದಾರೆ.

ನಿನ್ನೆ ಕಂಗನಾಳ ಇಂಟರ್‌ ವ್ಯೂ ನೋಡುತ್ತಿದ್ದೆ. ಒದಂದು ಕಾಲದಲ್ಲಿ ಆಕೆ ನನ್ನ ಒಳ್ಳೆಯ ಸ್ನೇಹಿತೆಯಾಗಿದ್ದಳು. ನನ್ನ ಸಿನಿಮಾಗೆ ಬರುವ ಮೂಲಕ ಪ್ರೋತ್ಸಾಹಿಸುತ್ತಿದ್ದಳು. ಆದರೆ ಈ ಹೊಸ ಕಂಗನಾಳನ್ನು ನನಗೆ ಗೊತ್ತಿಲ್ಲ. ಮಣಿಕರ್ಣಿಕ ಸಿನಿಮಾ ರಿಲೀಸ್‌ ನಂತರದಲ್ಲಿಯೇ ನಡೆದ ಈ ಇಂಟರ್‌ವ್ಯೂ ನಾನು ನೋಡಿರಲಿಲ್ಲ ಎಂದಿದ್ದಾರೆ.

ಇದ್ದಕ್ಕಿದ್ದಂತೆ ಕಂಗನಾ ಹಾಡಿ ಹೊಗಳಿದ ಮಾಜಿ ಪ್ರೇಮಿ ಸುಮನ್, ಕಾರಣ!

ಯಶಸ್ಸಿನ ಅಮಲು ಹಾಗೂ ಚೈತನ್ಯ ಒಳಗಿನವರಾಗಲಿ ಅಥವಾ ಹೊರಗಿನವರಾಗಲಿ ಎಲ್ಲರನ್ನೂ ಸಮಾನವಾಗಿ ಆಕರ್ಷಿಸುತ್ತದೆ. 'ನನ್ನಿಂದ ಕಲಿಯಿರಿ, ನನ್ನ ಹಾಗೆ ಆಗಿ' ಎನ್ನುವುದನ್ನು ನಾನು ಆಕೆಯಿಂದ 2015ಕ್ಕೂ ಮುಂಚೆ ಕೇಳಿರಲಿಲ್ಲ ಎಂದಿದ್ದಾರೆ.

ಕಂಗನಾಳಿಗೆ ಆಕೆ ಏನೆಂಬುದನ್ನು ತೋರಿಸದೆ ನೀವು ಆಕೆಯನ್ನು ತಲೆ ಮೇಲೆ ಕುಳ್ಳಿರಿಸಿ ಆಕೆಯನ್ನುಮುಗಿಸುತ್ತಿದ್ದೀರೆಂದೇ ಅರ್ಥ. ಆಕೆ ಮಾಡುತ್ತಿರುವುದಾದರೂ ಏನು? ಆಕೆ ನಾನ್ಸೆನ್ಸ್‌ ಮಾತನಾಡುತ್ತಿದ್ದಾಳೆ. ನನಗೆ ಮಾತ್ರ ಈ ಕಂಗನಾಳನ್ನು ಸಹಿಸಲಾಗುತ್ತಿಲ್ಲ ಎಂದಿದ್ದಾರೆ.

ಫ್ಯಾಮಿಲಿ ಜೊತೆ ಮನಾಲಿಯಲ್ಲಿ ಮಸ್ತಿ ಮಾಡುತ್ತಿರುವ ಕಂಗನಾ

ಕಂಗನಾ ಇನ್ನು ಸಾಕು. ಇನ್ನೂ ಇದು ನಿನ್ನ ಕುಟುಂಬಸ್ಥರು, ಸ್ನೇಹಿತರಿಗೆ ಕಾಣುತ್ತಿಲ್ಲ ಎಂದಾದರೆ ಅವರು ಎಲ್ಲರೂ ನಿನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಅವರ್ಯಾರು ನಿನ್ನವರಲ್ಲ. ಉಳಿದದ್ದು ನಿನ್ನಿಚ್ಛೆ. ನನ್ನನ್ನೂ ಬೈಯಬೇಕೆಂದರೆ ಮುಂದುವರಿಸು ಎಂದು ಬರೆದಿದ್ದಾರೆ.